ಕೊಚ್ಚಿ: ಕೇರಳ ಸರ್ಕಾರದ ನೋಡಲ್ ಏಜೆನ್ಸಿ ಕೇರಳ ಸ್ಟಾರ್ಟ್ಅಪ್ ಮಿಷನ್ (ಕೆಎಸ್‌ಯುಎಂ), ಕೊರೊನಾ ವೈರಸ್ ಹರಡುವಿಕೆಯ ಬಗ್ಗೆ ಜನಜಾಗೃತಿ ಮೂಡಿಸಲು ಅಸಿಮೊವ್ ಹೆಸರಿನ ಎರಡು ರೋಬೋಟ್‌ಗಳನ್ನು ಪರಿಚಯಿಸಿದೆ.
ಕೆಎಸ್‌ಯುಎಂನ ಇಂಟಿಗ್ರೇಟೆಡ್ ಸ್ಟಾರ್ಟ್ಅಪ್ ನಡಿ ರೋಬೋ ನೈರ್ಮಲ್ಯಕ್ಕಾಗಿ ಮುಖಗವಸು, ಸ್ಯಾನಿಟೈಜರ್ ಮತ್ತು ಕರವಸ್ತ್ರವನ್ನು ವಿತರಿಸುತ್ತಿದೆ.
ಕೊರೊನಾ ವೈರಸ್ ಅನ್ನು ಸಾಂಕ್ರಾಮಿಕ ರೋಗ ವಿಶ್ವ ಆರೋಗ್ಯ ಸಂಸ್ಥೆ ಘೋಷಿಸಿದೆ. ಈ ಬಗ್ಗೆ ಜನಜಾಗೃತಿ ಮೂಡಿಸಲು ಕೇರಳ ನೋಡಲ್ ಕೇಂದ್ರ ಅಭಿವೃದ್ಧಿಪಡಿಸಿರುವ ರೋಬೋಗಳು ಕೊರೊನಾ ವೈರಸ್ ಬಗ್ಗೆ ಕೇಳಲಾದ ಪ್ರಶ್ನೆಗಳಿಗೆ ಉತ್ತರಿಸುತ್ತಿವೆ.
ಈ ರೋಬೋಟ್‌ಗಳು ಕೈ ತೊಳೆದುಕೊಳ್ಳುವುದು ಹೇಗೆ? ಮಾಸ್ಕ್ ಬಳಸುವುದು ಹೇಗೆ? ಸ್ಯಾನಿಟೈಸರ್, ನ್ಯಾಪ್ಕಿನ್ ಬಳಸೋದು ಹೇಗೆ? ನಮ್ಮನ್ನು ನಾವು ಶುಭ್ರವಾಗಿಟ್ಟುಕೊಳ್ಳೋದು ಹೇಗೆ? ಎಂಬುದನ್ನು ಜನರಿಗೆ ಹೇಳಿಕೊಡುತ್ತಿದೆ.
ರೋಬೋಟ್ ತನ್ನಲ್ಲಿರುವ ಫೇಸ್ ಮಾಸ್ಕ್, ಸ್ಯಾನಿಟೈಸರ್ ಹಾಗೂ ನ್ಯಾಪ್ಕಿನ್‌ಗಳನ್ನು ಜನರಿಗೆ ಉಚಿತವಾಗಿ ಹಂಚುತ್ತಿದೆ. ವಿಶ್ವ ಆರೋಗ್ಯ ಸಂಸ್ಥೆಯ ಅಭಿಯಾನದ ವಿವರವನ್ನೂ ಸಹ ರೋಬೋಟ್ ವಿವರಿಸುತ್ತವೆ.