ETV Bharat / business

ಮಂಗಳೂರಿನಲ್ಲಿ ಕಾಗ್ನಿಜಂಟ್​ ಐಟಿ ಜಾಲ ವಿಸ್ತರಣೆ: ಸಾವಿರಾರು ಉದ್ಯೋಗಿಗಳ ನೇಮಕ

author img

By

Published : Feb 7, 2020, 10:57 PM IST

ಮಂಗಳೂರಿನಲ್ಲಿ ಅಸ್ತಿತ್ವದಲ್ಲಿರುವ ಕೇಂದ್ರದಿಂದ ಕಾಗ್ನಿಜೆಂಟ್ ಆಸ್ತಿ ತೆರಿಗೆಗಳು, ಸಂಶೋಧನೆ ಮತ್ತು ತನಿಖೆಗಳು, ಆಸ್ತಿ ದತ್ತಾಂಶಗಳ ಸಂಗ್ರಹ ಮತ್ತು ಜಿಯೋಸ್ಪೇಷಿಯಲ್ ಡೇಟಾದ ನಿರ್ವಹಣೆ, ಅಡಮಾನ ಸಂಸ್ಕರಣೆ, ಉದ್ಯಮ ಅನ್ವಯಿಕೆಗಳು, ವ್ಯವಹಾರ ಪ್ರಕ್ರಿಯೆ ಸೇರಿದಂತೆ ಇತರ ಸೇವೆಗಳನ್ನು ಒದಗಿಸುತ್ತದೆ.

Cognizant
ಕಾಗ್ನಿಜಂಟ್​

ಬೆಂಗಳೂರು: ಐಟಿ ಸೇವೆಗಳ ಕಂಪನಿ ಕಾಗ್ನಿಜಂಟ್ ಇಂದು ಮಂಗಳೂರಿನಲ್ಲಿ ಹೊಸ ಸೌಲಭ್ಯ ಕೇಂದ್ರ ತೆರೆಯುವ ಮೂಲಕ ಕರ್ನಾಟಕದ ಮೂರನೇ ನಗರಕ್ಕೆ ತನ್ನ ಅಸ್ತಿತ್ವವನ್ನು ವಿಸ್ತರಿಸಿಕೊಂಡಿದೆ.

1,00,000 ಚದರ ಅಡಿ ಸೌಲಭ್ಯದ ನೂತನ ಸೆಂಟರ್​, 1,100ಕ್ಕೂ ಹೆಚ್ಚು ಉದ್ಯೋಗಿಗಳಿಗೆ ಅವಕಾಶ ಕಲ್ಪಿಸಲಿದೆ. ಕೊರ್ಲಾಜಿಕ್ ಗ್ಲೋಬಲ್ ಸರ್ವೀಸಸ್ ಪ್ರೈವೇಟ್ ಲಿಮಿಟೆಡ್ ಅನ್ನು ಸ್ವಾಧೀನಪಡಿಸಿಕೊಂಡ ಬಳಿಕ 2011ರಿಂದ ಕಾಗ್ನಿಜೆಂಟ್ ಮಂಗಳೂರಿನಲ್ಲಿ ತನ್ನ ಐಟಿ ಸೇವೆಗಳನ್ನು ನಡೆಸುತ್ತಿದೆ.

ಕಂಪನಿಯು ಪ್ರಸ್ತುತ ಮಂಗಳೂರಿನಲ್ಲಿ 600ಕ್ಕೂ ಹೆಚ್ಚು ವೃತ್ತಿಪರರನ್ನು ನೇಮಿಸಿಕೊಂಡಿದೆ. ನೂತನ ಸೆಂಟರ್ ವಿಸ್ತರಣೆಯಿಂದ ಹೆಚ್ಚುವರಿಯಾಗಿ 1,100 ಜನರಿಗೆ ಉದ್ಯೋಗದ ಅವಕಾಶಗಳು ದೊರೆಯಲಿವೆ. ಕರ್ನಾಟಕದಲ್ಲಿ ಕಾಗ್ನಿಜಂಟ್ ಬೆಂಗಳೂರು ಮತ್ತು ಮೈಸೂರಿನಲ್ಲಿಯೂ ಸಹ ಕಾರ್ಯಾಚರಣೆ ನಡೆಸುತ್ತಿದೆ. ಬೆಂಗಳೂರಿನಲ್ಲಿ 28,000ಕ್ಕೂ ಹೆಚ್ಚು ಮತ್ತು ಮೈಸೂರಿನಲ್ಲಿ ಸುಮಾರು 700 ವೃತ್ತಿಪರರನ್ನು ಹೊಂದಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.