ನವದೆಹಲಿ: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ಸಿಎಂಎಸ್ ಇನ್ಫಾರ್ಮೇಷನ್ ಸಿಸ್ಟಮ್ಅನ್ನು ಮಾರ್ಚ್ ವೇಳೆಗೆ 3,000 ಎಟಿಎಂಗಳಲ್ಲಿ ಅಳವಡಿಸುವ ಹೊರಗುತ್ತಿಗೆ ನೀಡಿದೆ.
ಹೊರಗುತ್ತಿಗೆ ಮಾದರಿ ಅಥವಾ ಬ್ರೌನ್ ಲೆವೆಲ್ ಎಟಿಎಂ (ಬಿಎಲ್‌ಎ) ಸೇವೆಯನ್ನು ಬ್ಯಾಂಕ್ ಪರವಾಗಿ ಸೇವಾ ಪೂರೈಕೆದಾರರು ನಿರ್ವಹಿಸುತ್ತಾರೆ. ಈ ಎಟಿಎಂಗಳಲ್ಲಿ ಹೆಚ್ಚಿನವು ಆಫ್‌ಸೈಟ್ ಎಟಿಎಂಗಳಾಗಿವೆ.
3,000 ಎಟಿಎಂಗಳ ನಿಯೋಜನೆಗೆ ಎಸ್‌ಎಂಐನಿಂದ ಸಿಎಂಎಸ್ ಆರ್ಡರ್ ಸ್ವೀಕರಿಸಲಾಗಿದೆ. ನಿಗದಿತ ಅವಧಿಯ ಭಾಗವಾಗಿ ಸಿಎಂಎಸ್ ಸೈಟ್ ಆಯ್ಕೆ ಮಾಡಲಾಗುತ್ತಿದ್ದು, ಎಟಿಎಂಗಳಿಗೆ ನಿಯೋಜಿಸಿ ನಗದು ನಿರ್ವಹಣಾ ಸೇವೆಗಳನ್ನು ಒದಗಿಸಲಾಗುತ್ತದೆ. ಇದರ ಜೊತೆಗೆ ನಿಯಮಿತ ನಿರ್ವಹಣೆ ಮತ್ತು ಎಟಿಎಂ ನಿರ್ವಹಣೆಯೂ ಸೇರಿದೆ ಎಂದು ಸಿಎಂಎಸ್ ಇನ್ಫಾರ್ಮೆಷನ್ ಸಿಸ್ಟಮ್ ಅಧ್ಯಕ್ಷ ಮಂಜುನಾಥ್ ರಾವ್ ತಿಳಿಸಿದರು.
ಇದನ್ನೂ ಓದಿ: ಲಸಿಕೆಗಳ ಮಹತ್ವದ ಬಗ್ಗೆ ಸಂಪೂರ್ಣ ಅರಿವಿದೆ: ಭಾರತ್ ಬಯೋಟೆಕ್-ಸೆರಂನಿಂದ ಜಂಟಿ ಹೇಳಿಕೆ!
ಸಿಎಂಎಸ್ ಮಾಹಿತಿ ವ್ಯವಸ್ಥೆಗಳಡಿ ಒಟ್ಟು ಬಿಎಲ್‌ಎಗಳ ಸಂಖ್ಯೆ 5,000ಕ್ಕೆ ಏರಿಕೆ ಆಗಲಿದೆ. ಹೊಸ ಎಟಿಎಂಗಳನ್ನು ಸ್ಥಾಪಿಸಲು ಕಂಪನಿಯು 200 ಕೋಟಿ ರೂ. ಹೂಡಿಕೆ ಮಾಡಲಿದೆ. ಈ ಸೈಟ್‌ಗಳ ನಿರ್ವಹಣೆಗೆ 2,000 ಉದ್ಯೋಗಿಗಳನ್ನು ನೇಮಿಸಿಕೊಳ್ಳಲಿದೆ ಎಂದು ಹೇಳಿದರು.
ಈ ಒಪ್ಪಂದವು ಏಳು ವರ್ಷಗಳವರೆಗೆ ಮಾನ್ಯವಾಗಿರುತ್ತದೆ. ಪರಸ್ಪರ ಒಪ್ಪಂದದ ಮೇಲೆ ಮೂರು ವರ್ಷಗಳವರೆಗೆ ವಿಸ್ತರಿಸಬಹುದು. ಮುಂದಿನ ಐದು ವರ್ಷಗಳಲ್ಲಿ ವ್ಯವಹಾರದ ಲಾಭದಾಯಕವಾಗಿರಬೇಕು ಎಂದರು.
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಅಂಕಿ-ಅಂಶಗಳ ಪ್ರಕಾರ, 2020ರ ಸೆಪ್ಟೆಂಬರ್ ಅಂತ್ಯದ ವೇಳೆಗೆ ಬ್ಯಾಂಕಿಂಗ್ ವ್ಯವಸ್ಥೆಯು 1,13,981 ಆನ್‌ಸೈಟ್ ಎಟಿಎಂ ಮತ್ತು 96,068 ಆಫ್‌ಸೈಟ್ ಎಟಿಎಂ ಹೊಂದಿತ್ತು.