ನವದೆಹಲಿ: ಗೂಗಲ್ ಪೇಗೆ ಸಂಬಂಧಿಸಿದ ನ್ಯಾಯಸಮ್ಮತವಲ್ಲದ ವ್ಯಾಪಾರ ನಡೆಗಳನ್ನು ಆರೋಪಿಸಿ ಅಂತರ್ಜಾಲ ದೈತ್ಯ ಗೂಗಲ್ ವಿರುದ್ಧ ವಿವರವಾದ ತನಿಖೆಗೆ ಭಾರತೀಯ ಸ್ಪರ್ಧಾತ್ಮಕ ಆಯೋಗ (ಸಿಸಿಐ) ಆದೇಶಿಸಿದೆ.
ಗೂಗಲ್ ಪೇ ಒಂದು ಜನಪ್ರಿಯ ಡಿಜಿಟಲ್ ವ್ಯಾಲೆಟ್ ಪ್ಲಾಟ್‌ಫಾರ್ಮ್ ಆಗಿದೆ. ಪ್ರತಿಸ್ಪರ್ಧೆ ಪಾರ್ಟಿಗಳ ಕಾಯ್ದೆಯ ಸೆಕ್ಷನ್ 4ರ ನಾನಾ ನಿಬಂಧನೆಗಳನ್ನು ಉಲ್ಲಂಘಿಸಿವೆ ಎಂಬ ಆಯೋಗವು ಅಭಿಪ್ರಾಯಪಟ್ಟಿದೆ. ಈ ಅಂಶಗಳ ಬಗ್ಗೆ ವಿವರವಾದ ತನಿಖೆ ಬಯಸುತ್ತವೆ ಎಂದು ಸಿಸಿಐ 39 ಪುಟಗಳ ಆದೇಶದಲ್ಲಿ ತಿಳಿಸಿದೆ.
ಗೂಗಲ್ ಪೇಗೆ ಸಂಬಂಧ ಸ್ಪರ್ಧಾತ್ಮಕ ವಿರೋಧಿ ಅಭ್ಯಾಸಗಳನ್ನು ಆರೋಪಿಸಿ ವಾಚ್‌ಡಾಗ್ ಭಾರತೀಯ ಸ್ಪರ್ಧಾತ್ಮಕ ಆಯೋಗ , ತನ್ನ ಡೈರೆಕ್ಟರ್ ಜನರಲ್ಗೆ (ಡಿಜಿ) ವಿವರವಾದ ತನಿಖೆ ನಡೆಸುವಂತೆ ಆದೇಶಿಸಿದೆ. ಸ್ಪರ್ಧಾತ್ಮಕ ಕಾಯ್ದೆಯ ಸೆಕ್ಷನ್ 4 ಪ್ರಬಲ ಮಾರುಕಟ್ಟೆ ಸ್ಥಾನದ ದುರುಪಯೋಗ ಆರೋಪ ಗೂಗಲ್ ಪೇ ಮೇಲೆ ಕೇಳಿಬಂದಿದೆ.
ಯುನಿಫೈಡ್ ಪೇಮೆಂಟ್ ಇಂಟರ್ಫೇಸ್ (ಯುಪಿಐ) ಮೂಲಕ ಪಾವತಿಗೆ ಅನುಕೂಲವಾಗುವ ಅಪ್ಲಿಕೇಷನ್‌ಗಳು ಮಾರುಕಟ್ಟೆಯ ಪ್ರಸ್ತುತ ಸ್ಪರ್ಧಾತ್ಮಕ ನಿಯಮ ಉಲ್ಲಂಘನೆಯ ಆರೋಪಗಳ ಮೌಲ್ಯಮಾಪನ ಸಂಬಂಧಿತ ತನಿಖೆ ನಡೆಸುವಂತೆ ಆಯೋಗವು ತನ್ನ ಆದೇಶದಲ್ಲಿ ತಿಳಿಸಿದೆ.
ಗೂಗಲ್‌ನ ನಡವಳಿಕೆಯು ನ್ಯಾಯಸಮ್ಮತವಲ್ಲದ ಮತ್ತು ತಾರತಮ್ಯದ ಸ್ಥಿತಿ ಹೇರುವಂತಿದೆ. ಗೂಗಲ್ ಪೇನ ಸ್ಪರ್ಧಾತ್ಮಕ ಅಪ್ಲಿಕೇಷನ್‌ಗಳಿಗೆ ಮಾರುಕಟ್ಟೆ ಪ್ರವೇಶ ನಿರಾಕರಿಸುವುದು ಮತ್ತು ಗೂಗಲ್‌ನ ಕಡೆಯಿಂದ ವಿವಿಧ ನಿಬಂಧನೆಗಳ ಪ್ರಕಾರ, ಕಾಯ್ದೆಯ ಸೆಕ್ಷನ್ 4 (2)ರ ಅಡಿ ತನಿಖೆ ನಡೆಯಲಿದೆ.
ಆಲ್ಫಾಬೆಟ್ ಇಂಕ್, ಗೂಗಲ್ ಎಲ್ಎಲ್ಸಿ, ಗೂಗಲ್ ಐರ್ಲ್ಯಾಂಡ್ ಲಿಮಿಟೆಡ್, ಗೂಗಲ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಮತ್ತು ಗೂಗಲ್ ಇಂಡಿಯಾ ಡಿಜಿಟಲ್ ಸರ್ವೀಸಸ್ ಪ್ರೈವೇಟ್ ಲಿಮಿಟೆಡ್ ಎಂಬ ಈ ಐದು ಘಟಕಗಳ ವಿರುದ್ಧ ತನಿಖೆಗೆ ಆದೇಶಿಸಲಾಗಿದೆ.