ಮುಂಬೈ: ಯೆಸ್ ಬ್ಯಾಂಕ್ ಹಗರಣಕ್ಕೆ ಸಂಬಂಧಿಸಿದಂತೆ ಡಿಎಚ್‌ಎಫ್‌ಎಲ್ ಪ್ರವರ್ತಕ ಕಪಿಲ್ ವಾಧವನ್ ಮತ್ತು ಆರ್‌ಕೆಡಬ್ಲ್ಯೂ ಡೆವಲಪರ್ಸ್ ಪ್ರವರ್ತಕ ಧೀರಜ್ ವಾಧವನ್ ಅವರನ್ನು ಏಪ್ರಿಲ್ 29ರವರೆಗೆ ಸಿಬಿಐ ವಶಕ್ಕೆ ಒಪ್ಪಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಲಾಕ್‌ಡೌನ್ ಸಮಯದಲ್ಲಿ ಕುಟುಂಬ ಸಮೇತ ಪಾರ್ಟಿ ಮಾಡಲು ತೆರಳಿ ಬಂಧನಕ್ಕೀಡಾಗಿದ್ದ ಡಿಹೆಚ್‌ಎಫ್‌ಎಲ್ ಮುಖ್ಯಸ್ಥರಾದ ಕಪಿಲ್ ಹಾಗೂ ಧೀರಜ್ ವಾದ್ವಾನ್ ಅವರನ್ನು ಯೆಸ್ ಬ್ಯಾಂಕ್ ಹಗರಣಕ್ಕೆ ಸಂಬಂಧಿಸಿದಂತೆ ಸಿಬಿಐ ವಶಕ್ಕೆ ಪಡೆದಿತ್ತು. ಲಾಕ್‌ಡೌನ್ ಉಲ್ಲಂಘಿಸಿ ಪಾರ್ಟಿ ಮಾಡಲು ಮುಂಬೈನಿಂದ ಮಹಾಬಲೇಶ್ವರ್‌ದಲ್ಲಿರುವ ತಮ್ಮ ಫಾರ್ಮ್‌ಹೌಸ್‌ಗೆ ಬಂದಿದ್ದ ವಾದ್ವಾನ್ ಸಹೋದರರನ್ನು ಪೊಲೀಸರು ಬಂಧಿಸಿದ್ದರು.
ವಾಧಾವಾನ್ ಅವರನ್ನು ಇಂದು ಇಲ್ಲಿನ ವಿಶೇಷ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಯಿತು. ಏಪ್ರಿಲ್ 29ರ ಬುಧವಾರದವರೆಗೆ ಕೇಂದ್ರೀಯ ತನಿಖಾ ತಂಡದ (ಸಿಬಿಐ) ಕಸ್ಟಡಿಗೆ ಕಳುಹಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.