ETV Bharat / business

ಬ್ಯಾಂಕ್ ಗ್ರಾಹಕರ ಗಮನಕ್ಕೆ..! ಕೆನರಾ ಬ್ಯಾಂಕ್ ಬಡ್ಡಿದರ ಕಡಿತ

ಭಾರತೀಯ ರಿಸರ್ವ್‌ ಬ್ಯಾಂಕ್‌ (ಆರ್‌ಬಿಐ) ರೆಪೋ ದರವನ್ನು ಶೇ 0.75ರಷ್ಟು ಕಡಿಮೆ ಮಾಡಿರುವುದರ ಲಾಭವನ್ನು ಗ್ರಾಹಕರಿಗೆ ವರ್ಗಾಯಿಸಲು ಕೆನರಾ ಬ್ಯಾಂಕ್‌ ಬಡ್ಡಿದರ ಇಳಿಕೆ ಮಾಡಿದೆ. ಈಗಾಗಲೇ ಎಸ್​ಬಿಐ, ಐಸಿಐಸಿಐ ಸೇರಿ ಇತರ ಬ್ಯಾಂಕ್​ಗಳು ಬಡ್ಡಿದರ ತಗ್ಗಿಸಿವೆ.

Canara Bank
ಕೆನರಾ ಬ್ಯಾಂಕ್
author img

By

Published : Apr 7, 2020, 7:36 PM IST

ನವದೆಹಲಿ: ಸರ್ಕಾರಿ ಸ್ವಾಮ್ಯದ ಕೆನರಾ ಬ್ಯಾಂಕ್​, ಭಾರತೀಯ ರಿಸರ್ವ್​ ಬ್ಯಾಂಕ್​ನ ರೆಪೋ ದರ ಆಧರಿಸಿರುವ ಸಾಲಗಳ ಮೇಲಿನ ಬಡ್ಡಿದರದಲ್ಲಿ ಕಡಿತ ಮಾಡಿದೆ.

ರೆಪೋ ದರ ಆಧರಿಸಿರುವ ಸಾಲಗಳ ಮೇಲಿನ ಬಡ್ಡಿದರ (ಆರ್‌ಎಲ್‌ಎಲ್‌ಆರ್) ಶೇ 0.75ರಷ್ಟು ಕಡಿಮೆ ಮಾಡಿದ್ದು, ಪರಿಷ್ಕೃತ ದರವು ಇಂದಿನಿಂದ (ಮಂಗಳವಾರ) ಶೇ 7.30ರ ಬಡ್ಡಿದರದಲ್ಲಿ ಸಾಲ ಸಿಗಲಿದೆ ಎಂದು ತಿಳಿಸಿದೆ.

ಠೇವಣಿಗಳ ಮೇಲಿನ ಹೆಚ್ಚುವರಿ ವೆಚ್ಚ ಆಧರಿಸಿದ (ಎಂಸಿಎಲ್‌ಆರ್‌) ಆಧಾರಿತ ಸಾಲದ ಬಡ್ಡಿ ದರದಲ್ಲಿಯೂ ಶೇ 0.35ರವರೆಗೂ ಇಳಿಕೆ ಮಾಡಿದೆ.

ಭಾರತೀಯ ರಿಸರ್ವ್‌ ಬ್ಯಾಂಕ್‌ (ಆರ್‌ಬಿಐ) ರೆಪೋ ದರವನ್ನು ಶೇ 0.75ರಷ್ಟು ಕಡಿಮೆ ಮಾಡಿರುವುದರ ಲಾಭವನ್ನು ಗ್ರಾಹಕರಿಗೆ ವರ್ಗಾಯಿಸಲು ಕೆನರಾ ಬ್ಯಾಂಕ್‌ ಈ ನಿರ್ಧಾರ ತೆಗೆದುಕೊಂಡಿದೆ.

ದೇಶದ ಅತಿದೊಡ್ಡ ಸಾಲಗಾರರಾದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ತನ್ನ ಎಫ್‌ಡಿ ದರವನ್ನು ವಿವಿಧ ಅವಧಿಯಲ್ಲಿ 50 ಬಿಪಿಎಸ್​ವರೆಗೆ ಈಗಾಗಲೇ ಕಡಿತಗೊಳಿಸಿದೆ.

ಶುಕ್ರವಾರ ಖಾಸಗಿ ವಲಯದ ಐಸಿಐಸಿಐ ಬ್ಯಾಂಕ್ ಸ್ಥಿರ ಠೇವಣಿ ಮತ್ತು ಉಳಿತಾಯ ಖಾತೆಯ ಮೇಲಿನ ಬಡ್ಡಿದರವನ್ನು 50 ಬೇಸಿಸ್ ಪಾಯಿಂಟ್‌ಗಳವರೆಗೆ (ಬಿಪಿಎಸ್) ಕಡಿಮೆ ಮಾಡಿತ್ತು. ಉಳಿತಾಯ ಖಾತೆಗಳಲ್ಲಿನ ಬಡ್ಡಿದರಗಳ ಕಡಿತವು 2020 ಏಪ್ರಿಲ್ 9ರಿಂದ ಜಾರಿಗೆ ಬರಲಿದ್ದು, ಎಫ್‌ಡಿಗಳ ಹೊಸ ದರಗಳು ಏಪ್ರಿಲ್ 3ರಿಂದ ಜಾರಿಗೆ ಬಂದಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.