ETV Bharat / business

ಸಂಕಷ್ಟದ ನಡುವೆಯೂ 32 ಕೋಟಿ ಲಾಭ ಗಳಿಸಿದ ಕ್ಯಾಂಪ್ಕೋ ಸಂಸ್ಥೆ - 32 ಕೋಟಿ ಲಾಭ ಗಳಿಸಿದ ಕ್ಯಾಂಪ್ಕೋ ಸಂಸ್ಥೆ

ಕ್ಯಾಂಪ್ಕೋದಿಂದ ನಾನಾ ಮಾದರಿಯ ಚಾಕೊಲೇಟ್ ತಯಾರಿ ಕಾರ್ಯ ನಡೆಯುತ್ತಿದ್ದು, ಕೊರೊನಾ ಸಂಕಷ್ಟದ ನಡುವೆಯೂ ಕ್ಯಾಂಪ್ಕೋ ಸಂಸ್ಥೆ 32 ಕೋಟಿ ಲಾಭ ಗಳಿಸಿದೆ.

Campco company
ಕ್ಯಾಂಪ್ಕೋ ಸಂಸ್ಥೆ
author img

By

Published : Nov 26, 2020, 5:58 PM IST

ಮಂಗಳೂರು: ಕೊರೊನಾ ಸಂಕಷ್ಟದ ಸಮಯದಲ್ಲಿಯೂ ಕ್ಯಾಂಪ್ಕೋ ಸಂಸ್ಥೆ 32 ಕೋಟಿ ಲಾಭ ಗಳಿಸಿದೆ ಎಂದು ಕ್ಯಾಂಪ್ಕೋ ಅಧ್ಯಕ್ಷ ಎಸ್​.ಆರ್ ಸತೀಶ್ಚಂದ್ರ ತಿಳಿಸಿದ್ದಾರೆ.

ಕ್ಯಾಂಪ್ಕೋ ಅಧ್ಯಕ್ಷ ಎಸ್​.ಆರ್ ಸತೀಶ್ಚಂದ್ರ ಪತ್ರಿಕಾಗೋಷ್ಠಿ

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊರೊನಾ ಸಂದರ್ಭದಲ್ಲಿ ಅಡಕೆ ಬೆಲೆ ಏರಿಕೆ ಕಂಡಿದ್ದು, ಇದೀಗ 400 ರೂ. ಆಸುಪಾಸಿನಲ್ಲಿದೆ. ಕೃಷಿಕರ ಮತ್ತು ಕ್ಯಾಂಪ್ಕೋ ಸಿಬ್ಬಂದಿ ಸೇವೆಯಿಂದ ಈ ಸಾಧನೆ ಸಾಧ್ಯವಾಗಿದೆ ಎಂದರು.

ಕ್ಯಾಂಪ್ಕೋದಿಂದ ನಾನಾ ಮಾದರಿಯ ಚಾಕೊಲೇಟ್ ತಯಾರಿ ನಡೆಯುತ್ತಿದೆ. ಕಳೆದ ವರ್ಷ ಪೆಪ್ಪರ್ ಚಾಕೊಲೇಟ್ ಪರಿಚಯಿಸಲಾಗಿತ್ತು. ಈ ಬಾರಿ ರೋಗನಿರೋಧಕ ಶಕ್ತಿ ಹೆಚ್ಚಿಸುವ ಉದ್ದೇಶದಿಂದ ಅರಿಶಿಣ ಬಳಸಿ ಚಾಕೊಲೇಟ್ ತಯಾರಿಸುವ ಕಾರ್ಯ ಪ್ರಗತಿಯಲ್ಲಿದೆ. ಮುಂದಿನ ಫೆಬ್ರವರಿಯಲ್ಲಿ ಈ ಚಾಕೊಲೇಟ್ ಮಾರುಕಟ್ಟೆಗೆ ಬಿಡುಗಡೆಗೊಳಿಸಲಾಗುವುದು ಎಂದು ತಿಳಿಸಿದರು.

ಕ್ಯಾಂಪ್ಕೋ ಈ ಬಾರಿ 1,848 ಕೋಟಿಗಳ ಬೃಹತ್ ವಹಿವಾಟು ದಾಖಲಿಸಿದೆ. ಈ ಸಹಕಾರಿ ಸಂಸ್ಥೆ 1430.43 ಕೋಟಿ ರೂಪಾಯಿ ಮೌಲ್ಯದ 48,29,493 ಮೆಟ್ರಿಕ್ ಟನ್ ಅಡಕೆಯನ್ನು ಖರೀದಿಸಿದೆ. 1535.38 ಕೋಟಿ ರೂಪಾಯಿ ಮೌಲ್ಯದ 51,33,551 ಮೆಟ್ರಿಕ್ ಟನ್ ಅಡಕೆಯನ್ನು ಮಾರಾಟ ಮಾಡಿದೆ ಎಂದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.