ETV Bharat / business

ಕೊರೊನಾ ಕಾವಿಗೆ ಆರಿತು ಕಾಫಿ.. 90 ದಿನದಲ್ಲಿ CCDಯ 280 ಮಳಿಗೆ ಬಂದ್!!

ಈ ಮಳಿಗೆಗಳ ಮುಚ್ಚುವಿಕೆಯೊಂದಿಗೆ ಅದರ ಒಟ್ಟಾರೆ ಕಾಫಿ ಡೇಗಳ ಸಂಖ್ಯೆ 2020ರ ಜೂನ್ 30ರ ವೇಳೆಗೆ 1,480ರಷ್ಟಿವೆ. ಕೆಫೆ ಕಾಫಿ ಡೇ ಈಗ ಕಾಫಿ ಡೇ ಗ್ಲೋಬಲ್ ಒಡೆತನದ ಬ್ರಾಂಡ್ ಆಗಿದೆ..

Cafe Coffee Day
ಕೆಫೆ ಕಾಫಿ ಡೇ
author img

By

Published : Jul 20, 2020, 3:14 PM IST

ನವದೆಹಲಿ : ದೇಶದ ಅತಿದೊಡ್ಡ ಕಾಫಿ ಸರಪಳಿಗಳಲ್ಲಿ ಒಂದಾದ ಕೆಫೆ ಕಾಫಿ ಡೇ, 2020ರ ವಿತ್ತ ವರ್ಷದಲ್ಲಿ ಆರ್ಥಿಕ ಸಂಕಷ್ಟಕ್ಕೆ ಒಳಗಾಗಿದ್ದರಿಂದ ಏಪ್ರಿಲ್-ಜೂನ್ ತ್ರೈಮಾಸಿಕದಲ್ಲಿ 280 ಮಳಿಗೆಗಳನ್ನು ಮುಚ್ಚಿದೆ.

ಪ್ರಸಕ್ತ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ ದೇಶೀಯ ಕಾಫಿ ಸರಪಳಿ ಕೆಫೆ ಕಾಫಿ ಡೇ (ಸಿಸಿಡಿ) ಸುಮಾರು 280 ಮಳಿಗೆಗಳನ್ನು ಮುಚ್ಚಿದೆ. ಲಾಭದಾಯಕ ಸಮಸ್ಯೆಗಳು ಮತ್ತು ಭವಿಷ್ಯದ ಖರ್ಚಿನಲ್ಲಿ ಹೆಚ್ಚಳವಾಗಬಹುದು ಎಂಬ ಶಂಕೆಯಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಕಂಪನಿಯು ಪ್ರಕಟಣೆಯಲ್ಲಿ ತಿಳಿಸಿದೆ.

ಈ ಮಳಿಗೆಗಳ ಮುಚ್ಚುವಿಕೆಯೊಂದಿಗೆ ಅದರ ಒಟ್ಟಾರೆ ಕಾಫಿ ಡೇಗಳ ಸಂಖ್ಯೆ 2020ರ ಜೂನ್ 30ರ ವೇಳೆಗೆ 1,480ರಷ್ಟಿವೆ. ಕೆಫೆ ಕಾಫಿ ಡೇ ಈಗ ಕಾಫಿ ಡೇ ಗ್ಲೋಬಲ್ ಒಡೆತನದ ಬ್ರಾಂಡ್ ಆಗಿದೆ.

ಕಳೆದ ಹಣಕಾಸು ವರ್ಷದ ಇದೇ ಅವಧಿಯಲ್ಲಿ 15,739ರಿಂದ ಏಪ್ರಿಲ್-ಜೂನ್ ತ್ರೈಮಾಸಿಕದಲ್ಲಿ ಕಾಫಿ ಸರಪಳಿಯು ದಿನಕ್ಕೆ ಸರಾಸರಿ ಮಾರಾಟದಲ್ಲಿ (ಎಎಸ್‌ಪಿಡಿ) 15,445ಕ್ಕೆ ಇಳಿದಿದೆ ಎಂದು ವರದಿಯಾಗಿದೆ. ಅದರ ವೆಂಡಿಂಗ್ ಮಷಿನ್​ಗಳ ಸಂಖ್ಯೆ 2020ರ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ 59,115 ಯುನಿಟ್‌ಗಳಿಗೆ ಏರಿದ್ದು, ವರ್ಷದ ಹಿಂದೆ ಇದೇ ತ್ರೈಮಾಸಿಕದಲ್ಲಿ 49,397ರಷ್ಟಿದ್ದವು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.