ETV Bharat / business

ಯುಪಿಎ ನಿರ್ಧಾರಗಳಿಂದ BSNL, MTNL ದುರ್ಬಲ : ಮನೋಜ್ ಸಿನ್ಹಾ

ಕಳೆದ ವಾರ ಕಾಂಗ್ರೆಸ್​ ವಕ್ತಾರ ರಂದೀಪ್ ಸುರ್ಜೆವಾಲಾ ಅವರು, ಸರ್ಕಾರಿ ಸ್ವಾಮ್ಯದ ಬಿಎಸ್​ಎನ್​ಎಲ್​ ಹಾಗೂ ಎಂಟಿಎನ್​ಎಲ್​ಗಳನ್ನು ಪ್ರಧಾನಿ ಮೋದಿ ತಮ್ಮ ಸ್ನೇಹಿತರ ಸ್ನೇಹಿತರ ಪ್ರಚಾರಕ್ಕೆ ಬಳಸಿಕೊಂಡಿದ್ದಾರೆ. ಹೀಗಾಗಿ ಉಭಯ ಸಂಸ್ಥೆಗಳು ಇಂದು ಮುಚ್ಚುವ ಹಂತಕ್ಕೆ ಬಂದು ತಲುಪಿದೆ ಎಂದು ಆರೋಪಿಸಿದ್ದರು.

author img

By

Published : Apr 10, 2019, 10:59 PM IST

ಸಂಗ್ರಹ ಚಿತ್ರ

ನವದೆಹಲಿ: ಬಿಎಸ್​ಎನ್​ಎಲ್​ ಹಾಗೂ ಎಂಟಿಎನ್​ಎಲ್​ ಈಗಿನ ದುಸ್ಥಿತಿಗೆ ಬಿಜೆಪಿಯೇ ಕಾರಣವೆಂಬ ಕಾಂಗ್ರೆಸ್​ ಹೇಳಿಕೆಯನ್ನು ತಳಿಹಾಕಿದ ದೂರಸಂಪರ್ಕ ಸಚಿವ ಮನೋಜ್​ ಸಿನ್ಹಾ, 'ಯುಪಿಎ ಆಡಳಿತ ಅವಧಿಯ ನಿರ್ಧಾರಗಳಿಂದ ಸಾರ್ವಜನಿಕ ಸ್ವಾಮ್ಯದ ಉಭಯ ಸಂಸ್ಥೆಗಳು ದುರ್ಬಲಗೊಂಡಿವೆ' ಎಂದು ಆರೋಪಿಸಿದ್ದಾರೆ.

ನಮ್ಮ ಆರ್ಥಿಕ ನೀತಿಗಳ ವಿರುದ್ಧ ಸುಳ್ಳು ಮತ್ತು ಆಧಾರ ರಹಿತ ಆರೋಪ ಮಾಡುವ ಮುನ್ನ ಕಾಂಗ್ರೆಸ್​, ಮೊದಲು ಸಾಕಷ್ಟು ತಯಾರಿ ನಡೆಸಿ ಮನೆಗೆಲಸ ಮಾಡಿಕೊಳ್ಳಬೇಕು. ಯುಪಿಎ ಆಡಳಿತಾವಧಿಯಲ್ಲಿ ತೆಗೆದುಕೊಂಡ ನಿರ್ಧಾರಗಳಿಂದ ಪಿಎಸ್​ಯುನ ಎರಡೂ ಕಂಪನಿಗಳು ಈ ದುಸ್ಥಿತಿಗೆ ತಲುಪಿವೆ. ಒತ್ತಡ ಪೂರ್ವಕವಾಗಿ ಸ್ಪೆಕ್ಟ್ರಮ್​ (ತರಂಗಾಂತರ) ಖರೀದಿಗೆ ಹೆಚ್ಚುವರಿ ಹಣ ವಿನಿಯೋಗಿಸಿದ್ದರು ಎಂದು ಆಪಾದಿಸಿದ್ದಾರೆ.

ಯಾವುದೇ ಕ್ರಮ ತೆಗೆದುಕೊಳ್ಳುವ ಮೊದಲು ಟಿಲಿಕಾಂ ವಿಭಾಗದ (ಡಿಒಟಿ) ಅಟಾರ್ನಿ ಜನರಲ್ ಅಭಿಪ್ರಾಯ ಕೇಳಿದ್ದೇವೆ. ಉಭಯ ಸಂಸ್ಥೆಗಳ ಪುನರ್​ಜೀವನಕ್ಕೆ ಎಲ್ಲ ವಿಧದ ಸಮಸ್ಯೆಗಳನ್ನು ಪರಿಹರಿಸಲು ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದ್ದೇವೆ ಎಂದು ಸಿನ್ಹಾ ಹೇಳಿದ್ದಾರೆ.

Intro:Body:Conclusion:

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.