ನವದೆಹಲಿ: ಪ್ರಮುಖ ಪ್ರೀಮಿಯಂ ಬೈಕ್ ತಯಾರಕ ರಾಯಲ್ ಎನ್‌ಫೀಲ್ಡ್ (ಆರ್‌ಇಇ) ತನ್ನ ಬುಲೆಟ್ 350 ಬಿಎಸ್ 6 ಮಾದರಿಗಳ ಬೆಲೆಯನ್ನು ಮತ್ತೊಮ್ಮೆ ಹೆಚ್ಚಿಸಿದೆ.
2021ರಲ್ಲಿ ಈಗ ಎರಡನೇ ಬಾರಿಗೆ ಬೆಲೆಗಳನ್ನು ಪರಿಷ್ಕರಿಸಿದೆ. ಇತ್ತೀಚಿನ ಏರಿಕೆಯೊಂದಿಗೆ ಬೈಕ್‌ನ ಬೆಲೆ ಈ ವರ್ಷ ಸುಮಾರು 9,000 ರೂ. ಗಳಷ್ಟು ಹೆಚ್ಚಳವಾಗಿದೆ. ಕಳೆದ ವರ್ಷ ಬಿಡುಗಡೆಯಾದಾಗ 1.21 ಲಕ್ಷ ರೂ. ಇದ್ದ ರಾಯಲ್ ಎನ್‌ಫೀಲ್ಡ್ ಬುಲೆಟ್ 350 ಬೆಲೆ ಈಗ 1.30 ಲಕ್ಷ ರೂ.ಗೆ ಏರಿದೆ.
ಇದನ್ನೂ ಓದಿ: SBI ಗ್ರಾಹಕರ ಗಮನಕ್ಕೆ! ಸೇವಿಂಗ್ ಅಕೌಂಟ್ ಇಮೇಲ್ ಐಡಿ ನವಿಕರೀಸುವ ವಿಧಾನ ಇಲ್ಲಿದೆ
ರೂಪಾಂತರ ಅವಲಂಬಿಸಿ ಇತ್ತೀಚೆಗೆ 3,100 ರೂ.ಗಳಿಂದ 3,500 ರೂ.ಗೆ ಹೆಚ್ಚಿಸಲಾಗಿದೆ. ಬುಲೆಟ್ 350 ಭಾರತೀಯ ಮಾರುಕಟ್ಟೆಯಲ್ಲಿ ಮೂರು ರೂಪಾಂತರಗಳಲ್ಲಿ ಲಭ್ಯವಿದೆ, ಹೆಚ್ಚಳದ ನಂತರದ ಬೆಲೆ ವಿವರ ಹೀಗಿದೆ...
* ಬುಲೆಟ್ 350 ಸ್ಟ್ಯಾಂಡರ್ಡ್: 1,30,228 ರೂ.
* ಬುಲೆಟ್ 350 (ಕಪ್ಪು ಮತ್ತು ಫಾರೆಸ್ಟ್ ಹಸಿರು): 1,36,502 ರೂ.
* ಬುಲೆಟ್ 350 ಇಎಸ್ (ಎಲೆಕ್ಟ್ರಿಕ್ ಸ್ಟಾರ್ಟ್): 1,46,152 ರೂ.