ಬೆಂಗಳೂರು: ಬ್ಲೇಡ್ ಇಂಡಿಯಾ ಮಹಾರಾಷ್ಟ್ರದ ಮುಂಬೈ-ಪುಣೆ-ಶಿರಡಿಯಲ್ಲಿ ತನ್ನ ಸೇವೆಗಳನ್ನು ಪ್ರಾರಂಭಿಸುವುದಾಗಿ ಪ್ರಕಟಿಸಿದ ನಂತರ ಕರ್ನಾಟಕದಲ್ಲಿ ಶುರು ಮಾಡಲಿದೆ.
ಮಹಾರಾಷ್ಟ್ರದಲ್ಲಿ ಬ್ಲೇಡ್ ಎನಿವೇರ್ ಸೇವೆಯ ಪರ್ಸನಲ್ ಚಾರ್ಟರ್ ಬೈ ದಿ ಸೀಟ್ ಪ್ರಾರಂಭಿಸಿದ ನಂತರ ಕಂಪನಿಯು ಕರ್ನಾಟಕದ ಪ್ರವಾಸಿ ತಾಣಗಳಲ್ಲಿ ತನ್ನ ಸೇವಾ ಜಾಲ ವಿಸ್ತರಿಸಲು ಸಜ್ಜಾಗಿದೆ. ಬ್ಲೇಡ್ ಇಂಡಿಯಾ ಹೆಲಿಕಾಪ್ಟರ್‌ಗಳು ಬೆಂಗಳೂರು, ಕೂರ್ಗ್, ಕಬಿನಿ, ಚಿಕ್ಕಮಗಳೂರು ಮತ್ತು ಹಂಪಿ ನಡುವೆ ಹಾರಾಡಲಿವೆ.
ಡಿಜಿಟಲ್ ಇಂಡಿಯಾ ಜಗತ್ತಿನಲ್ಲಿ ಭಾರತವನ್ನು ಎದ್ದು ನಿಲ್ಲುವಂತೆ ಮಾಡಿದೆ: ಗೇಟ್ಸ್ ಬಳಿಕ ನಾಡೆಲ್ಲ ಬಣ್ಣನೆ
ಕೋವಿಡ್-19 ಸಾಂಕ್ರಾಮಿಕದಿಂದಾಗಿ ಪ್ರಯಾಣಿಕರು ದಟ್ಟಣೆಯೊಂದಿಗೆ ಪ್ರಯಾಣಿಸಲು ಹಿಂದೇಟು ಹಾಕುತ್ತಿದ್ದಾರೆ. ಸಹ ಪ್ರಯಾಣಿಕರ ಸೋಂಕಿನ ಬಗ್ಗೆ ಹೆಚ್ಚು ಸಂಶಯ ವ್ಯಕ್ತಪಡಿಸುತ್ತಿರುವುದರಿಂದ ಬ್ಲೇಡ್ ಇಂಡಿಯಾ, ವೈಯಕ್ತಿಕ ಚಾರ್ಟರ್ ಸೇವೆಗಳ ಮೂಲಕ ಅನುಕೂಲಕರ ಪ್ರಯಾಣದ ಆಯ್ಕೆಯನ್ನು ಒದಗಿಸುತ್ತಿದೆ. ಈ ಮೂಲಕ ಸಮಯದ ಉಳಿತಾಯವನ್ನು ಮಾಡುತ್ತಿದೆ.
ಬ್ಲೇಡ್ ಪ್ರಸ್ತುತ ಕರ್ನಾಟಕದೊಳಗೆ ಧಾರ್ಮಿಕ ಮತ್ತು ಪ್ರವಾಸಿ ತಾಣಗಳಾದ ಕೂರ್ಗ್, ಕಬಿನಿ, ಚಿಕ್ಕಮಗಳೂರು ಮತ್ತು ಹಂಪಿಗೆ ಚಾರ್ಟರ್ ಸೇವೆಗಳನ್ನು ನೀಡಲಿದೆ. ಕ್ರಮೇಣ ಬೈ-ದಿ-ಸೀಟ್’ ಆಫರ್ ಸಹ ನೀಡಿಲಿದೆ.