ನ್ಯೂಯಾರ್ಕ್( ಅಮೆರಿಕ): ಕಲ್ಲಿದ್ದಲು ಗಣಿಗಾರಿಕೆಯ(coal-mining)ಗೆ ಪ್ರಸಿದ್ಧವಾಗಿರುವ ವ್ಯೋಮಿಂಗ್‌ನಲ್ಲಿ(Wyoming) ಬಿಲ್ ಗೇಟ್ಸ್ ಅವರ ಪ್ರಾಯೋಗಿಕ ಪರಮಾಣು ವಿದ್ಯುತ್ ಯೋಜನೆಗೆ (nuclear power project) ಚಾಲನೆ ಸಿಗಲಿದೆ ಎಂದು ಅಧಿಕಾರಿಗಳು ಮಂಗಳವಾರ ಘೋಷಿಸಿದ್ದಾರೆ.
ಬೆಲ್ಲೆವ್ಯೂ, ವಾಷಿಂಗ್ಟನ್ ಮೂಲದ ಟೆರಾಪವರ್ ಕಂಪನಿ ತನ್ನ ನ್ಯಾಟ್ರಿಯಮ್ ಸ್ಥಾವರವನ್ನು ಕೆಮ್ಮೆರೆರ್‌ನಲ್ಲಿ(Kemmerer) ನಿರ್ಮಿಸುತ್ತಿದೆ. ನೈಋತ್ಯ ವ್ಯೋಮಿಂಗ್ ಪೆಸಿಫಿಕಾರ್ಪ್ ಅಂಗಸಂಸ್ಥೆ ರಾಕಿ ಮೌಂಟೇನ್ ಪವರ್ ನಿರ್ವಹಿಸುವ ಕಲ್ಲಿದ್ದಲು ವಿದ್ಯುತ್ ಸ್ಥಾವರ 2025ರಲ್ಲಿ ಮುಚ್ಚಲಿದೆ. ಇದರಿಂದ ಕಲ್ಲಿದ್ದಲು ಉದ್ಯಮದ 2,000 ಉದ್ಯೋಗಿಗಳು ಉದ್ಯೋಗ ಕಳೆದುಕೊಳ್ಳಲಿದ್ದಾರೆ.
ಹಸಿರುಮನೆ ಅನಿಲ ಹೊರಸೂಸುವಿಕೆಯನ್ನು ಮಿತಿಗೊಳಿಸುವ ಉದ್ದೇಶದಿಂದ ಹಾಗೂ ಸ್ಕಾಟ್ಲೆಂಡ್‌ನಲ್ಲಿ ನಡೆದ ಜಾಗತಿಕ ಹವಾಮಾನ - ಬದಲಾವಣೆ ಶೃಂಗಸಭೆಯಲ್ಲಿ (global climate-change summit) ಅಮೆರಿಕ ಮತ್ತು ಇತರ ದೇಶಗಳ ಅಧಿಕಾರಿಗಳು ಪ್ರತಿಜ್ಞೆ ಮಾಡಿದ ಕೆಲವು ದಿನಗಳ ನಂತರ ಈ ಪ್ರಕಟಣೆ ಹೊರಡಿಸಲಾಗಿದೆ.
ಮೈಕ್ರೋಸಾಫ್ಟ್‌ನ ಸಹ-ಸಂಸ್ಥಾಪಕ ಮತ್ತು ಟೆರಾಪವರ್‌ನ ಅಧ್ಯಕ್ಷ ಬಿಲ್ ಗೇಟ್ಸ್ ಜೂನ್‌ನಲ್ಲಿ ವ್ಯೋಮಿಂಗ್ ಯೋಜನೆಗಳನ್ನ ಘೋಷಿಸಿದ್ದರು. ಈ ಘೋಷಣೆಯ ಅನ್ವಯ ಅಣು ವಿದ್ಯುತ್ ಸ್ಥಾವರಗಳನ್ನು ಸ್ಥಾಪಿಸಲಾಗುತ್ತಿದೆ. ಪರಮಾಣು ಸ್ಥಾವರವನ್ನು ನಿರ್ವಹಿಸಲು ಕಾರ್ಮಿಕರಿಗೆ ತರಬೇತಿ ನೀಡಲು ಯೋಜಿಸಲಾಗಿದೆ. ಇದರ ನಿರ್ಮಾಣವು 2024 ರಲ್ಲಿ ಪ್ರಾರಂಭವಾಗಲಿದೆ ಎಂದು ಲೆವೆಸ್ಕ್ ಹೇಳಿದರು.
ಸೋಡಿಯಂ - ಕೂಲ್ಡ್ ಫಾಸ್ಟ್ ರಿಯಾಕ್ಟರ್ ಮತ್ತು ಕರಗಿದ ಉಪ್ಪು ಶಕ್ತಿಯ ಸಂಗ್ರಹವನ್ನು ಒಳಗೊಂಡಿರುವ ಯೋಜನೆಯ ಪ್ರತಿಪಾದಕರು ಸಾಂಪ್ರದಾಯಿಕ ಪರಮಾಣು ಶಕ್ತಿಗಿಂತ ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: ದೇಶದ ಆರ್ಥಿಕ ಸ್ಥಿರತೆಗೆ ಕ್ರಿಪ್ಟೋಕರೆನ್ಸಿಯಿಂದ ಧಕ್ಕೆ, ಹೂಡಿಕೆಗೆ ಸಾಲ ನೀಡಲಾಗ್ತಿದೆ: RBI ಗವರ್ನರ್ ಕಳವಳ