ETV Bharat / business

15 ನಿಮಿಷದಲ್ಲಿ ಎಲೆಕ್ಟ್ರಿಕ್​ ವಾಹನದ ಬ್ಯಾಟರಿ ಚಾರ್ಜ್​​ ಫುಲ್​: ಲಾಗ್-9 ಸ್ಟಾರ್ಟ್‌ಅಪ್ ತಂತ್ರಜ್ಞಾನ

author img

By

Published : Mar 2, 2021, 7:59 PM IST

Updated : Mar 2, 2021, 8:46 PM IST

ಬೆಂಗಳೂರು ಮೂಲದ ಸ್ಟಾರ್ಟ್​ಅಪ್​ ಅಭಿವೃದ್ಧಿಪಡಿಸಿದ ಬ್ಯಾಟರಿಗಳನ್ನು ಕೇವಲ 15 ನಿಮಿಷಗಳಲ್ಲಿ ಸಂಪೂರ್ಣವಾಗಿ ಚಾರ್ಜ್ ಮಾಡಬಹುದು. ಇವು 15 ವರ್ಷಗಳಿಗಿಂತ ಹೆಚ್ಚು ಕಾಲ ಬಾಳಿಕೆ ಬರುತ್ತವೆ. ಲಿಥಿಯಂ ಅಯಾನ್ ಬ್ಯಾಟರಿಗಳು ಉತ್ತಮ ಗುಣಮಟ್ಟವನ್ನೂ ಹೊಂದಿವೆ. 2022ರ ಆರ್ಥಿಕ ವರ್ಷದ ವೇಳೆಗೆ 3,000 ಬ್ಯಾಟರಿ ಚಾಲಿತ ವಾಹನಗಳನ್ನು (2-ವೀಲರ್, 3-ವೀಲರ್) ಉತ್ಪಾದಿಸುವ ಗುರಿ ಹೊಂದಿದೆ.

start-up
start-up

ಬೆಂಗಳೂರು: ಪೆಟ್ರೋಲ್ ಬೆಲೆ ಗಗನಕ್ಕೇರಿರುವ ಹಿನ್ನೆಲೆಯಲ್ಲಿ ಎಲೆಕ್ಟ್ರಿಕ್ ವಾಹನಗಳ ಬಳಕೆ ಮತ್ತೊಮ್ಮೆ ಚರ್ಚೆಯಲ್ಲಿದೆ. ಇವುಗಳಲ್ಲಿನ ಒಂದು ಪ್ರಮುಖ ಸಮಸ್ಯೆಯೆಂದರೆ ಬ್ಯಾಟರಿ ಚಾರ್ಜಿಂಗ್.

ವಾಹನ ಚಾಲಕರು ಹೆಚ್ಚಿನ ಸಮಯ ಚಾರ್ಜಿಂಗ್​ಗೆ ಶುಲ್ಕ ವಿಧಿಸಬೇಕಾಗಿರುವುದರಿಂದ ಈ ಬಗ್ಗೆ ಆಸಕ್ತಿ ಕಡಿಮೆ ಆಗಿತ್ತು. ಇದಕ್ಕೆ ಉತ್ತರ ಎಂಬಂತೆ ಬೆಂಗಳೂರು ಮೂಲದ ಸ್ಟಾರ್ಟ್ಅಪ್ 'ಲಾಗ್ -9', 15 ನಿಮಿಷಗಳಲ್ಲಿ ಸಂಪೂರ್ಣವಾಗಿ ಬ್ಯಾಟರಿ ಚಾರ್ಜ್ ಮಾಡುವ ತಂತ್ರಜ್ಞಾನ ಅಭಿವೃದ್ಧಿಪಡಿಸಿದೆ.

ಗ್ರ್ಯಾಫೀನ್ ಸೂಪರ್ ಕ್ಯಾಪಾಸಿಟರ್ ತಂತ್ರಜ್ಞಾನ ಬಳಸಿ ಬ್ಯಾಟರಿಗಳನ್ನು ತಯಾರಿಸಲಾಗಿದೆ ಎಂದು ಲಾಗ್ 9 ಪ್ರಕಟಣೆಯಲ್ಲಿ ತಿಳಿಸಿದೆ.

ಈ ಬ್ಯಾಟರಿಗಳನ್ನು ಕೇವಲ 15 ನಿಮಿಷಗಳಲ್ಲಿ ಸಂಪೂರ್ಣವಾಗಿ ಚಾರ್ಜ್ ಮಾಡಬಹುದು. 15 ವರ್ಷಗಳಿಗಿಂತ ಹೆಚ್ಚು ಕಾಲ ಬಾಳಿಕೆ ಬರುತ್ತವೆ. ಲಿಥಿಯಂ ಅಯಾನ್ ಬ್ಯಾಟರಿಗಳು ಉತ್ತಮ ಗುಣಮಟ್ಟವನ್ನೂ ಹೊಂದಿವೆ. 2022ರ ಆರ್ಥಿಕ ವರ್ಷದ ವೇಳೆಗೆ 3,000 ಬ್ಯಾಟರಿ ಚಾಲಿತ ವಾಹನಗಳನ್ನು (2-ವೀಲರ್, 3-ವೀಲರ್) ಉತ್ಪಾದಿಸುವ ಗುರಿ ಹೊಂದಿದೆ.

ಇದನ್ನೂ ಓದಿ: ಬ್ಯಾಂಕ್​ಗಳ ಖಾಸಗೀಕರಣ: '50 ವರ್ಷಗಳ ಹಿಂದೆ ಇಂದಿರಾ ಮಾಡಿದ್ದ ತಪ್ಪು ಈಗ ಸರಿಯಾಗುತ್ತಿದೆ'- ಪನಾಗರಿಯಾ

ಜಪಾನಿನ ಪ್ರಮುಖ ವಾಹನ ತಯಾರಕ ಹೋಂಡಾ ಮತ್ತು ಯಮಹಾ ಸೇರಿದಂತೆ ಯುರೋಪಿಯನ್ ಕಂಪನಿಗಳಾದ ಪಿಯಾಜಿಯೊ, ವೆಸ್ಪಾ ಮತ್ತು ಕೆಟಿಎಂ ಬದಲಾಯಿಸಬಹುದಾದ ಬ್ಯಾಟರಿಗಳನ್ನು ತಯಾರಿಸಿವೆ. ಈ ಕಂಪನಿಗಳ ಬ್ಯಾಟರಿಗಳನ್ನು ತೆಗೆದುಕೊಂಡು ಪ್ರತ್ಯೇಕವಾಗಿ ಚಾರ್ಜ್ ಮಾಡಬಹುದು. ಇದರಿಂದ ಭವಿಷ್ಯದಲ್ಲಿ ಎಲೆಕ್ಟ್ರಿಕ್ ವಾಹನಗಳ ಬಳಕೆ ಹೆಚ್ಚಾಗಲಿದೆ.

ಇವು ಹೇಗೆ ಕೆಲಸ ಮಾಡುತ್ತವೆ?

ವಾಹನ ಚಾಲಕರು ತಮ್ಮ ವಾಹನಗಳಿಂದ ಬ್ಯಾಟರಿಗಳನ್ನು ತೆಗೆದು ಪ್ರತ್ಯೇಕವಾಗಿ ಚಾರ್ಜ್ ಮಾಡಬಹುದು. ಒಂದು ಬ್ಯಾಟರಿ ಚಾರ್ಜ್ ಆಗುತ್ತಿರುವಾಗ, ಅದನ್ನು ತೆಗೆದುಹಾಕಬಹುದು. ಮತ್ತೊಂದು ಬ್ಯಾಟರಿ ಜೋಡಣೆ ಮಾಡಬಹುದು. ಇಂತಹ ಬ್ಯಾಟರಿಗಳಿಂದ ನಿರಂತರವಾಗಿ ತಮ್ಮ ಪ್ರಯಾಣ ಮುಂದುವರಿಸಬಹುದು. ಇಂತಹ ಸೌಲಭ್ಯವನ್ನು ಈಗ ಕೆಲವೇ ರಾಷ್ಟ್ರಗಳು ಒದಗಿಸುತ್ತವೆ. ಕಂಪನಿಗಳು ಗೊತ್ತುಪಡಿಸಿದ ಸ್ಥಳಗಳಲ್ಲಿ ಚಾರ್ಜಿಂಗ್ ಪಾಯಿಂಟ್‌ ಹೊಂದಿಸುತ್ತವೆ. ಸಂಪೂರ್ಣವಾಗಿ ಚಾರ್ಜ್ ಮಾಡಿದ ಬ್ಯಾಟರಿಯನ್ನು ಅಲ್ಲಿ ಇರಿಸಬಹುದು. ಸಂಪೂರ್ಣವಾಗಿ ಚಾರ್ಜ್ ಆಗಿರುವ ಮತ್ತೊಂದು ಬ್ಯಾಟರಿಯನ್ನು ತೆಗೆದುಕೊಳ್ಳಬಹುದು.

Last Updated : Mar 2, 2021, 8:46 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.