ನವದೆಹಲಿ: ಇತ್ತೀಚೆಗೆ ಮುಕ್ತಾಯವಾದ ಬಾರ್ಡರ್ - ಗವಾಸ್ಕರ್ ಸರಣಿಯ ಅಂತಿಮ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡ ಭರ್ಜರಿಯಾಗಿ ಜಯಗಳಿಸಿದ್ದು, ವಿಶ್ವದಾದ್ಯಂತ ಪ್ರಶಂಸೆಗಳ ಮಹಾಪುರವೇ ಹರಿದು ಬಂದಿತ್ತು. ಈಗ ಮೊದಲ ಬಾರಿಗೆ ಟೆಸ್ಟ್ ಕ್ಯಾಪ್ ಧರಿಸಿದ್ದ ಯುವ ಆಟಗಾರರಿಗೆ ಆನಂದ್ ಮಹೀಂದ್ರಾ ಭರ್ಜರಿ ಉಡುಗೊರೆ ನೀಡಿದ್ದಾರೆ.
ಗಬ್ಬಾ ಕ್ರೀಡಾಂಗಣದಲ್ಲಿ ಆಸ್ಟ್ರೇಲಿಯಾ ತಂಡ ನೀಡಿದ್ದ 328 ರನ್ಗಳ ಬೃಹತ್ ಮೊತ್ತವನ್ನು ಬೆನ್ನಟ್ಟಿದ ಭಾರತ ತಂಡದ ರಿಷಭ್ ಪಂತ್, ಶುಭಮನ್ ಗಿಲ್, ಚೇತೇಶ್ವರ್ ಪೂಜಾರ ಅವರ ತಾಳ್ಮೆಯ ಆಟದ ನೆರವಿನಿಂದ ಟೀಂ ಇಂಡಿಯಾ 32 ವರ್ಷಗಳಿಂದ ಗೆಲುವೇ ಕಾಣದಿದ್ದ ಬ್ರಿಸ್ಬೇನ್ನಲ್ಲಿ 3 ವಿಕೆಟ್‌ಗಳಿಂದ ಜಯ ಸಾಧಿಸಿ ಬಾರ್ಡರ್ ಗವಾಸ್ಕರ್ ಟ್ರೋಫಿಯನ್ನು ಮುಡಿಗೇರಿಸಿಕೊಂಡಿತ್ತು.
ಡೌನ್ ಅಂಡರ್ ಎಂಬ ಅದ್ಭುತ ಸರಣಿ ಗೆದ್ದಿದ್ದಕ್ಕಾಗಿ ಯುವ ಭಾರತೀಯ ತಂಡವನ್ನು ಜಗತ್ತು ಪ್ರಶಂಸಿಸುತ್ತಿರುವುದರಿಂದ ಉದ್ಯಮಿ ಆನಂದ್ ಮಹೀಂದ್ರಾ ಅವರು ಮಹೀಂದ್ರಾ ಥಾರ್ ಎಸ್‌ಯುವಿಯನ್ನು ತಂಡದ ಆರು ಸದಸ್ಯರಿಗೆ ಉಡುಗೊರೆಯಾಗಿ ನೀಡುವುದಾಗಿ ಘೋಷಿಸಿದ್ದಾರೆ.
-
Theirs are true ‘Rise’ stories; overcoming daunting odds in the pursuit of excellence. They serve as an inspiration in all arenas of life. It gives me great personal pleasure to gift each of these debutants an All New THAR SUV on my own account—at no expense to the company. (2/3) pic.twitter.com/5aiHSbOAl1
— anand mahindra (@anandmahindra) January 23, 2021 " class="align-text-top noRightClick twitterSection" data="
">Theirs are true ‘Rise’ stories; overcoming daunting odds in the pursuit of excellence. They serve as an inspiration in all arenas of life. It gives me great personal pleasure to gift each of these debutants an All New THAR SUV on my own account—at no expense to the company. (2/3) pic.twitter.com/5aiHSbOAl1
— anand mahindra (@anandmahindra) January 23, 2021Theirs are true ‘Rise’ stories; overcoming daunting odds in the pursuit of excellence. They serve as an inspiration in all arenas of life. It gives me great personal pleasure to gift each of these debutants an All New THAR SUV on my own account—at no expense to the company. (2/3) pic.twitter.com/5aiHSbOAl1
— anand mahindra (@anandmahindra) January 23, 2021
ಇತ್ತೀಚಿನ ಐತಿಹಾಸಿಕ ಭಾರತ- ಆಸ್ಟ್ರೇಲಿಯಾ ಟೆಸ್ಟ್ ಸರಣಿಯಲ್ಲಿ ಆರು ಯುವಕರು ತಮ್ಮ ಚೊಚ್ಚಲ ಪ್ರವೇಶವನ್ನು ಮಾಡಿದರು. ಅವರೆಲ್ಲ ಭಾರತದ ಭವಿಷ್ಯದ ಪೀಳಿಗೆಯ ಯುವಕರಿಗೆ ಕನಸು ಕಾಣಲು ಮತ್ತು ಅಸಾಧ್ಯ ಎಂಬುದನ್ನು ಅನ್ವೇಷಿಸಿ ಅದನ್ನು ಹೇಗೆಂಬುದನ್ನು ಸಾಧ್ಯವಾಗಿಸಿದ್ದಾರೆ ಎಂದು ಬರೆದುಕೊಂಡಿದ್ದಾರೆ.
ಇದನ್ನೂ ಓದಿ: ಹೊಸೂರಲ್ಲಿ ಮುತ್ತೂಟ್ ಫೈನಾನ್ಸ್ಗೆ ನುಗ್ಗಿ 7 ಕೋಟಿ ಚಿನ್ನ ದರೋಡೆ: ಹೈದರಾಬಾದ್ನಲ್ಲಿ 6 ಖದೀಮರ ಬಂಧನ!
ಅವರದು ನಿಜವಾದ ‘ರೈಸ್’ (ಉಗಮ) ಸ್ಟೋರಿ. ಹೊಸತನದ ಶ್ರೇಷ್ಠ ಅನ್ವೇಷಣೆಯಲ್ಲಿ ಧೈರ್ಯ ತೋರಿದ್ದಾರೆ. ಜೀವನದ ಎಲ್ಲ ರಂಗಗಳಲ್ಲಿ ಸ್ಫೂರ್ತಿಯಾಗಿ ಕಾರ್ಯನಿರ್ವಹಿಸುತ್ತಾರೆ. ಕಂಪನಿಗೆ ಯಾವುದೇ ವೆಚ್ಚವಿಲ್ಲದೇ ಈ ಪ್ರತಿಯೊಬ್ಬ ಚೊಚ್ಚಲ ಆಟಗಾರರಿಗೆ ನನ್ನ ಸ್ವಂತ ಖಾತೆಯಲ್ಲಿ ಆಲ್ ನ್ಯೂ ಥಾರ್ ಎಸ್ಯುವಿಯನ್ನು ಉಡುಗೊರೆಯಾಗಿ ನೀಡಲು ನನಗೆ ಅತೀವ ಸಂತೋಷವಾಗುತ್ತಿದೆ ಎಂದರು.
ಈ ಉಡುಗೊರೆಗೆ ಕಾರಣವೆಂದರೆ ಯುವಕರು ತಮ್ಮ ಮೇಲೆ ಅಪಾರ ಭರವಸೆ ಇರಿಸಿಕೊಂಡು, ಕಡಿಮೆ ಪ್ರಯಾಣದ ಹಾದಿ ಹಿಡಿದು ಸಾಧಿಸಿದ್ದಾರೆ. ಅದನ್ನು ಪ್ರಚೋದಿಸುವುದಕ್ಕೆ. ಮೊಹಮ್ಮದ್, ಶಾರ್ದುಲ್, ಶುಭಮನ್, ನಟರಾಜನ್, ನವದೀಪ್ ಮತ್ತು ವಾಷಿಂಗ್ಟನ್ ಅವರಿಗೆ ಮಹೀಂದ್ರಾ ಥಾರ್ ಅನ್ನು ಆದ್ಯತೆಯ ಮೇಲೆ ಪಡೆಯುವಂತೆ ನಾನು ಮನವಿ ಮಾಡುತ್ತೇನೆ ಎಂದು ಟ್ವೀಟ್ ಮಾಡಿದ್ದಾರೆ.