ನವದೆಹಲಿ: ಅಮೆಜಾನ್ ಮತ್ತು ಫ್ಯೂಚರ್ ಗ್ರೂಪ್ ನಡುವಿನ ಕಾನೂನು ಜಗಳ ಮುಂದುವರಿದಿದ್ದು, ಫ್ಯೂಚರ್ ಗ್ರೂಪ್ನಲ್ಲಿ ಕೆಲಸ ಮಾಡುವ ಮಹಿಳೆಯರ ತಂಡ, ವಿಮೆನ್ ಆಫ್ ಬಿಗ್ ಬಜಾರ್ ಎಸ್‌ಒಎಸ್ ಪ್ರಧಾನಿ ನರೇಂದ್ರ ಮೋದಿಯವರಿಗೆ ಮನವಿ ಪತ್ರ ಬರೆದು, ತಮ್ಮ ಜೀವನೋಪಾಯ ರಕ್ಷಿಸಲು ಬೆಂಬಲ ನೀಡುವಂತೆ ಕೋರಿದೆ.
ಫ್ಯೂಚರ್ ರಿಟೇಲ್ ಮತ್ತು ರಿಲಯನ್ಸ್ ಒಂದು ಒಪ್ಪಂದ ಮಾಡಿಕೊಂಡಿದ್ದು, ಆ ಮೂಲಕ ಫ್ಯೂಚರ್ ರಿಟೇಲ್ ಅಂಗಡಿಗಳನ್ನು ರಿಲಯನ್ಸ್ ನಿರ್ವಹಿಸುವುದನ್ನು ಮುಂದುವರೆಸಿದೆ. ಫ್ಯೂಚರ್ ರಿಟೇಲ್ ಸರಬರಾಜುದಾರರು ಮತ್ತು ಮಾರಾಟಗಾರರಿಗೆ ನೀಡಬೇಕಿರುವ ಎಲ್ಲಾ ಸಾಲ ಮತ್ತು ಬಾಕಿ ಹಣ ನೀಡಲು ರಿಲಯನ್ಸ್ ಸಹ ಬದ್ಧವಾಗಿದೆ ಎಂದು ಪ್ರಧಾನಿ ಅವರಿಗೆ ಬರೆದ ಬಿಗ್ ಬಜಾರ್ ಎಸ್‌ಒಎಸ್ ತಂಡ ಬರೆದ ಪತ್ರದಲ್ಲಿ ಉಲ್ಲೇಖಿಸಿದೆ.
ಸಾಂಕ್ರಾಮಿಕ ಸಮಯದಲ್ಲಿ ನಾವೆಲ್ಲ ಕಠಿಣ ಸಮಯ ಎದುರಿಸುತ್ತಿದ್ದರಿಂದ, ಈ ಒಪ್ಪಂದವು ನಮ್ಮ ಮುಂದಿನ ಜೀವನೋಪಾಯಕ್ಕಾಗಿ ಸಾಕಷ್ಟು ಭರವಸೆ ಮತ್ತು ವಿಶ್ವಾಸ ಒದಗಿಸಿದೆ. ಆದರೆ, ಅಮೆಜಾನ್ ಈ ಒಪ್ಪಂದ ತಡೆಯಲು ಪ್ರಯತ್ನಿಸಿದೆ. ಇದರ ಪರಿಣಾಮವಾಗಿ, ನಮ್ಮ ಭವಿಷ್ಯ ಮತ್ತು ನಮ್ಮ ಕುಟುಂಬಗಳು ಅನಿಶ್ಚಿತತೆಗೆ ಸಿಲುಕುವ ಆತಂಕ ಎದುರಾಗಿದೆ ಎಂದು ಪತ್ರದಲ್ಲಿ ಹೇಳಲಾಗಿದೆ.
ಇದನ್ನೂ ಓದಿ: ಮೈನಸ್ 2.6ಕ್ಕೆ ಕುಗ್ಗಲಿರುವ ಕರ್ನಾಟಕ ಎಸ್ಜಿಡಿಪಿ: ಬಂದಿದ್ದೆಷ್ಟು, ಖರ್ಚಾಗಿದ್ದೆಷ್ಟು?