ನವದೆಹಲಿ : ನೆಟ್‌ಫ್ಲಿಕ್ಸ್, ಹಾಟ್ಸ್ಟಾರ್ನಂತಹ ಪ್ರತಿಸ್ಪರ್ಧೆಗಳ ಮಧ್ಯೆ ವೀಕ್ಷಕರನ್ನು ಆಕರ್ಷಿಸುವ ನಿಟ್ಟಿನಲ್ಲಿ ಅಮೆಜಾನ್ ಪ್ರೈಮ್ ವಿಡಿಯೋ ಭಾರತದಲ್ಲಿ ಮೊಬೈಲ್ಗೆ ಸೀಮಿತವಾದ ಯೋಜನೆ ಪರಿಚಯಿಸುತ್ತಿದ್ದು, ಇದರ ದರ 89 ರೂ.ಯಷ್ಟು ನಿಗದಿಪಡಿಸಿದೆ.
ಟೆಲಿಕಾಂ ಪ್ರಿಪೇಯ್ಡ್ ಗ್ರಾಹಕರಿಗೆ ಈ ಕೊಡುಗೆ ನೀಡಲು ವಿಡಿಯೋ ಸ್ಟ್ರೀಮಿಂಗ್ ಮೇಜರ್ ಏರ್‌ಟೆಲ್ ಜತೆಗೆ ಪಾಲುದಾರಿಕೆ ಒಪ್ಪಂದ ಮಾಡಿಕೊಂಡಿದೆ. ಜಾಗತಿಕವಾಗಿ ಭಾರತ ವೇಗವಾಗಿ ಬೆಳೆಯುತ್ತಿರುವ ಮಾರುಕಟ್ಟೆಗಳಲ್ಲಿ ಒಂದಾಗಿದೆ. ಈ ಪ್ರತಿಕ್ರಿಯೆಯಿಂದ ಉತ್ತೇಜಿತರಾದ ನಾವು ನಮ್ಮ ಪ್ರಯತ್ನಗಳನ್ನು ದ್ವಿಗುಣಗೊಳಿಸಿ ಹೆಚ್ಚಿನ ಪ್ರೇಕ್ಷಕರನ್ನು ತಲುಪಲು ಬಯಸುತ್ತೇವೆ.
ಭಾರತದಲ್ಲಿ ಕೈಗೆಟುಕುವ ಡೇಟಾದ ಸ್ಮಾರ್ಟ್‌ಫೋನ್‌ಗಳಿಂದ ಮನೋರಂಜನೆಯು ಆದ್ಯತೆಯ ಪರದೆಯಾಗಿದೆ ಎಂದು ಅಮೆಜಾನ್ ಪ್ರೈಮ್ ವಿಡಿಯೋ ಇಂಡಿಯಾ ನಿರ್ದೇಶಕ ಗೌರವ್ ಗಾಂಧಿ ಹೇಳಿದರು. ಅಮೆಜಾನ್ ಪ್ರೈಮ್ ವಿಡಿಯೋ ಪ್ರತಿಸ್ಪರ್ಧಿ, ನೆಟ್‌ಫ್ಲಿಕ್ಸ್ ಇದೇ ರೀತಿಯ ಮೊಬೈಲ್ ಸೀಮಿತ ಚಂದಾದಾರಿಕೆ ಯೋಜನೆಯನ್ನು ಭಾರತದಲ್ಲಿ ಕಳೆದ ವರ್ಷ 199 ರೂ.ಗೆ ಪರಿಚಯಿಸಿತ್ತು. ಮೊಬೈಲ್ ಮಾತ್ರ ಯೋಜನೆಗಳಲ್ಲಿ ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್ ದೊಡ್ಡ ಪ್ರೇಕ್ಷಕರನ್ನು ತಲುಪಲು ನೆರವಾಗುತ್ತದೆ.
ಇದನ್ನೂ ಓದಿ: ಭಾರತೀಯ ಮಾರುಕಟ್ಟೆಯ ನಿರೀಕ್ಷೆಗಳನ್ನು ಈಡೇರಿಸುತ್ತೇವೆ: ಸಿಗ್ನಲ್ ಸಹ-ಸಂಸ್ಥಾಪಕ ಅಭಯ
ಪ್ರೈಮ್ ವಿಡಿಯೋ ಮೊಬೈಲ್ ಆವೃತ್ತಿ ಏಕ ಬಳಕೆದಾರ ಮೊಬೈಲ್ ಓನ್ಲಿ ಯೋಜನೆಯಾಗಿದ್ದು, ಗ್ರಾಹಕರಿಗೆ ಎಸ್‌ಡಿ ಗುಣಮಟ್ಟದ ಸ್ಟ್ರೀಮಿಂಗ್ ಸೇವೆ ಲಭ್ಯವಾಗಲಿದೆ. ಇದನ್ನು ವಿಶೇಷವಾಗಿ ಭಾರತದಂತಹ ಮೊಬೈಲ್ಗಳಿಗೆ ಪರಿಚಯಿಸಲಾಗುತ್ತಿದೆ ಎಂದು ಹೇಳಿದರು.
ಭಾರತದಲ್ಲಿ ಪ್ರೈಮ್ ವಿಡಿಯೋ ಮೊಬೈಲ್ ಎಡಿಷನ್ ಬಿಡುಗಡೆಯ ಭಾಗವಾಗಿ ಪ್ರಿಪೇಯ್ಡ್ ಪ್ಯಾಕ್‌ಗಳಲ್ಲಿ ಇರುವ ಎಲ್ಲಾ ಏರ್‌ಟೆಲ್ ಗ್ರಾಹಕರು ತಮ್ಮ ಮೊಬೈಲ್ ಸಂಖ್ಯೆ ಬಳಸಿಕೊಂಡು ಏರ್‌ಟೆಲ್ ಥ್ಯಾಂಕ್ ಅಪ್ಲಿಕೇಶನ್‌ನಿಂದ ಅಮೆಜಾನ್‌ಗೆ ಸೈನ್ ಅಪ್ ಮಾಡುವ ಮೂಲಕ 30 ದಿನಗಳ ಉಚಿತ ಚಂದಾದಾರಿಕೆ ಪಡೆಯಬಹುದು.
30 ದಿನಗಳ ನಂತರ ಏರ್‌ಟೆಲ್ ಗ್ರಾಹಕರು ಪ್ರೈಮೇಡ್ ರೀಚಾರ್ಜ್ ಮೂಲಕ ಪ್ರೈಮ್ ವಿಡಿಯೋ ಮೊಬೈಲ್ ಆವೃತ್ತಿಯನ್ನು 89 ರೂ.ಯಿಂದ ಪ್ರಾರಂಭಿಸಿ 28 ದಿನಗಳ ಪ್ರವೇಶವನ್ನು 6ಜಿಬಿ ಡೇಟಾ ಸಹ ಪಡೆಯಬಹುದಾಗಿದೆ. ಅಮೆಜಾನ್‌ನ ಪ್ರೈಮ್ ಕೊಡುಗೆಯ ಭಾಗವಾಗಿ ಅಮೆಜಾನ್ ಪ್ರೈಮ್ ವಿಡಿಯೋ ಲಭ್ಯವಾಗಲಿದ್ದು, ವಾರ್ಷಿಕ 999 ರೂ. ಅಥವಾ ತಿಂಗಳಿಗೆ 129 ರೂ.ಯಲ್ಲಿ ಲಭ್ಯವಿದೆ.