ನವದೆಹಲಿ: ಟೆಲಿಕಾಂ ದೈತ್ಯ ಭಾರ್ತಿ ಏರ್‌ಟೆಲ್ ಮತ್ತು ಕ್ವಾಲ್ಕಾಮ್ ಟೆಕ್ನಾಲಜೀಸ್ ಇಂಕ್ ಭಾರತದಲ್ಲಿ 5ಜಿ ಸೇವೆ ನೀಡಿಕೆ ವೇಗಗೊಳಿಸಲು ತಮ್ಮ ಜಂಟಿ ಸಹಯೋಗ ಪ್ರಕಟಿಸಿವೆ.
ಇತ್ತೀಚೆಗೆ ಹೈದರಾಬಾದ್ನಲ್ಲಿ ಲೈವ್ ವಾಣಿಜ್ಯ ಜಾಲದ ಮೂಲಕ 5ಜಿ ಪ್ರದರ್ಶಿಸಿದ ಭಾರತದ ಮೊದಲ ಟೆಲಿಕಾಂ ಕಂಪನಿ ಎಂಬ ಹೆಗ್ಗಳಿಕೆಗೆ ಏರ್‌ಟೆಲ್ ಪಾತ್ರವಾಯಿತು.
ತನ್ನ ನೆಟ್‌ವರ್ಕ್ ಮಾರಾಟಗಾರರು ಮತ್ತು ಸಾಧನಗಳ ಪಾಲುದಾರರ ಮೂಲಕ ಟೆಲಿಕಾಂ ಕ್ವಾಲ್ಕಾಮ್ 5ಜಿ ಒಪನ್ ರಾನ್ ಪ್ಲಾಟ್‌ಫಾರ್ಮ್‌ಗಳನ್ನು ವರ್ಚುವಲೈಸ್ಡ್ ಹಾಗೂ ರಾನ್ ಆಧಾರಿತ 5ಜಿ ನೆಟ್‌ವರ್ಕ್ ಬಳಸಿಕೊಳ್ಳಲಾಗುವುದು ಎಂದು ಏರ್‌ಟೆಲ್ ಪ್ರಕಟಣೆಯಲ್ಲಿ ತಿಳಿಸಿದೆ.
ಇದನ್ನೂ ಓದಿ: ಐವರು ಹೂಡಿಕೆದಾರರಿಂದ 1,800 ಕೋಟಿ ಸಂಗ್ರಹಿಸಿದ ಜೊಮ್ಯಾಟೋ
ಒ -ರಾನ್ ಅಲೈಯನ್ಸ್ ಮಂಡಳಿಯ ಸದಸ್ಯರಾಗಿ ಏರ್‌ಟೆಲ್, ಒ-ರಾನ್‌ನ ಯಶಸ್ಸನ್ನು ಹೆಚ್ಚಿಸಲು ಬದ್ಧವಾಗಿದೆ. ಕ್ವಾಲ್ಕಾಮ್ ಟೆಕ್ನಾಲಜೀಸ್ ಜತೆಗೆ ಭಾರತದಲ್ಲಿ ಒ-ರಾನ್ ವಿಧಾನ ಅನ್ವೇಷಣೆ ಮತ್ತು ಕಾರ್ಯಗತಗೊಳಿಸಲು ಕಾರ್ಯ ನಿರತವಾಗಲಿದೆ ಎಂದಿದೆ.