ETV Bharat / business

ಏರ್‌ಇಂಡಿಯಾ ಸಾಫ್ಟ್​ವೇರ್‌ನಲ್ಲಿ ದೋಷ, 137 ವಿಮಾನಗಳ ಹಾರಾಟ ವ್ಯತ್ಯಯ - undefined

ಏರ್‌ ಇಂಡಿಯಾದ ಸಾಫ್ಟ್‌ವೇರ್‌ನಲ್ಲಿ ಉಂಟಾದ ದೋಷದ ಹಿನ್ನೆಲೆಯಲ್ಲಿ ಇವತ್ತೂ ಕೂಡ ವಿಮಾನ ಹಾರಾಟದಲ್ಲಿ ವ್ಯತ್ಯಯ ಕಂಡುಬಂತು.

ಚಿತ್ರ ಕೃಪೆ: ಗೆಟ್ಟಿ
author img

By

Published : Apr 28, 2019, 1:45 PM IST

ನವದೆಹಲಿ: ಏರ್‌ಇಂಡಿಯಾದ ಚೆಕ್​ಇನ್​ ಸಾಫ್ಟ್​ವೇರ್​ ಶನಿವಾರ ಬೆಳಿಗ್ಗೆ 5 ಗಂಟೆಗಳ ಕಾಲ ಸ್ಥಗಿತಗೊಂಡ ಪರಿಣಾಮ ದೇಶಾದ್ಯಂತ 137 ವಿಮಾನಗಳ ಹಾರಾಟದಲ್ಲಿ ವಿಳಂಬವಾಗಿದ್ದು, ಭಾನುವಾರವೂ ಈ ವಿಳಂಬ ಮುಂದುವರಿದಿದೆ.

ಶನಿವಾರ ಬೆಳಿಗಿನಿಂದಲೇ ಏರ್​ ಇಂಡಿಯಾದ ಪ್ಯಾಸೆಂಜರ್​ ಸರ್ವಿಸ್​ ಸಿಸ್ಟಂ (ಪಿಎಸ್​ಎಸ್​) ತಂತ್ರಾಂಶ ಸರಿಯಾಗಿ ಕೆಲಸ ಮಾಡದ ಕಾರಣ ಸಾವಿರಾರು ಪ್ರಯಾಣಿಕರು ಸಕಾಲದಲ್ಲಿ ವಿಮಾನ ಸೇವೆ ಲಭ್ಯವಾಗದೆ ತೊಂದರೆ ಅನುಭವಿಸಿದರು. ಇದರಿಂದಾಗಿ ಚೆಕ್​​-ಇನ್​, ಬ್ಯಾಗೇಜ್​ ಹಾಗೂ ರಿಸರ್ವೇಷನ್​ ಪ್ರಕ್ರಿಯೆಗಳಲ್ಲಿ ವ್ಯತ್ಯಯವಾಗಿತ್ತು. ನಸುಕಿನ 3:30ರಿಂದ 8:45ರ ವರೆಗೆ ಸಾಫ್ಟ್​ವೇರ್​ನಲ್ಲಿ ಸಮಸ್ಯೆ ಕಾಣಿಸಿಕೊಂಡಿದೆ.

ನಿನ್ನೆಯ ಘಟನೆಗೆ ಇವತ್ತೂ ಕೂಡ 137 ವಿಮಾನಗಳ ಹಾರಾಟದಲ್ಲಿ ಸರಾಸರಿ 197 ನಿಮಿಷಗಳ ಕಾಲ ವಿಳಂಬವಾಗಿದೆ ಎಂದು ಏರ್ ಇಂಡಿಯಾ ವಕ್ತಾರರು ತಿಳಿಸಿದ್ದಾರೆ.

ಒಂದು ವಿಮಾನ ಹಾರಾಟ ಒಂದು ಸೆಕ್ಟರ್​ನಲ್ಲಿ ವಿಳಂಬವಾದರೆ ಎರಡು ಮತ್ತು ಮೂರನೇ ಸೆಕ್ಟರ್​ಗಳಲ್ಲೂ ಅದರ ಪರಿಣಾಮವಿರುತ್ತದೆ. ಉದಾಹರಣೆಗೆ ದೆಹಲಿ- ಮುಂಬೈ ಒಂದು ಸೆಕ್ಟರ್​, ಮುಂಬೈ- ಬೆಂಗಳೂರು ಮತ್ತೊಂದು ಸೆಕ್ಟರ್​, ಬೆಂಗಳೂರು- ಚೆನ್ನೈ ಮೂರನೇ ಸೆಕ್ಟರ್​ ಎಂದು ಪರಿಗಣಿಸಲಾಗುತ್ತದೆ.

ಏರ್​ ಇಂಡಿಯಾ ಸಮೂಹದ ಅಲಾಯನ್ಸ್​ ಏರ್​ ಹಾಗೂ ಏರ್ ಇಂಡಿಯಾ ಎಕ್ಸ್​ಪ್ರೆಸ್​ ಸೇರಿದಂತೆ 674 ವಿಮಾನಗಳು ನಿತ್ಯ ಹಾರಾಟ ನಡೆಸುತ್ತಿವೆ.

Intro:Body:Conclusion:

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.