ಮುಂಬೈ: ಏರ್ ಇಂಡಿಯಾ 80 ಸಾವಿರ ಕೋಟಿ ರೂ. ಸಾಲದ ಸುಳಿಯಲ್ಲಿದ್ದು, ಕೇಂದ್ರ ಸರ್ಕಾರಕ್ಕೆ ಖಾಸಗೀರಣ ಬಿಟ್ಟು ಬೇರೆಯಾವುದೇ ಮಾರ್ಗಳಿಲ್ಲ. ಇದಕ್ಕೆ ಉದ್ಯೋಗಿಗಳ ಸಹಕರ ಅಗತ್ಯವಿದೆ ಎಂದು ವಿಮಾನಯಾನ ಸಚಿವ ಹರ್ದೀಪ್ ಸಿಂಗ್ ಪುರಿ ಹೇಳಿದರು.
ದೆಹಲಿಯಲ್ಲಿ ಏರ್ ಇಂಡಿಯಾದ 13 ಸಂಘಟನೆಗಳ ಸದಸ್ಯರೊಂದಿಗೆ ಸಭೆ ನಡೆಸಿ ಬಳಿಕ ಮಾತನಾಡಿದ ಅವರು, ಏರ್ ಇಂಡಿಯಾ ಖಾಸಗೀಕರಣ ಪ್ರಕ್ರಿಯೆಗಳು ಚುರುಕುಗೊಳ್ಳಬೇಕಾದರೆ ಸಂಸ್ಥೆಯ ಉದ್ಯೋಗಿಗಳು ದಯವಿಟ್ಟು ಇದಕ್ಕೆ ಸಹಕಾರ ನೀಡಿಬೇಕು ಎಂದು ಮನವಿಮಾಡಿದರು.
ಪ್ರಸ್ತುತ ಎಐ, 80 ಸಾವಿರ ಕೋಟಿ ರೂ.ಯಷ್ಟು ಸಾಲದ ಸುಳಿಯಲ್ಲಿದೆ. ಖಾಸಗೀಕರಣ ಬಿಟ್ಟರೇ ನಮಗೆ ಬೇರೆ ಯಾವುದೇ ದಾರಿ ಇಲ್ಲ. ಖಾಸಗೀಕರಣ ಬಳಿಕ ಉದ್ಯೋಗಿಗಳ ಉದ್ಯೋಗ ಭದ್ರತೆಯು ನಮ್ಮ ಕಾಳಜಿ ಆಗಿರಲಿದೆ ಎಂದು ಭರವಸೆ ನೀಡಿದರು.