ನವದೆಹಲಿ: ಖಾಸಗೀಕರಣಕ್ಕೆ ಒಳಪಟ್ಟ ಅಹಮದಾಬಾದ್, ಲಖನೌ ಮತ್ತು ಮಂಗಳೂರು ವಿಮಾನ ನಿಲ್ದಾಣಗಳ ಸ್ವಾಧೀನಪಡಿಸಿಕೊಳ್ಳುವ ಗಡುವು ವಿಸ್ತರಿಸುವಂತೆ ಅದಾನಿ ಗ್ರೂಪ್, ಭಾರತದ ವಿಮಾನ ನಿಲ್ದಾಣ ಪ್ರಾಧಿಕಾರಕ್ಕೆ ಮನವಿ ಮಾಡಿದೆ.
ವಾಯುಯಾನ ಕ್ಷೇತ್ರದಲ್ಲಿ ಕೋವಿಡ್ -19 ಸಾಂಕ್ರಾಮಿಕ ರೋಗದಿಂದ ಉಂಟಾದ ಅಡ್ಡಿಗಳನ್ನು ಉಲ್ಲೇಖಿಸಿ, ಪಾವತಿ ಗಡುವು ಮುಂದೂಡುವಂತೆ ಫೋರ್ಸ್ ಮಜೂರ್ ಷರತ್ತು ವಿಧಿಸುವಂತೆ ಕಂಪನಿಯು ಎಎಐಗೆ ಸೂಚಿಸಿದೆ ಎಂದು ಮೂಲಗಳು ತಿಳಿಸಿವೆ.
ಫೋರ್ಸ್ ಮಜೂರ್ ಎನ್ನುವುದು ಒಪ್ಪಂದಗಳಲ್ಲಿನ ಸಾಮಾನ್ಯ ಷರತ್ತು. ನಿಯಂತ್ರಣ ಮೀರಿದ ಅಸಾಮಾನ್ಯ ಘಟನೆ ಅಥವಾ ಯುದ್ಧ, ಗಲಭೆ, ಸಾಂಕ್ರಾಮಿಕ ರೋಗ, ಚಂಡಮಾರುತ, ಪ್ರವಾಹ, ಭೂಕಂಪ ಅಥವಾ ಆಕ್ಟ್ ಆಫ್ ಗಾಡ್ನಿಂ ವಿವರಿಸಲ್ಪಟ್ಟ ಘಟನೆ (ಎರಡೂ ಪಾರ್ಟಿಗಳ ಹೊಣೆಗಾರಿಕೆ ಅಥವಾ ಬಾಧ್ಯತೆಯನ್ನು ಮುಕ್ತಗೊಳಿಸುತ್ತದೆ) ಒಂದು ಅಥವಾ ಎರಡೂ ಪಕ್ಷಗಳು ಒಪ್ಪಂದದಡಿ ತಮ್ಮ ಜವಾಬ್ದಾರಿಗಳನ್ನು ಪೂರೈಸದಂತೆ ತಡೆಯುತ್ತದೆ.
ನಮ್ಮ ಕಾನೂನು ಪರಿಣಿತರ ತಂಡಗಳು ಅದಾನಿ ಗ್ರೂಪ್ನ ವಿನಂತಿಯನ್ನು ಪರಿಶೀಲಿಸುತ್ತಿವೆ. ಈ ಸಮಯದಲ್ಲಿ ಹೆಚ್ಚಿನದನ್ನು ಹೇಳಲು ಆಗುವುದಿಲ್ಲ ಎಂದು ಹಿರಿಯ ಎಎಐ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಟೆಂಡರ್ ಪ್ರಕ್ರಿಯೆಯು 2019ರ ಫೆಬ್ರವರಿಯಲ್ಲಿ ಮುಕ್ತಾಯಗೊಂಡಿತು. ಅದಾನಿ ಸಮೂಹವು ತನ್ನ ಆಕ್ರಮಣಕಾರಿ ಬಿಡ್‌ಗಳಿಂದ ಉದ್ಯಮವನ್ನೇ ಅಚ್ಚರಿಗೆ ತಳಿತ್ತು. ಕೊರೊನಾ ವೈರಸ್ ಸಾಂಕ್ರಾಮಿಕವು ಈಗ ಆ ಒಪ್ಪಂದದ ಮೇಲೆ ಪರಿಣಾಮ ಬೀರುತ್ತಿದೆ ಎಂದು ಹೇಳಿದರು.
ಎಎಐ ತನ್ನ ಆರು ವಿಮಾನ ನಿಲ್ದಾಣಗಳನ್ನು 2019ರಲ್ಲಿ ಬಿಡ್ ಮಾಡಿತ್ತು. ಅದಾನಿ ಸಮೂಹವು ಎಲ್ಲ ಆರು ವಿಮಾನ ನಿಲ್ದಾಣಗಳಿಗೆ ಅತಿ ಹೆಚ್ಚು ಬಿಡ್ದಾರನಾಗಿ ಹೊರಹೊಮ್ಮಿತ್ತು. ಕಂಪನಿಯು 50 ವರ್ಷಗಳವರೆಗೆ ವಿಮಾನ ನಿಲ್ದಾಣಗಳನ್ನು ನಿರ್ವಹಿಸುವ ಹಕ್ಕನ್ನು ಹೊಂದಿದೆ. ಆದರೆ ಜೈಪುರ, ತಿರುವನಂತಪುರ ಮತ್ತು ಮಂಗಳೂರಿನಲ್ಲಿ ಇರುವವರು ಈಗಾಗಲೇ ದಾವೆಗಳಲ್ಲಿ ಸಿಲುಕಿಕೊಂಡಿದ್ದಾರೆ. ಹೀಗಾಗಿ, ಅದಾನಿ ಗ್ರೂಪ್ ಎಎಐ ಜೊತೆ ಯಾವುದೇ ಒಪ್ಪಂದಕ್ಕೆ ಸಹಿ ಹಾಕಿಲ್ಲ.