ನವದೆಹಲಿ: ಅದಾನಿ ಬಂದರು ಮತ್ತು ವಿಶೇಷ ಆರ್ಥಿಕ ವಲಯಗಳ ಲಿಮಿಟೆಡ್‌ನ ಭಾಗವಾದ ಅದಾನಿ ಅಗ್ರಿ ಲಾಜಿಸ್ಟಿಕ್ಸ್ ಲಿಮಿಟೆಡ್ (ಎಎಎಲ್ಎಲ್), ಲಾಕ್‌ಡೌನ್ ವೇಳೆಯಲ್ಲಿ 30,000 ಟನ್ ಆಹಾರ ಧಾನ್ಯಗಳನ್ನು ರವಾನಿಸಲು ನೆರವಾಗಿದೆ.
ಇದುವರೆಗಿನ ಲಾಕ್‌ಡೌನ್ ಅವಧಿಯಲ್ಲಿ ತಮಿಳುನಾಡು, ಕರ್ನಾಟಕ, ಮಹಾರಾಷ್ಟ್ರ, ಬಂಗಾಳ ಸೇರಿದಂತೆ ವಿವಿಧ ರಾಜ್ಯಗಳಲ್ಲಿನ 60 ಲಕ್ಷ ಜನರಿಗೆ ಆಹಾರ ನೀಡುವುದಕ್ಕೆ ಸಮಾನವಾಗಿದೆ ಇದರ ಪೂರೈಕೆ.
ಉತ್ತರ ಭಾರತದಲ್ಲಿನ ಉತ್ಪಾದನಾ ಕೇಂದ್ರಗಳಿಂದ ಆಹಾರ ಕೇಂದ್ರಗಳನ್ನು ಬಳಕೆ ಕೇಂದ್ರಗಳಿಗೆ ಸಾಗಿಸಲು ಕಂಪನಿ, ತನ್ನ ಒಡೆತನದ ಏಳು ರೈಲುಗಳನ್ನು ಬಳಸಿತು. ಮಧ್ಯಪ್ರದೇಶ ಸರ್ಕಾರ ಜತೆಗೂಡಿ 2020ರ ಏಪ್ರಿಲ್ 15ರಿಂದ ತನ್ನ ಸಂಸ್ಕರಣ ಘಟಕಗಳಲ್ಲಿ ಸಾಕಷ್ಟು ಸುರಕ್ಷತೆ ಮತ್ತು ಮುನ್ನೆಚ್ಚರಿಕೆ ಕ್ರಮಗಳನ್ನು ವಹಿಸಿ ಗೋಧಿ ಖರೀದಿ ಪ್ರಕ್ರಿಯೆ ಸಹ ಆರಂಭಿಸಿದೆ.
ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಯೋಜನೆ (ಪಿಎಂಜಿಕೆಎ) ಸೇರಿ ಇತರ ರಾಷ್ಟ್ರೀಯ ಕಲ್ಯಾಣ ಯೋಜನೆಗಳಲ್ಲದೇ ಮುಂದಿನ 3 ತಿಂಗಳವರೆಗೆ ಎಲ್ಲಾ ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ (ಎನ್‌ಎಫ್‌ಎಸ್‌ಎ) ಫಲಾನುಭವಿಗಳಿಗೆ 5 ಕೆಜಿ ಆಹಾರ ಧಾನ್ಯಗಳನ್ನು ಉಚಿತವಾಗಿ ವಿತರಿಸಲು ನಿರ್ಧರಿಸಿದೆ.