ETV Bharat / business

10 ವರ್ಷ ಆಗುವುದನ್ನು 10 ತಿಂಗಳಲ್ಲಿ 3 ಲಸಿಕೆ ಶೋಧಿಸಿದ ವೈದ್ಯರನ್ನು ನೋಡಿ ಕಲಿಯಿರಿ : ಆನಂದ್ ಮಹೀಂದ್ರಾ - ಕೋವಿಡ್​ ಬಿಕ್ಕಟ್ಟು ಮರುಶೋಧನೆ

ಕೋವಿಡ್​ ಲಸಿಕೆ ಅಭಿವೃದ್ಧಿಗಳು ನಮಗೆ ಹಲವು ಪಾಠಗಳನ್ನು ಕಲಿಸಿದೆ. ಸಂಶೋಧಕರು ಮತ್ತು ನಿಯಂತ್ರಕರು ಕೋವಿಡ್​ ಲಸಿಕೆ ಅಭಿವೃದ್ಧಿ ಪ್ರಕ್ರಿಯೆಯನ್ನು ವೇಗವಾಗಿ 10 ತಿಂಗಳಲ್ಲಿ ಕೈಗೊಂಡಿದ್ದಾರೆ. ಅವರ ಶ್ರಮ ಇಲ್ಲದಿದ್ದರೆ 10 ವರ್ಷಗಳು ಬೇಕಾಗುತ್ತವೆ. ಇದರಿಂದ ಕಲಿಯಬೇಕಾದ ಸಾಲಷ್ಟು ಪಾಠಗಳಿವೆ..

Anand Mahindra
ಆನಂದ್ ಮಹೀಂದ್ರಾ
author img

By

Published : Jan 4, 2021, 5:35 PM IST

ನವದೆಹಲಿ : ಮಹೀಂದ್ರಾ ಸಮೂಹವು ಕೋವಿಡ್​-19 ಬಿಕ್ಕಟ್ಟಿನಿಂದ ಸದೃಢವಾಗಿ ಹೊರ ಬಂದಿದೆ. ವಿಚಿತ್ರ ಮತ್ತು ಕೆಟ್ಟದಾದ 2020ರ ವರ್ಷವು 2021ರಲ್ಲಿ 'ಮರುಶೋಧನೆ ಮತ್ತು ಪುನರುತ್ಪಾದನೆಯ' ವರ್ಷವಾಗಿ ಪರಿವರ್ತಿಸಲಾಗುವುದು ಎಂದು ಗ್ರೂಪ್​ ಅಧ್ಯಕ್ಷ ಆನಂದ್ ಮಹೀಂದ್ರಾ ತಿಳಿಸಿದ್ದಾರೆ.

100 ರಾಷ್ಟ್ರಗಳ 2.56 ಲಕ್ಷ ಉದ್ಯೋಗಿಗಳನ್ನು ಉದ್ದೇಶಿಸಿ ಹೊಸ ವರ್ಷ ಭಾಷಣ ಮಾಡಿದ ಆನಂದ್​ ಮಹೀಂದ್ರಾ, ಕಳೆದ ವರ್ಷ ಸಾಂಕ್ರಾಮಿಕ ರೋಗ ತಂದೊಡ್ಡಿದ ಎಲ್ಲಾ ಸಮಸ್ಯೆಗಳ ನಡುವೆಯೂ ಅನಿರೀಕ್ಷಿತವಾಗಿ ದೊಡ್ಡ ಸಂಗತಿಗಳು ಹೊರಹೊಮ್ಮಿವೆ ಎಂದು ಹೇಳಿದರು.

ಕೋವಿಡ್​ ಲಸಿಕೆ ಅಭಿವೃದ್ಧಿಗಳು ನಮಗೆ ಹಲವು ಪಾಠಗಳನ್ನು ಕಲಿಸಿದೆ. ಸಂಶೋಧಕರು ಮತ್ತು ನಿಯಂತ್ರಕರು ಕೋವಿಡ್​ ಲಸಿಕೆ ಅಭಿವೃದ್ಧಿ ಪ್ರಕ್ರಿಯೆಯನ್ನು ವೇಗವಾಗಿ 10 ತಿಂಗಳಲ್ಲಿ ಕೈಗೊಂಡಿದ್ದಾರೆ. ಅವರ ಶ್ರಮ ಇಲ್ಲದಿದ್ದರೆ 10 ವರ್ಷಗಳು ಬೇಕಾಗುತ್ತವೆ. ಇದರಿಂದ ಕಲಿಯಬೇಕಾದ ಸಾಲಷ್ಟು ಪಾಠಗಳಿವೆ. ಅದರಲ್ಲ ಮುಖ್ಯವಾಗಿ ವ್ಯಾಪಾರ ಚಾಲನೆ, ಮರುಸಜ್ಜು ಮತ್ತು ಮರು ಮೌಲ್ಯಮಾಪನದಂತಹ ಅಂಶಗಳಿವೆ ಎಂದರು.

ಇದರ ಮುಖ್ಯವಾದ ಪಾಠವೆಂದರೆ ವೈದ್ಯಕೀಯ ವಿಜ್ಞಾನವು ತನ್ನ ಸಾಂಪ್ರದಾಯಿಕ ವಿಧಾನವನ್ನು ತ್ಯಜಿಸಿ, ಕೋವಿಡ್​-19ನ ಹೊಸ ಸಮಸ್ಯೆ ನಿಭಾಯಿಸಲು ಮರುಸಜ್ಜಾಗುವ ಮೂಲಕ ತ್ವರಿತವಾಗಿ ಸಂಶೋಧನಾ ಪ್ರಕ್ರಿಯೆಗಳನ್ನು ಪುನರ್ರಚಿಸಿತು. ಇತ್ತೀಚಿನ ತಂತ್ರಜ್ಞಾನ ಬಳಸಿ ಅನಗತ್ಯ ಸಮಯ ಕಡಿತಗೊಳಿಸಿತು. ಇದು ತ್ವರಿತ ರೀಬೂಟ್‌ನ ಶಕ್ತಿಯಾಗಿದೆ ಎಂದರು.

ಇದನ್ನೂ ಓದಿ: ಕೋವಿಡ್​ ಲಸಿಕೆಯಿಂದ ಹೊಸ ಇತಿಹಾಸ.. ಫಸ್ಟ್​ ಟೈಮ್​ 48,000 ಗಡಿ ದಾಟಿದ ಗೂಳಿ!

ಸ್ವಲ್ಪ ಯೋಚಿಸಿ, ಈವರೆಗೆ ಲಸಿಕೆ ಅಭಿವೃದ್ಧಿಪಡಿಸಲು ತೆಗೆದುಕೊಂಡ ಸರಾಸರಿ ಸಮಯ ನಿಮಗೆ ತಿಳಿದಿದೆಯೇ ಅದು 10 ವರ್ಷಗಳು. ಹೌದು 10 ವರ್ಷಗಳು. ಇನ್ನು, ಈ ಬಿಕ್ಕಟ್ಟಿಗೆ ಧನ್ಯವಾದಗಳು. ಇಂದೊಂದು ಮಾತ್ರವಲ್ಲ ಈ 10 ತಿಂಗಳೊಳಗೆ ಮೂರು ಪರಿಣಾಮಕಾರಿ ಲಸಿಕೆಗಳನ್ನು ಅಭಿವೃದ್ಧಿಪಡಿಸಿದ್ದೇವೆ ಎಂದು ಮಹೀಂದ್ರಾ ಅವರು ವೈದ್ಯಕೀಯ ತಜ್ಞರನ್ನು ಪ್ರಶಂಸಿಸಿದರು.

ಕೋವಿಡ್​-19 ಲಸಿಕೆಯ ಅಭಿವೃದ್ಧಿಗಿಂತ ಹೆಚ್ಚು ಸ್ಫೂರ್ತಿದಾಯಕ ಉದಾಹರಣೆಯ ಬಗ್ಗೆ ಯೋಚಿಸಲು ಸಾಧ್ಯವಿಲ್ಲ. ಇದೇ ರೀತಿಯ ವಿಧಾನ ಅಳವಡಿಸಿಕೊಳ್ಳುವ ಮೂಲಕ ಉದ್ಯಮಿ ತಂಡ ಕೂಡ ಬಲಶಾಲಿಯಾಗಿದೆ.

ಲಸಿಕೆಯಂತೆಯೇ ನಮ್ಮ ವಿಧಾನವನ್ನು ಮರು ಮೌಲ್ಯಮಾಪನ ಮಾಡುವ ಮೂಲಕ ; ತಂತ್ರಜ್ಞಾನವನ್ನು ಬಳಸುವುದರ ಮೂಲಕ ಮತ್ತು ಪ್ರಕ್ರಿಯೆಗಳನ್ನು ಮರು ಶೋಧಿಸುವ ಮೂಲಕ ; ಅನಗತ್ಯ ಮತ್ತು ಅಪ್ರಸ್ತುತವನ್ನು ಕಡಿತ ಮಾಡುವ ಮೂಲಕ; ನಮ್ಮ ಬಂಡವಾಳವನ್ನು ಹೆಚ್ಚು ಪರಿಣಾಮಕಾರಿಯಾಗಿ ಬಳಸುವುದರ ಮೂಲಕ ; ಎಲ್ಲಕ್ಕಿಂತ ಹೆಚ್ಚಾಗಿ, ವೇಗ ಮತ್ತು ಚುರುಕುತನದಿಂದ ಸಾಧಿಸಬಹುದು ಎಂದು ಹೇಳಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.