ETV Bharat / business

ಬೆಚ್ಚಿ ಬೀಳುವಷ್ಟು ಮೊಬೈಲ್​ ಬೆಲೆ ಇದ್ರೂ 30 ನಿಮಿಷದಲ್ಲಿ ಸೋಲ್ಡ್​ ಔಟ್​: ಅಂತಹದ್ದೇನಿದೆ ಅದರಲ್ಲಿ? - ಗ್ಯಾಲಕ್ಸಿ ಫೋಲ್ಡ್​

ಸ್ಯಾಮ್​ಸಂಗ್​ ಇತ್ತೀಚೆಗೆ ಗ್ಯಾಲಕ್ಸಿ ಫೋಲ್ಡ್​ ಮೊಬೈಲ್​ ಮಾರುಕಟ್ಟೆಗೆ ತರುವುದಾಗಿ ಘೋಷಿಸಿದ ಬಳಿಕ 1,64,999 ರೂ. ಬೆಲೆಯಲ್ಲಿ ಪ್ರಿ-ಬುಕಿಂಗ್​ಗೆ ನಿನ್ನೆ ಚಾಲನೆ ನೀಡಿತ್ತು. ಲಿಮಿಟೆಡ್​ ಪ್ರಮಾಣದಲ್ಲಿ ತಯಾರಿಸಿದ್ದ ಮೊಬೈಲ್​ಗಳನ್ನು ಮೊದಲ ಹಂತದಲ್ಲಿ 1,600 ಯೂನಿಟ್​​ಗಳನ್ನು ಮಾತ್ರವೇ ಆನ್​ಲೈನ್​ ಮೂಲಕ ಮಾರಾಟ ಮಾಡುವುದಾಗಿ ಹೇಳಿತ್ತು. ಮುಂಗಡ ಬುಕಿಂಗ್​ ಆದ 30 ನಿಮಿಷದಲ್ಲಿ ಎಲ್ಲ ಮೊಬೈಲ್​ಗಳು ಬಿಕರಿಯಾಗಿವೆ.

ಸಾಂದರ್ಭಿಕ ಚಿತ್ರ
author img

By

Published : Oct 5, 2019, 11:12 AM IST

ನವದೆಹಲಿ: ಐಷರಾಮಿ ಸ್ಮಾರ್ಟ್​ಫೋನ್​ ತಯಾರಿಕಾ ಕಂಪನಿ ಸ್ಯಾಮ್​ಸಂಗ್​ನ 'ಗ್ಯಾಲಕ್ಸಿ ಫೋಲ್ಡ್​' ಮೊಬೈಲ್​ ಪ್ರಿ-ಬುಕ್ಕಿಂಗ್​​​ ಚಾಲನೆಗೊಂಡು 30 ನಿಮಿಷದಲ್ಲಿ ಸೋಲ್ಡ್​ ​ಔಟ್​ ಆಗಿದೆ.

ಸ್ಯಾಮ್​ಸಂಗ್​ ಇತ್ತೀಚೆಗೆ ಗ್ಯಾಲಕ್ಸಿ ಫೋಲ್ಡ್​ ಮೊಬೈಲ್​ ಅನ್ನು ಮಾರುಕಟ್ಟೆಗೆ ತರುವುದಾಗಿ ಘೋಷಿಸಿದ ಬಳಿಕ 1,64,999 ರೂ. ಬೆಲೆಯಲ್ಲಿ ಪ್ರಿ-ಬುಕ್ಕಿಂಗ್​​​ಗೆ ನಿನ್ನೆ ಚಾಲನೆ ನೀಡಿತ್ತು. ಲಿಮಿಟೆಡ್​ ಪ್ರಮಾಣದಲ್ಲಿ ತಯಾರಿಸಿದ್ದ ಮೊಬೈಲ್​ಗಳನ್ನು ಮೊದಲ ಹಂತದಲ್ಲಿ 1,600 ಯೂನಿಟ್​​ಗಳನ್ನು ಮಾತ್ರವೇ ಆನ್​ಲೈನ್​ ಮೂಲಕ ಮಾರಾಟ ಮಾಡುವುದಾಗಿ ಹೇಳಿತ್ತು. ಮುಂಗಡ ಬುಕ್ಕಿಂಗ್​ ಆದ 30 ನಿಮಿಷದಲ್ಲಿ ಎಲ್ಲ ಮೊಬೈಲ್​ಗಳು ಬಿಕರಿಯಾಗಿವೆ. ಆಕ್ಟೋಬರ್​ 20ರ ಒಳಗೆ ಬುಕ್​ ಮಾಡಿದ ಗ್ರಾಹಕರಿಗೆ ಈ ಫೋನ್​ಗಳು ಕೈಸೇರಲಿವೆ.

ಗ್ಯಾಲಕ್ಸಿ ಫೋಲ್ಡ್​ ಫೋನ್​ 7.3 ಅಂಗುಲದ ಇನ್ಫಿನಿಟಿ ಫ್ಲೆಕ್ಸ್​ ಪರದೆ ಹೊಂದಿದ್ದು, 4.6 ಅಮಲೋಡ್ ಹೊರಾಂಗಣ ಪರದೆ ಇದೆ. ಮುಂಭಾಗದ ಕ್ಯಾಮೆರಾ 10ಎಂಪಿ, ಹಿಂಭಾಗದ ಎರಡೂ ಕ್ಯಾಮೆರಾಗಳು ಕ್ರಮವಾಗಿ 10ಎಂಪಿ ಹಾಗೂ 8ಎಂಪಿ ಸಾಮರ್ಥ್ಯ ಹೊಂದಿವೆ. 3 ಕ್ಯಾಮೆರಾ ಸೆಟಿಂಗ್ಸ್​ನಡಿ 12ಎಂಪಿಯ ಮುಖ್ಯ​ ಕ್ಯಾಮೆರಾ ಜೊತೆಗೆ 16 ಎಂಪಿಯ ವೈಡ್​ ಆ್ಯಂಗಲ್​ ಕ್ಯಾಮೆರಾ ಮತ್ತು 12ಎಂಪಿಯ ಟೆಲಿಪೋನ್​ ಕ್ಯಾಮೆರಾವಿದೆ. 12ಜಿಬಿ RAM​ ಮತ್ತು 512ಜಿಬಿಯ ಮೆಮೊರಿ ಸಾಮರ್ಥ್ಯವಿದೆ. 4,380mAh ಸಾಮರ್ಥ್ಯದ ಎರಡು ಬ್ಯಾಟರಿ ಒಳಗೊಂಡಿರುವ ಈ ಫೋನ್​ ಅನೇಕ ಹೊಸ ಫೀಚರ್ಸ್​ ಹೊಂದಿದೆ.

Intro:Body:Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.