ETV Bharat / business

ಕಷ್ಟದ ದಿನಗಳು ಮುಗಿದಿವೆಯಾ..? ಶೇ 89ಕ್ಕೆ ತಲುಪಿದ ಪೆಟ್ರೋಲ್, ಡೀಸೆಲ್​ ಬೇಡಿಕೆ! - Indian Oil Corporation

ಐಸಿಐಸಿಐ ಡೈರೆಕ್ಟ್​ ಸಂಶೋಧನಾ ವರದಿಯ ಪ್ರಕಾರ, ಏಪ್ರಿಲ್​ನಲ್ಲಿ ಮಾರಾಟವು ಶೇ 45ರಷ್ಟು ಕಡಿಮೆಯಾಗಿತ್ತು. ಬಹುತೇಕ ಎಲ್ಲಾ ತೈಲ ಮಾರುಕಟ್ಟೆ ಕಂಪನಿಗಳು, ಮುಖ್ಯವಾಗಿ ದೇಶದ ಅತಿದೊಡ್ಡ ಇಂಧನ ಚಿಲ್ಲರೆ ವ್ಯಾಪಾರಸ್ಥ ಇಂಡಿಯನ್ ಆಯಿಲ್ ಕಾರ್ಪೊರೇಷನ್ (ಐಒಸಿ) ಸಾಕಷ್ಟು ನಷ್ಟ ಅನುಭವಿಸಿತ್ತು. ಅನ್​ಲಾಕ್​ನಿಂದಾಗಿ ಮೇ ಮತ್ತು ಜೂನ್ ತಿಂಗಳಲ್ಲಿ ಗಮನಾರ್ಹ ಚೇತರಿಕೆ ಕಂಡುಬಂದಿದೆ.

IOC
ಐಒಸಿ
author img

By

Published : Jun 27, 2020, 7:16 PM IST

ನವದೆಹಲಿ: ಮೇ ಮತ್ತು ಜೂನ್ ತಿಂಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಮಾರಾಟದಲ್ಲಿ ಉತ್ತಮ ಚೇತರಿಕೆ ಕಂಡುಬಂದಿದ್ದು, ತೈಲ ಮಾರುಕಟ್ಟೆ ಕಂಪನಿಗಳು ವಿಷಮ ಪರಿಸ್ಥಿತಿಯಿಂದ ಹೊರಬರುತ್ತಿರುವಂತೆ ಕಾಣುತ್ತಿದೆ.

ಕೋವಿಡ್​-19 ಹಬ್ಬುವಿಕೆ ನಿಯಂತ್ರಿಸಲು ವಿಧಿಸಲಾದ ರಾಷ್ಟ್ರವ್ಯಾಪಿ ಲಾಕ್‌ಡೌನ್‌ನಿಂದ ಪೆಟ್ರೋಲಿಯಂ ಉತ್ಪನ್ನಗಳ ಬೇಡಿಕೆ ಭಾರಿ ಪ್ರಮಾಣದಲ್ಲಿ ಕುಸಿದಿತ್ತು. ಭಾರತ ಕ್ರಮೇಣ ಅನ್​ಲಾಕ್​ನತ್ತ ಹೊರಳುತ್ತಿದ್ದಂತೆ ತೈಲ ಬೇಡಿಕೆಯ ರೇಖೆ ಮೇಲ್ಮುಖವಾಗಿ ಸಾಗುತ್ತಿದೆ. ಇದು ತೈಲ ವಿತರಕ ಕಂಪನಿಗಳಿಗೆ ಶುಭ ಸೂಚನೆಯಾಗಿದೆ.

ಐಸಿಐಸಿಐ ಡೈರೆಕ್ಟ್​ ಸಂಶೋಧನಾ ವರದಿಯ ಪ್ರಕಾರ, ಏಪ್ರಿಲ್​ನಲ್ಲಿ ಮಾರಾಟವು ಶೇ 45ರಷ್ಟು ಕಡಿಮೆಯಾಗಿತ್ತು. ಬಹುತೇಕ ಎಲ್ಲಾ ತೈಲ ಮಾರುಕಟ್ಟೆ ಕಂಪನಿಗಳು, ಮುಖ್ಯವಾಗಿ ದೇಶದ ಅತಿದೊಡ್ಡ ಇಂಧನ ಚಿಲ್ಲರೆ ವ್ಯಾಪಾರಸ್ಥ ಇಂಡಿಯನ್ ಆಯಿಲ್ ಕಾರ್ಪೊರೇಷನ್ (ಐಒಸಿ) ಸಾಕಷ್ಟು ನಷ್ಟ ಅನುಭವಿಸಿತ್ತು. ಅನ್​ಲಾಕ್​ನಿಂದಾಗಿ ಮೇ ಮತ್ತು ಜೂನ್ ತಿಂಗಳಲ್ಲಿ ಗಮನಾರ್ಹ ಚೇತರಿಕೆ ಕಂಡುಬಂದಿದೆ.

ಪ್ರಸ್ತುತ, ಪೆಟ್ರೋಲ್ ಮತ್ತು ಡೀಸೆಲ್ ಬೇಡಿಕೆಯು ಶೇ 85-89ರ ಆಸುಪಾಸಿನಲ್ಲಿದೆ. ಜೂನ್ 7ರಿಂದ ಆರಂಭವಾಗುವ ಕಳೆದ ಮೂರು ವಾರಗಳಲ್ಲಿ ಇಂಧನ ಬೆಲೆಗಳು ಮೇಲ್ಮುಖವಾದವು. ಐಒಸಿ ಜೂನ್​ ತಿಂಗಳಲ್ಲಿ ಚಿಲ್ಲರೆ ದರವನ್ನು ಲೀಟರ್​ಗೆ 9-10 ರೂ.ಯಷ್ಟು ಏರಿಕೆ ಮಾಡಿದೆ.

ಗ್ರಾಸ್ ರಿಫೈನಿಂಗ್ ಮಾರ್ಜಿನ್ ಎಂಬುದು ಪೆಟ್ರೋಲಿಯಂ ಉತ್ಪನ್ನಗಳಾದ ಪೆಟ್ರೋಲ್ ಮತ್ತು ಡೀಸೆಲ್ ಸಂಸ್ಕರಣಾ ಘಟಕಗಳಿಂದ ಹೊರಬಂದ ಮೌಲ್ಯ ಮತ್ತು ಸಂಸ್ಕರಣಾಗಾರಕ್ಕೆ ಪ್ರವೇಶಿಸುವ ಕಚ್ಚಾ ತೈಲದ ಮೌಲ್ಯದ ನಡುವಿನ ವ್ಯತ್ಯಾಸವಾಗಿದೆ.

ಐಒಸಿಯ ಜಿಆರ್‌ಎಂ ದರ ಕೆಳಮುಖವಾಗಿದೆ. 2018ರ ಹಣಕಾಸು ವರ್ಷದಲ್ಲಿದ್ದ ಬ್ಯಾರೆಲ್‌ಗೆ 8.5 ಡಾಲರ್​ನಿಂದ 2020ರ ಹಣಕಾಸು ವರ್ಷಕ್ಕೆ 0.1 ಡಾಲರ್​ಗೆ ತಲುಪಿದೆ. 2021 ಮತ್ತು 2022ರ ವಿತ್ತೀಯ ವರ್ಷದಲ್ಲಿ ಬ್ಯಾರೆಲ್‌ಗೆ 4 ಡಾಲರ್ (2018ರ ಹಣಕಾಸು ವರ್ಷದ ಅರ್ಧಕ್ಕಿಂತ ಕಡಿಮೆ) ಸ್ಥಿರಗೊಳ್ಳುವ ನಿರೀಕ್ಷೆಯಿದೆ ಎಂದು ವರದಿ ಹೇಳಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.