ಮುಂಬೈ: 2014 ಮತ್ತು 2019ರ ಮಧ್ಯದಲ್ಲಿ ಒಂದೇ ಸಮನೆ ಕುಸಿಯುತ್ತಿದ್ದ ಗೃಹ ಉಳಿತಾಯದಲ್ಲಿ ಅಚ್ಚರಿಯ ಏರಿಕೆ ಕಂಡುಬಂದಿದೆ.
ಸಾಂಕ್ರಾಮಿಕ ರೋಗದ ಲಾಕ್ಡೌನ್ನಿಂದಾಗಿ 200 ಬಿಲಿಯನ್ ಡಾಲರ್ (14.59 ಲಕ್ಷ ಕೋಟಿ ರೂ.) ಹೆಚ್ಚುವರಿ ಉಳಿತಾಯ ಸಂಗ್ರಹವಾಗಿದ್ದು, ಇದು 20 ವರ್ಷಗಳಲ್ಲಿನ ಗರಿಷ್ಠ ಪ್ರಮಾಣವಾಗಿದೆ ಎಂದು ಫಾರಿನ್ ಬ್ರೋಕರೆಜ್ ವರದಿ ಮಾಡಿದೆ.
ಆಶ್ಚರ್ಯಕರ ಸಂಗತಿಯೆಂದರೆ ಈ ಉಳಿತಾಯದ ಬಹುಪಾಲು ಭಾಗವು ನಗದು ರೂಪದಲ್ಲಿದೆ. ಲಾಕ್‌ಡೌನ್ ತಿಂಗಳಲ್ಲಿ ಶೇ 135ರಷ್ಟು ಏರಿಕೆಯಾಗಿದೆ. ಈಗ ಗೃಹ ಉಳಿತಾಯವು ಒಟ್ಟು ಬಂಡವಾಳ ರಚನೆಯ ಶೇ 58ರಷ್ಟಿದೆ. ಕಾರ್ಪೊರೇಟ್‌ಗಳ ಪ್ರಮಾಣ ಕೇವಲ ಶೇ 32ರಷ್ಟಿದೆ ಎಂದು ಯುಬಿಎಸ್ ವರದಿ ತಿಳಿಸಿದೆ.
ಯುಬಿಎಸ್ ಸೆಕ್ಯುರಿಟೀಸ್ ಇಂಡಿಯಾ ಸುನೀಲ್ ತಿರುಮಲೈ ಮತ್ತು ದೀಪೋಜಲ್ ಸಹಾ ವಿಶ್ಲೇಷಕರ ಪ್ರಕಾರ, ನಿರ್ಬಂಧನದಿಂದಾಗಿ ಕುಟುಂಬಗಳ ಖರ್ಚು ಕಡಿಮೆಯಾಗಿ, ಹಣಕಾಸಿನ ಸ್ವತ್ತುಗಳಲ್ಲಿ 200 ಬಿಲಿಯನ್ ಡಾಲರ್ನಷ್ಟು ಹೆಚ್ಚುವರಿ ನಿವ್ವಳ ಉಳಿತಾಯವಾಗಿದೆ. ಇದು ಜಿಡಿಪಿಯ ಶೇಕಡಾವಾರು ಗರಿಷ್ಠ ಮಟ್ಟಕ್ಕೆ ಹತ್ತಿರದಲ್ಲಿದೆ.
ಇದನ್ನೂ ಓದಿ: ಸ್ವದೇಶಿ ಆಟಿಕೆಗಳನ್ನು ಉಳಿಸಲು ಮಹಾರಾಜ ಯದುವೀರ್ ದಂಪತಿ ಹೊಸ ಪ್ಲ್ಯಾನ್.. ಏನಿದು?
ಬ್ಯಾಂಕ್ ಠೇವಣಿ ಮತ್ತು ವಿಮೆ / ಪಿಂಚಣಿ ಒಟ್ಟು ಮನೆಯ ಉಳಿತಾಯದಲ್ಲಿ ಶೇ 14ರಷ್ಟಿದ್ದರೆ, ಶೇ 19ರಷ್ಟು ಸರ್ಕಾರದ ಮೇಲಿನ ರೈಟ್ಸ್ ಮತ್ತು 135 ಪ್ರತಿಶತ ಹಾರ್ಡ್ ಕರೆನ್ಸಿಯಲ್ಲಿವೆ. ಐತಿಹಾಸಿಕವಾಗಿ ಗೃಹ ಉಳಿತಾಯ ಆರ್ಥಿಕತೆಯ ಬಂಡವಾಳ ರಚನೆಯಲ್ಲಿ ಮೂರನೇ ಒಂದು ಭಾಗದಷ್ಟು ಹಣ ನೀಡುತ್ತಿದೆ. 2019ರ ಮಧ್ಯದಿಂದ ಏರಿಕೆಯಾಗುವ ಮೊದಲು ಕುಟುಂಬಗಳ ಒಟ್ಟಾರೆ ಆರ್ಥಿಕ ಹೆಚ್ಚುವರಿ ಉಳಿತಾಯ ಕಳೆದ ಏಳು- ಎಂಟು ವರ್ಷಗಳಿಂದ ಸ್ಥಿರವಾಗಿ ಉಳಿದಿದೆ.
2015ರ ಹಣಕಾಸು ವರ್ಷದಿಂದ ಗೃಹ ಉಳಿತಾಯವು ಹಲವು ಅಂಶಗಳಿಂದಾಗಿ ಕ್ಷೀಣಿಸುತ್ತಿದೆ. ಸಂಸ್ಕರಿಸಿದ ಆಹಾರ, ಆರೋಗ್ಯ, ಶಿಕ್ಷಣ, ಬಟ್ಟೆ ಮತ್ತು ದೈನಂದಿನ ಸರಕುಗಳಂತಹ ನಿತ್ಯದ ವೆಚ್ಚವೂ ಕಾರಣವಾಗಿವೆ. ಆರ್ಥಿಕತೆಯು ಸಾಮಾನ್ಯವಾಗುವುದರಿಂದ ಮತ್ತು ಗ್ರಾಹಕರ ವಿಶ್ವಾಸವು ಸುಧಾರಿಸಿದಂತೆ ಇವೆಲ್ಲವೂ ಹೊರಬರಬಹುದು.
ಈಕ್ವಿಟಿ ಮಾರುಕಟ್ಟೆಗಳಲ್ಲಿ ಹರಿದಾಡುವ ಉಳಿತಾಯವು ಹೆಚ್ಚಾಗಿದೆ. ಆದರೆ, ಒಟ್ಟು ಉಳಿತಾಯದ ಶೇ 5ಕ್ಕಿಂತಲೂ ಕಡಿಮೆಯಿದೆ. ಆದರೆ ಈ ಶೇ 5ರಷ್ಟು ಕಳೆದ ಎರಡು ವರ್ಷಗಳಲ್ಲಿ ಎಫ್‌ಪಿಐ ಒಳಹರಿವುಗಿಂತ ಹೆಚ್ಚಿನದಾಗಿದೆ. ಇದು 2020ರಲ್ಲಿ ವರ್ಷಕ್ಕೆ ಶೇ 25ರಷ್ಟು ಏರಿಕೆಯಾಗಿದೆ.