ETV Bharat / business

5ಜಿ ತಂತ್ರಜ್ಞಾನ ಅಭಿವೃದ್ಧಿಗೆ ವಿಪ್ರೋ- ಫಿನ್​ಲ್ಯಾಂಡ್​ ವಿವಿ ಒಪ್ಪಂದ - Wipro 5G

5 ಜಿ ತಂತ್ರಜ್ಞಾನ ಅಭಿವೃದ್ಧಿಪಡಿಸಲು ಭಾರತದ ಪ್ರಮುಖ ಸಾಫ್ಟ್‌ವೇರ್ ಕಂಪನಿಯಾದ ವಿಪ್ರೋ ಹಾಗೂ ಫಿನ್‌ಲ್ಯಾಂಡ್‌ನ ಓಲು ವಿಶ್ವವಿದ್ಯಾಲಯ ಜಂಟಿಯಾಗಿ ಒಪ್ಪಂದ ಮಾಡಿಕೊಂಡಿವೆ. ಭವಿಷ್ಯದ ನಾವೀನ್ಯತೆ, ಭದ್ರತೆ ಮತ್ತು ಜ್ಞಾನದ ಮೂಲಕ ಸಂಶೋಧನಾ ಶಿಕ್ಷಣಕ್ಕೆ ಒತ್ತು ನೀಡಲು ಮುಂದಾಗಿವೆ.

5ಜಿ ತಂತ್ರಜ್ಞಾನ
author img

By

Published : Nov 20, 2019, 9:24 PM IST

ಬೆಂಗಳೂರು: 5 ಜಿ ತಂತ್ರಜ್ಞಾನ ಅಭಿವೃದ್ಧಿಪಡಿಸಲು ಭಾರತದ ಪ್ರಮುಖ ಸಾಫ್ಟ್‌ವೇರ್ ಕಂಪನಿಯಾದ ವಿಪ್ರೋ ಹಾಗೂ ಫಿನ್‌ಲ್ಯಾಂಡ್‌ನ ಓಲು ವಿಶ್ವವಿದ್ಯಾಲಯ ಜಂಟಿಯಾಗಿ ಒಪ್ಪಂದ ಮಾಡಿಕೊಂಡಿವೆ.

ಓಲು ವಿಶ್ವವಿದ್ಯಾನಿಲಯವು ಭವಿಷ್ಯದ ನಾವೀನ್ಯತೆ, ಭದ್ರತೆ ಮತ್ತು ಜ್ಞಾನದ ಮೂಲಕ ಸಂಶೋಧನಾ ಶಿಕ್ಷಣಕ್ಕೆ ಒತ್ತು ನೀಡಲು ವಿಪ್ರೋ ಜೊತೆಗೆ ಒಡಂಬಡಿಕೆ ಮಾಡಿಕೊಳ್ಳಲಾಗಿದೆ ಎಂದು ತಿಳಿಸಿದೆ.

ಫಿನ್​ಲ್ಯಾಂಡ್‌ನ ಉದ್ಯೋಗ ಸಚಿವರಾದ ಟಿಮೊ ಹರಕ್ಕಾ 'ಈಟಿವಿ ಭಾರತ್' ಜೊತೆಗೆ ಮಾತನಾಡಿ, ಇಂದು ಸಂತಸದ ದಿನವಾಗಿದೆ. ಏಕೆಂದರೆ ಉತ್ತರ ಫಿನ್‌ಲ್ಯಾಂಡ್‌ನ ಓಲು ವಿಶ್ವವಿದ್ಯಾಲಯದಲ್ಲಿ ವಿಪ್ರೋ ಬರೀ 5 ಜಿ ಮಾತ್ರವಲ್ಲದೇ 6 ಜಿ ತಂತ್ರಜ್ಞಾನದ ಪ್ರಯೋಗಾಲಯ ಮೇಲೆ ಹೂಡಿಕೆ ಮಾಡಲಿದೆ. ವಿಶ್ವದರ್ಜೆಯಲ್ಲಿ ಭಾರತೀಯ ಕಂಪನಿಗಳು ಫಿನ್‌ಲ್ಯಾಂಡ್‌ನಲ್ಲಿ ಮಾಡುತ್ತಿರುವ ಹೂಡಿಕೆಯನ್ನು ಬಹಳ ಸಂತೋಷದಿಂದ ಸ್ವಾಗತಿಸುತ್ತೇನೆ ಎಂದರು.

ವಿಪ್ರೋ ಹಾಗೂ ಫಿನ್‌ಲ್ಯಾಂಡ್‌ನ ಓಲು ವಿಶ್ವವಿದ್ಯಾಲಯ ಜಂಟಿ ಒಪ್ಪಂದದ ಸಂದರ್ಶನ

ಉದ್ಯಮ ಮತ್ತು ಗ್ರಾಹಕರ ಅಗತ್ಯಗಳನ್ನು ಪರಿಹರಿಸಲು ಉಭಯರು ಜಂಟಿಯಾಗಿ ತಂತ್ರಜ್ಞಾನ ಪೈಲಟ್‌ಗಳನ್ನು ರಚಿಸುತ್ತೇವೆ. ಇಂತಹುದ್ದನ್ನು ಇಲ್ಲಿಯವರೆಗೆ ಯಾರೂ ಪರಿಹರಿಸಲಾಗಿಲ್ಲ. ಈ ಸಹಭಾಗಿತ್ವವು ಮುಂದಿನ ಪೀಳಿಗೆಯ ತಂತ್ರಜ್ಞಾನದ ಆವಿಷ್ಕಾರಗಳಿಗೆ ಮಹತ್ವದ ಹೆಜ್ಜೆಯಾಗಲಿದೆ ಎಂದು ವಿಪ್ರೋದ ಮುಖ್ಯ ತಂತ್ರಜ್ಞಾನ ಅಧಿಕಾರಿ ಕೆ.ಆರ್. ಸಂಜೀವ್ ಹೇಳಿದರು.

Intro:Body:Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.