ETV Bharat / business

Explainer: ಜಾಗತಿಕ ಆರ್ಥಿಕತೆ ಮಹಾಪತನದ ಮಧ್ಯೆ ಜಿಯೋ - ಫೇಸ್​ಬುಕ್​ ಕೈಜೋಡಿಸಿದ್ದೇಕೆ?

ರಿಲಯನ್ಸ್ ಇಂಡಸ್ಟ್ರೀಸ್​ ಶೇ 10ರಷ್ಟು ಷೇರು ಖರೀದಿಗೆ ಡಿಜಿಟಲ್​ ಪ್ಲಾಟ್​ಫಾರ್ಮ್​ ದೈತ್ಯ ಫೇಸ್​ಬುಕ್​ 5.7 ಶತಕೋಟಿ ಡಾಲರ್​ ವಿನಿಯೋಗಿಸಿದೆ. ಸಾಮಾಜಿಕ ಜಾಲಾತಣ ಸಂಸ್ಥೆ, ತನ್ನ ಜನಪ್ರಿಯ ವಾಟ್ಸ್​ಆ್ಯಪ್​ ಮೆಸೆಂಜರ್ ಮೂಲಕ ಭಾರತದ ಸಣ್ಣ ದಿನಸಿ ಮಳಿಗೆಗಳಿಗೆ ಡಿಜಿಟಲ್ ಪಾವತಿ ಸೇವೆ ನೀಡಿ ತನ್ನ ಹತೋಟಿಗೆ ತಂದುಕೊಳ್ಳಲು ಹವಣಿಸುತ್ತಿದೆ.

facebook founder mark zuckerberg
ಮಾರ್ಕ್ ಝುಕರ್​ಬರ್ಗ್
author img

By

Published : Apr 22, 2020, 10:12 PM IST

ನವದೆಹಲಿ: ರಿಲಯನ್ಸ್ ಜಿಯೋದಲ್ಲಿ ಫೇಸ್‌ಬುಕ್‌ 5.7 ಬಿಲಿಯನ್‌ ಡಾಲರ್‌ (43,574) ಹೂಡಿಕೆಯ ಮಾಡಿ ಶೇ 9.9ರಷ್ಟು ಷೇರು ಖರೀದಿಸುವ ಒಪ್ಪಂದ ಹೊರಬಿದ್ದಿದೆ. ಕೋವಿಡ್​-19 ಬಿಕ್ಕಟ್ಟು ಹಾಗೂ ಲಾಕ್​ಡೌನ್​ನಂತಹ ಜಾಗತಿಕ ಆರ್ಥಿಕ ಕುಸಿತದ ಸಂದರ್ಭದಲ್ಲಿ ಫೇಸ್​ಬುಕ್​, ಜಿಯೋ ಷೇರು ಖರೀದಿಸಿಲು ಕಾರಣವೇನು ಎಂಬ ಸಹಜವಾಗಿ ಮೂಡುತ್ತದೆ. ಈ ಪ್ರಶ್ನೆಗೆ ಉತ್ತರ ಇಲ್ಲಿದೆ.

ರಿಲಯನ್ಸ್ ಇಂಡಸ್ಟ್ರೀಸ್​ ಶೇ 10ರಷ್ಟು ಷೇರು ಖರೀದಿಗೆ ಡಿಜಿಟಲ್​ ಪ್ಲಾಟ್​ಫಾರ್ಮ್​ ದೈತ್ಯ ಫೇಸ್​ಬುಕ್​ 5.7 ಶತಕೋಟಿ ಡಾಲರ್​ ವಿನಿಯೋಗಿಸಿದೆ. ಸಾಮಾಜಿಕ ಜಾಲಾತಣ ಸಂಸ್ಥೆ, ತನ್ನ ಜನಪ್ರಿಯ ವಾಟ್ಸ್​ಆ್ಯಪ್​ ಮೆಸೆಂಜರ್ ಮೂಲಕ ಭಾರತದ ಸಣ್ಣ ದಿನಸಿ ಮಳಿಗೆಗಳಿಗೆ ಡಿಜಿಟಲ್ ಪಾವತಿ ಸೇವೆ ನೀಡಿ ತನ್ನ ಹತೋಟಿಗೆ ತಂದುಕೊಳ್ಳಲು ಹವಣಿಸುತ್ತಿದೆ.

ಈ ಒಪ್ಪಂದದಿಂದ ರಿಲಯನ್ಸ್ ಜಿಯೋಗೆ ಮತ್ತೊಂದು ರೀತಿಯಲ್ಲಿ ಅನುಕೂಲವಿದೆ. ಟಿಲಿಕಾಂ ಮಾರುಕಟ್ಟೆಯಲ್ಲಿ ಅಗ್ರ ಸ್ಥಾನ ಗಳಿಸಲು ಹಾಗೂ ಸಾಲದ ಹೊರೆ ತಗ್ಗಿಸಲು ಇದು ನೆರವಿಗೆ ಬರಲಿದೆ. ಜೊತೆಗೆ ಹೊಸ ಆನ್‌ಲೈನ್ ಕಿರಾಣಿ ಮಾರುಕಟ್ಟೆಯ 'ಜಿಯೋಮಾರ್ಟ್' ವೃದ್ಧಿಗೂ ಅನುಕೂಲವಾಗಲಿದೆ.

ದೇಶದಲ್ಲಿ ಆನ್‌ಲೈನ್ ಕಿರಾಣಿ ಮಾರುಕಟ್ಟೆ ಲಾಭದಾಯಕ ಉದ್ಯಮವಾಗಿದೆ. ಆದರೆ, ಅದು ತುಂಬ ಸ್ಪರ್ಧಾತ್ಮಕವಾಗಿ ಕೂಡಿದೆ. ಅಮೆಜಾನ್.ಕಾಂ, ವಾಲ್​ಮಾರ್ಟ್‌ನ ಫ್ಲಿಪ್‌ಕಾರ್ಟ್ ಒಂದು ಕಡೆ ಪ್ರತಿಸ್ಪರ್ಧೆ ನೀಡುತ್ತಿದ್ದರೇ ಮೊತ್ತೊಂದು ಕಡೆ ಬಿಗ್‌ಬಾಸ್ಕೆಟ್‌ ಜೊತೆಗೂಡಿ ಮಾರುಕಟ್ಟೆ ಪಾಲು ಪಡೆಯಲು ಚೀನಾದ ಅಲಿಬಾಬಾ ನಿರತವಾಗಿದೆ.

ಚಿಲ್ಲರೆ ವ್ಯಾಪಾರಿಗಳ ಒಕ್ಕೂಟದ ಅಂಕಿಅಂಶಗಳ ಪ್ರಕಾರ, ದೇಶದ ಕಿರಣಿ ಮಳಿಗೆಗಳಲ್ಲಿ ಅಥವಾ ಸಣ್ಣ ಕಿರಾಣಿಗಳಲ್ಲಿ 375 ಬಿಲಿಯನ್ ಡಾಲರ್​ ಕಿರಾಣಿ ಉದ್ಯಮದ ಜೀವನಾಡಿಯಾಗಿದೆ ಎಂದು ಹೇಳುತ್ತಿದೆ. ಇದರ ಮೇಲೆ ಹಲವು ಸಾಂಸ್ಥಿಕ ಕಂಪನಿಗಳು ಕಣ್ಣಿಟ್ಟಿವೆ.

ಮುಂದಿನ ದಿನಗಳಲ್ಲಿ ಜಿಯೋಮಾರ್ಟ್ ಮತ್ತು ವಾಟ್ಸ್​ಆ್ಯಪ್​, ಸುಮಾರು 30 ಮಿಲಿಯನ್ ಸಣ್ಣ ಕಿರಾಣಿ ಅಂಗಡಿಗಳಿಗೆ ತಮ್ಮ ನೆರೆಹೊರೆಯ ಗ್ರಾಹಕರೊಂದಿಗೆ ಡಿಜಿಟಲ್ ವಹಿವಾಟು ನಡೆಸಲು ಅನುವು ಮಾಡಿಕೊಡಲಿದ್ದೇವೆ ಎಂದು ರಿಲಯನ್ಸ್‌ ಮುಖ್ಯಸ್ಥ ಮುಖೇಶ್ ಅಂಬಾನಿ ವಿಡಿಯೋದಲ್ಲಿ ಹೇಳಿದ್ದಾರೆ.

ವಾಟ್ಸ್​ಆ್ಯಪ್​ ಭಾರತದಲ್ಲಿ 400 ಮಿಲಿಯನ್ ಬಳಕೆದಾರರನ್ನು ಹೊಂದಿದೆ. ಇದು ಫೇಸ್​ಬುಕ್​ಗೆ ಅತಿ ದೊಡ್ಡ ಮಾರುಕಟ್ಟೆಯ ಶಕ್ತಿಯಾಗಿದೆ. ಗೂಗಲ್ ಪೇ ವಿರುದ್ಧ ಸ್ಪರ್ಧೆಯೊಡ್ಡಲು ಕಸರತ್ತು ನಡೆಸುತ್ತಿದೆ. ಮತ್ತೆ ಭಾರತದಲ್ಲಿ ತನ್ನ ಡಿಜಿಟಲ್ ಪಾವತಿ ಸೇವೆಗೆ ಅನುಮೋದನೆ ಪಡೆಯಲು ಪ್ರಯತ್ನಿಸುತ್ತಿದೆ. ಸ್ಥಳೀಯವಾಗಿ ಈಗಾಗಲೇ ಪ್ರಾಬಲ್ಯ ಹೊಂದಿರುವ ಜಿಯೋ ಒಂದು ಸುಲಭದ ಮಾರ್ಗವಾಗಿ ಕಾಣಿಸಿದೆ.

ಫೇಸ್​ಬುಕ್ ಹಾಗೂ ವಾಟ್ಸ್​ಆ್ಯಪ್​ಗಳಿಗೆ ಭಾರತದಲ್ಲಿ ಅತಿದೊಡ್ಡ ಬಳಕೆದಾರರ ಸಮುದಾಯವಿದೆ. ಇಲ್ಲಿ ಸಾಕಷ್ಟು ಪ್ರತಿಭಾನ್ವಿತ ಉದ್ಯಮಶೀಲರಿದ್ದಾರೆ. ಭಾರತ ಅತಿದೊಡ್ಡ ಡಿಜಿಟಲ್ ರೂಪಾಂತರದ ಮಧ್ಯದಲ್ಲಿದ್ದು, ಜಿಯೋದಂತಹ ಸಂಸ್ಥೆಗಳು ಲಕ್ಷಾಂತರ ಭಾರತೀಯರು, ಸಣ್ಣ ಉದ್ಯಮಿಗಳನ್ನು ಆನ್​ಲೈನ್ ವೇದಿಕೆಗೆ ತರುವಲ್ಲಿ ಪ್ರಮುಖ ಪಾತ್ರ ವಹಿಸಿವೆ. ಭಾರತದಲ್ಲಿ 60 ಮಿಲಿಯನ್​ಗಿಂತಲೂ ಅಧಿಕ ಜನ ಸಣ್ಣ ಉದ್ಯಮಗಳನ್ನು ನಡೆಸುತ್ತಿದ್ದಾರೆ. ಅವರಲ್ಲಿ ಬಹುತೇಕರು ಡಿಜಿಟಲ್ ಪಾವತಿ ವಿಧಾನವಾದ ಪೇಟಿಎಂ, ಗೂಗಲ್ ಪೇಗಳನ್ನು ಬಳಸುತ್ತಾರೆ. ಇದರ ಮೇಲೆ ಪ್ರಸ್ತುತ ಆರ್ಥಿಕತೆ ನಿಂತಿದೆ. ಉದ್ಯೋಗಗಳಿಗೆ ಹಲವು ಲಕ್ಷಾಂತರ ಜನರು ಇವುಗಳನ್ನು ಅವಲಂಬಿಸಿದ್ದಾರೆ ಎಂದು ಫೇಸ್​ಬುಕ್ ಸಂಸ್ಥಾಪಕ ಮಾರ್ಕ್ ಝುಕರ್​ಬರ್ಗ್ ತಮ್ಮ ಫೇಸ್​ಬುಕ್​ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

ಜಿಯೋ ಮತ್ತು ಫೇಸ್‌ಬುಕ್ ಎರಡೂ ವೈಶಿಷ್ಟ್ಯದ ಫೋನ್ ಬಳಕೆದಾರರನ್ನು ಸೆಳೆಯಲು ಬಯಸುತ್ತಿವೆ. ಇಬ್ಬರೂ ಪಾವತಿ ಸೇವೆ ಒದಗಿಸುವ ಹಂಬಲಕ್ಕೆ ಮುಂದಾಗಿವೆ. ಇಬ್ಬರೂ ತಳಮಟ್ಟದಿಂದ ಪಾವತಿ ಮಾರುಕಟ್ಟೆಯನ್ನು ತಮ್ಮ ತೆಕ್ಕೆಗೆ ತೆಗೆದುಕೊಳ್ಳುವ ಇರಾದೆ ಹೊಂದಿದ್ದಾರೆ ಎಂಬುದು ಮಾರುಕಟ್ಟೆ ತಜ್ಞರ ವಿಶ್ಲೇಷಣೆ.

ಜಿಯೋಮಾರ್ಟ್ ಮತ್ತು ವಾಟ್ಸ್​ಆ್ಯಪ್​ ಸೇವೆಗಳ ಜಂಟಿ ಪಾಲುದಾರಿಕೆ, ಸಣ್ಣ ಅಂಗಡಿಗಳಿಂದ ಶಾಪಿಂಗ್ ಮಾಡುವ ತಳಮಟ್ಟದ ಬಳಕೆದಾರರನ್ನು ತಲುಪಲು ನೆರವಾಗಲಿದೆ.

ಜಿಯೋ ವಿಭಾಗದಲ್ಲಿ ಜಿಯೋ ಇನ್ಫೋಕಾಮ್ ಸೇರಿದಂತೆ ರಿಲಯನ್ಸ್‌ನ ಡಿಜಿಟಲ್ ಸ್ವತ್ತುಗಳನ್ನು ಹೊಂದಿದೆ. ಇದು ಆರಂಭವಾದ ಮೂರು ವರ್ಷಗಳಲ್ಲಿ ದೇಶದ ಅತಿದೊಡ್ಡ ಟಿಲಿಕಾಂ ಸೇವಾ ಕಂಪನಿಯಾಗಿ ಮಾರ್ಪಟ್ಟಿದೆ. ಇಂದು ಸರಿಸುಮಾರು 370 ಮಿಲಿಯನ್ ಗ್ರಾಹಕರನ್ನು ಹೊಂದಿದೆ. ತೈಲ ಮತ್ತು ರಾಸಾಯನಿಕ ಸಂಸ್ಕರಣಾ ವ್ಯವಹಾರದಲ್ಲಿ ಲಾಭ ಗಳಿಸಿದ್ದರಿಂದ ರಿಲಯನ್ಸ್ ತನ್ನ ಚಿಲ್ಲರೆ ವ್ಯಾಪಾರವನ್ನು ವಿಸ್ತರಿಸಿದೆ.

ಅದರ ಈ ವಿಸ್ತರಣೆಯು ಸೆಪ್ಟೆಂಬರ್ ವೇಳೆಗೆ ಸಾಲದ ಪ್ರಮಾಣ 40 ಶತಕೋಟಿ ಡಾಲರ್​ ಏರಿಕೆಗೆ ಕಾರಣವಾಗಿದೆ. ನಿವ್ವಳ ಸಾಲವನ್ನು ಶೂನ್ಯಕ್ಕೆ ಇಳಿಸಲು ರಿಲಯನ್ಸ್​ ಬಯಸಿದೆ. ರಿಲಯನ್ಸ್ ತನ್ನ ಸಂಸ್ಕರಣಾ ವ್ಯವಹಾರದಲ್ಲಿನ ಪಾಲನ್ನು ಸೌದಿ ಅರಾಮ್ಕೊಗೆ ಮತ್ತು ಟೆಲಿಕಾಂ ಟವರ್ ಆಸ್ತಿಗಳ ಪಾಲನ್ನು ಬ್ರೂಕ್​ಫೀಲ್ಡ್​ಗೆ​ ಮಾರಾಟ ಮಾಡಲು ಸಿದ್ಧವಾಗಿದೆ ಎನ್ನಲಾಗುತ್ತಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.