ETV Bharat / business

ಎಸ್​​ಸಿ/ಎಸ್​ಟಿ ಅಭಿವೃದ್ಧಿಯ ಎಸ್‌ಸಿಪಿಟಿಎಸ್‌ಪಿಗೆ ಸರ್ಕಾರ ಕೊಟ್ಟದ್ದೆಷ್ಟು? ಬಾಕಿ ಉಳಿದಿದ್ದೆಷ್ಟು? - ಎಸ್‌ಸಿಪಿಟಿಎಸ್‌ಪಿ

ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಆಗಿದ್ದಾಗ ಪರಿಶಿಷ್ಟ ಜಾತಿ ಹಾಗೂ ಪಂಗಡಗಳ ಜನಸಂಖ್ಯೆಗೆ ಅನುಗುಣವಾಗಿ ಅನುದಾನ ಎಂಬ ಕಾಯಿದೆಯೊಂದನ್ನು ಜಾರಿಗೆ ತಂದಿದ್ದರು. ಈ ಯೋಜನೆಯಡಿ ಮೀಸಲಿರಿಸಿದ್ದ ಅನುದಾನ ಪೂರ್ಣ ಪ್ರಮಾಣದಲ್ಲಿ ಬಳಸಲು ಇಲಾಖೆಗಳಿಗೆ ಸಾಧ್ಯವಾಗುತ್ತಿಲ್ಲ ಎಂಬುದು ಅಂಕಿಅಂಶಗಳಿಂದ ತಿಳಿದುಬಂದಿದೆ.

vidhan soudha
ವಿಧಾನಸೌಧ
author img

By

Published : Jan 10, 2020, 4:33 AM IST

ಬೆಂಗಳೂರು: ಪರಿಶಿಷ್ಟ ಜಾತಿ ಮತ್ತು ಪಂಗಡದ ಅಭಿವೃದ್ಧಿಗೆ ದೇಶದಲ್ಲಿ ಪ್ರಥಮ ಬಾರಿಗೆ ಜಾರಿಗೆ ತರಲಾದ ಎಸ್‌ಸಿಪಿಟಿಎಸ್‌ಪಿ ಅನುದಾನ ಬಳಕೆಯಲ್ಲಿ ರಾಜ್ಯ ಸರ್ಕಾರದ ನಿರಾಸಕ್ತಿ ಎದ್ದು ಕಾಣುತ್ತಿದೆ.

ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಆಗಿದ್ದಾಗ ಪರಿಶಿಷ್ಟ ಜಾತಿ ಹಾಗೂ ಪಂಗಡಗಳ ಜನಸಂಖ್ಯೆಗೆ ಅನುಗುಣವಾಗಿ ಅನುದಾನ ಎಂಬ ಕಾಯಿದೆಯೊಂದನ್ನು ಜಾರಿಗೆ ತಂದಿದ್ದರು. ಈ ಯೋಜನೆಯಡಿ ಮೀಸಲಿರಿಸಿದ್ದ ಅನುದಾನ, ಪೂರ್ಣ ಪ್ರಮಾಣದಲ್ಲಿ ಬಳಸಲು ಇಲಾಖೆಗಳಿಗೆ ಸಾಧ್ಯವಾಗುತ್ತಿಲ್ಲ.

ನಿನ್ನೆ (ಗುರುವಾರ) ಬುಡಕಟ್ಟು ಜನಾಂಗ ಆಯೋಗದ ಅಧ್ಯಕ್ಷರ ನೇತೃತ್ವದಲ್ಲಿ ಈ ಬಗ್ಗೆ ಸಭೆ ನಡೆಸಲಾಯಿತು. ಗಿರಿಜನ ಕಲ್ಯಾಣಕ್ಕಾಗಿ ತೆಗೆದುಕೊಂಡ ಕ್ರಮಗಳ ಬಗ್ಗೆಯೂ ಸಹ ಪರ್ಯಾಲೋಚನೆ ನಡೆಸಲಾಯಿತು. ವಾಸ್ತವದಲ್ಲಿ ಎಸ್‌ಸಿಪಿಟಿಎಸ್​ಪಿ ಯೋಜನಾ ಭಾಗವಾದ 'ಗಿರಿಜನ ಉಪಯೋಜನೆ'ಯ (ಟಿಎಸ್​ಪಿ), ಅನುದಾನ ಬಳಕೆಯ ಅಂಕಿಅಂಶ ಗಮನಿಸಿದರೇ ಪೂರ್ಣ ಪ್ರಮಾಣದಲ್ಲಿ ಬಳಕೆ ಸಾಧ್ಯವಾಗುತ್ತಿಲ್ಲ ಎಂಬುದು ಮೇಲ್ನೋಟಕ್ಕೆ ಕಂಡುಬರುತ್ತಿದೆ.

ಅನುದಾನ ಬಳಕೆಯಲ್ಲಿ ವಿಫಲ

ಈ ಹಿಂದೆ ಸಿದ್ದರಾಮಯ್ಯ ಸರ್ಕಾರ ಯೋಜನೆಯ ಮೊದಲ ವರ್ಷದಲ್ಲಿ 4,312.33 ಕೋಟಿ ರೂ. ಟಿಎಸ್​ಪಿ ಅನುದಾನ ಮೀಸಲಿಟ್ಟಿತ್ತು. ಈ ಅನುದಾನ ಎಸ್‌ಟಿ ಸಮುದಾಯದ ಅಭಿವೃದ್ಧಿಗೆ ಬಳಸಿಕೊಳ್ಳಬೇಕು ಎನ್ನುವ ಷರತ್ತು ಕೂಡ ಅದು ವಿಧಿಸಿತ್ತು. ಆದರೆ, ಅಂದಿನಿಂದ ಇಂದಿನವರೆಗೆ ಒಂದು ಬಾರಿಯೂ ಪೂರ್ಣ ಪ್ರಮಾಣದಲ್ಲಿ ಅನುದಾನ ಬಳಕೆಯಾಗಿಲ್ಲ. 2014-15ರಲ್ಲಿ ಕೇವಲ 3,514.36 ಕೋಟಿ ರೂ. ಅಂದರೆ ಶೇ 81.49 ಅನುದಾನ ಬಳಕೆಯಾಗಿದೆ.

Uses of SCPTSP fund since 2014 to 2019
ಎಸ್‌ಸಿಪಿಟಿಎಸ್‌ಪಿಗೆ ಬಿಡುಗಡೆಯಾದ ಅನುದಾನ ಮತ್ತು ಬಳಕೆ

2015-16ರಲ್ಲಿ 4,585.95 ಕೋಟಿ ರೂ. ಅನುದಾನದಲ್ಲಿ 4,385.51 ಕೋಟಿ ರೂ. ಬಳಕೆಯಾಗಿದ್ದು (ಶೇ 95.63) ಈವರೆಗಿನ ಗರಿಷ್ಠ ಪ್ರಮಾಣವಾಗಿದೆ. 2016-17ರಲ್ಲಿ 5,632.19 ಕೋಟಿ ರೂ. ಗಿರಿಜನ ಉಪಯೋಜನೆ ಅನುದಾನ ಹಂಚಿಕೆಯಾಗಿತ್ತು. ಈ ಪೈಕಿ 5,150.10 ಕೋಟಿ ರೂ.ಯಷ್ಟು ಬಳಕೆ ಮಾಡಲಾಗಿದೆ. ಶೇ 91.44ರಷ್ಟು ಅನುದಾನ ಸದ್ಬಳಕೆಯಾಗಿದೆ.

2017-18ರಲ್ಲಿ ಟಿಎಸ್​ಪಿಯಲ್ಲಿ 8,314.76 ಕೋಟಿ ರೂ. ಅನುದಾನದಲ್ಲಿ 7,696.85 ಕೋಟಿ ರೂ. (ಶೇ 92.57ರಷ್ಟು) ವಿನಿಯೋಗವಾಗಿದೆ. 2018-19ರಲ್ಲಿ ಗಿರಿಜನ ಉಪಯೋಜನೆಯಡಿ 8,587.99 ಕೋಟಿ ರೂ.‌ಅನುದಾನ ಹಂಚಿಕೆ‌ ಮಾಡಲಾಗಿದ್ದು, ಇದರಲ್ಲಿ 7,912.19 ಕೋಟಿ ರೂ. ಬಳಕೆ ಮಾಡಲಾಗಿತ್ತು.

2019-20ನೇ ಸಾಲಿನಲ್ಲಿ ಟಿಎಸ್‌ಪಿ ಅನುದಾನ ಎಂದು 8,847.32 ಕೋಟಿ ರೂ. ಮೀಸಲಿರಿಸಲಾಗಿದೆ‌. ಆದರೆ, ಈ ಅನುದಾನದಲ್ಲಿ ನವೆಂಬರ್ ಅಂತ್ಯಕ್ಕೆ ಕೇವಲ ಶೇ.39ರಷ್ಟು ಮಾತ್ರ ಬಳಕೆಯಾಗಿದೆ. ಉಳಿದ ನಾಲ್ಕು ತಿಂಗಳಲ್ಲಿ ಅನುದಾನ ಬಳಕೆಯಲ್ಲಿ ಗಣನೀಯ ಪ್ರಗತಿ ಕಾಣುವುದು ಕಷ್ಟ ಎಂಬ ಆತಂಕ ಅಧಿಕಾರಿಗಳಲ್ಲೇ ಕಾಡುತ್ತಿದೆ.

Intro:Body:KN_BNG_02_TSPFUND_UTILISATION_SCRIPT_7201951

ಟಿಎಸ್ ಪಿ ಅನುದಾನ ಬಳಕೆಯಲ್ಲಿ ಈ ಬಾರಿ ಕಳಪೆ ಸಾಧನೆಯಾಗುತ್ತಾ?: ಏನು ಹೇಳುತ್ತೆ ಅಂಕಿಅಂಶ!

ಬೆಂಗಳೂರು: ಪರಿಶಿಷ್ಟ ಜಾತಿ ಮತ್ತು ಪಂಗಡದ ಅಭಿವೃದ್ಧಿಗೆಂದು ದೇಶದಲ್ಲಿಯೇ ಮೊದಲ ಬಾರಿಗೆ ಜಾರಿಗೆ ತಂದ ಎಸ್‌ಸಿಪಿಟಿಎಸ್‌ಪಿ ಅನುದಾನದ ಬಳಕೆಯಲ್ಲಿ ಸರಕಾರದ ನಿರಾಸಕ್ತಿ ಎದ್ದುಕಾಣುತ್ತಿದೆ.

ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಪರಿಶಿಷ್ಟ ಜಾತಿ ಹಾಗೂ ಪಂಗಡಕ್ಕೆಂದು ಜನಸಂಖ್ಯೆಗೆ ಅನುಗುಣವಾಗಿ ಅನುದಾನ ಎನ್ನುವ ಕಾಯಿದೆಯನ್ನು ಜಾರಿಗೆ ತಂದರು. ಆದರೀಗ ಪರಿಶಿಷ್ಟ ಪಂಗಡಕ್ಕೆಂದು ಮೀಸಲಿರಿಸಿದ್ದ ಅನುದಾನವನ್ನು ಪೂರ್ಣ ಪ್ರಮಾಣದಲ್ಲಿ ಬಳಸಲು ಇಲಾಖೆಗಳಿಗೆ ಸಾಧ್ಯವಾಗುತ್ತನೇ ಇಲ್ಲ. ಇಂದು ಬುಡಗಟ್ಟು ಜನಾಂಗ ಆಯೋಗದ ಅಧ್ಯಕ್ಷರ ನೇತೃತ್ವದಲ್ಲಿ ವಿಧಾನಸೌಧದಲ್ಲಿ ಸಭೆ ನಡೆಯಿತು. ಅನುದಾನ ಬಳಕೆ ಗಿರಿಜನ ಕಲ್ಯಾಣಕ್ಕಾಗಿ ತೆಗೆದುಕೊಂಡ ಕ್ರಮಗಳ ಬಗ್ಗೆ ಪರ್ಯಾಲೋಚನೆ ನಡೆಸಲಾಯಿತು. ಆದರೆ, ವಾಸ್ತವದಲ್ಲಿ ಎಸ್‌ಸಿಪಿ ಟಿಎಸ್ ಪಿ ಯೋಜನೆಯ ಭಾಗವಾದ ಗಿರಿಜನ ಉಪಯೋಜನೆ (ಟಿಎಸ್ ಪಿ) ಅನುದಾನ ಬಳಕೆಯ ಅಂಕಿಅಂಶ ನೋಡಿದರೆ, ಪೂರ್ಣ ಪ್ರಮಾಣದಲ್ಲಿ ಅನುದಾನ ಬಳಕೆ ಸಾಧ್ಯವಾಗುತ್ತನೇ ಇಲ್ಲ.

ಪೂರ್ಣ ಟಿಎಸ್ ಪಿ ಹಣ ಬಳಕೆಯಲ್ಲಿ ವಿಫಲ:

ಸಿದ್ದರಾಮಯ್ಯ ಸರ್ಕಾರ ಯೋಜನೆಯ ಮೊದಲ ವರ್ಷದಲ್ಲಿ 4312.33 ಕೋಟಿ ರು. ಟಿಎಸ್ ಪಿ ಅನುದಾನ ಮೀಸಲಿಡಲಾಗಿತ್ತು. ಈ ಅನುದಾನ ಎಸ್‌ಟಿ ಸಮುದಾಯದ ಅಭಿವೃದ್ಧಿಗೆ ಬಳಸಿಕೊಳ್ಳಬೇಕು ಎನ್ನುವ ಷರತ್ತು ವಿಧಿಸಲಾಗಿತ್ತು. ಆದರೆ ಅಂದಿನಿಂದ ಇಂದಿನವರೆಗೆ ಒಂದು ಬಾರಿನೂ ಪೂರ್ಣ ಪ್ರಮಾಣದಲ್ಲಿ ಅನುದಾನ ಬಳಕೆಯಾಗಿಲ್ಲ. 2014-15ರಲ್ಲಿ ಕೇವಲ 3514.36 ಕೋಟಿ ರೂ. ಅಂದರೆ 81.49ಶೇ. ಅನುದಾನ ಬಳಕೆಯಾಗಿತ್ತು.

2015-16 ರಲ್ಲಿ 4585.95 ಕೋಟಿ ರೂ. ಅನುದಾನದಲ್ಲಿ 4385.51 ಕೋಟಿ ರೂ. ಖಾಲಿಯಾಗಿದ್ದೇ ದೊಡ್ಡ ಸಾಧನೆ. ಅಂದರೆ, 95.63ಶೇ. ಅನುದಾನ ಬಳಕೆಯಾಗಿದ್ದು, ಈವರೆಗಿನ ದಾಖಲೆ.

2016-17ರಲ್ಲಿ 5632.19 ಕೋಟಿ ರೂ. ಗಿರಿಜನ ಉಪಯೋಜನೆ ಅನುದಾನ ಹಂಚಿಕೆಯಾಗಿತ್ತು. ಈ ಪೈಕಿ 5150.10 ಕೋಟಿ ರೂ. ಅನುದಾನ ಬಳಕೆ ಮಾಡಲಾಗಿದೆ. ಸುಮಾರು 91.44 ಶೇ. ಅನುದಾನ ಬಳಸುವಲ್ಲಿ ಯಶ ಕಾಣಲಾಗಿದೆ.

2017-18ರಲ್ಲಿ ಟಿಎಸ್ ಪಿಯಲ್ಲಿ 8314.76 ಕೋಟಿ ರೂ. ಅನುದಾನದಲ್ಲಿ 7,696.85 ಕೋಟಿ ರೂ. ಅಂದರೆ 92.57ಶೇ. ಅನುದಾನ ಬಳಕೆ ಸಾಧ್ಯವಾಗಿದೆ.

2018-19ರಲ್ಲಿ ಗಿರಿಜನ ಉಪಯೋಜನೆಯಡಿ 8587.99 ಕೋಟಿ ರೂ.‌ಅನುದಾನ ಹಂಚಿಕೆ‌ ಮಾಡಲಾಗಿತ್ತು. ಈ ಪೈಕಿ 7912.19 ಕೋಟಿ ರೂ. ಅನುದಾನ ಬಳಕೆ ಮಾಡಲಾಗಿತ್ತು. ಒಟ್ಟು 92.13ಶೇ. ಟಿಎಸ್ ಪಿ ಅನುದಾನ ಬಳಕೆ ಮಾಡಲಾಗಿತ್ತು.

2019-20ನೇ ಸಾಲಿನಲ್ಲಿ ಟಿಎಸ್‌ಪಿ ಅನುದಾನವೆಂದು 8847.32 ಕೋಟಿ ರೂ. ಮೀಸಲಿರಿಸಲಾಗಿದೆ‌. ಆದರೆ ಈ ಅನುದಾನದಲ್ಲಿ ನವೆಂಬರ್ ಅಂತ್ಯಕ್ಕೆ ಕೇವಲ ಶೇ.39ರಷ್ಟು ಮಾತ್ರ ಬಳಕೆಯಾಗಿದೆ. ಉಳಿದ ನಾಲ್ಕು ತಿಂಗಳಲ್ಲಿ ಅನುದಾನ ಬಳಕೆಯಲ್ಲಿ ಗಣನೀಯ ಪ್ರಗತಿ ಕಾಣುವುದು ಕಷ್ಟ ಎಂಬ ಆತಂಕ ಅಧಿಕಾರಿಗಳಲ್ಲೇ ಕಾಡುತ್ತಿದೆ.Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.