ನವದೆಹಲಿ: ಅಮೆರಿಕದ ಟೆಕ್ ದೈತ್ಯ ಕಂಪನಿಗಳಾದ ಗೂಗಲ್ ಮತ್ತು ಫೇಸ್‌ಬುಕ್‌ನಿಂದ ಸಂಗ್ರಹಿಸಿದ ಡಿಜಿಟಲ್ ಸೇವಾ ತೆರಿಗೆಗೆ ಪ್ರತೀಕಾರವಾಗಿ ಆಮದು ಮಾಡಿಕೊಳ್ಳುವ 2 ಬಿಲಿಯನ್ ಡಾಲರ್ ಮೌಲ್ಯದ ಸರಕು ಮತ್ತು ಸೇವೆಗಳಿಗೆ ಶೇ. 25ರಷ್ಟು ಸುಂಕ ವಿಧಿಸುವುದಾಗಿ ಅಮೆರಿಕ ಬುಧವಾರ ಪ್ರಕಟಿಸಿದೆ.
ಆಸ್ಟ್ರಿಯಾ, ಭಾರತ, ಇಟಲಿ, ಸ್ಪೇನ್, ಟರ್ಕಿ ಮತ್ತು ಇಂಗ್ಲೆಂಡ್ ಅಳವಡಿಸಿಕೊಂಡ ಡಿಜಿಟಲ್ ಸೇವಾ ತೆರಿಗೆ ನೀತಿಗಳಿಗೆ ಪ್ರತಿಯಾಗಿ ಅಮೆರಿಕ ಸುಂಕದ ಸಮರ ಹೂಡಿದೆ ಎಂದು ಅಮೆರಿಕ ವ್ಯಾಪಾರ ಪ್ರತಿನಿಧಿಗಳ ಕಚೇರಿ (ಯುಎಸ್‌ಟಿಆರ್) ಪ್ರಕಟಣೆಯಲ್ಲಿ ತಿಳಿಸಿದೆ.
ಯುಎಸ್‌ಟಿಆರ್ ತಕ್ಷಣವೇ ಆರು ತಿಂಗಳವರೆಗೆ ಸುಂಕವನ್ನು ಸ್ಥಗಿತಗೊಳಿಸಿತು. ಆರ್ಥಿಕ ಸಹಕಾರ ಮತ್ತು ಅಭಿವೃದ್ಧಿ ಸಂಸ್ಥೆ (ಒಸಿಇಡಿ) ಮತ್ತು ಜಿ-20ಯಲ್ಲಿ ಬಾಕಿ ಇರುವ ಅಂತಾರಾಷ್ಟ್ರೀಯ ಮಾತುಕತೆಗಳನ್ನು ತೀರ್ಮಾನಿಸಲು ಅವಕಾಶ ಮಾಡಿಕೊಟ್ಟಿತು.
ಯುಎಸ್ ಟೆಕ್ ಕಂಪನಿಗಳಾದ ಗೂಗಲ್, ಫೇಸ್‌ಬುಕ್, ಟ್ವಿಟರ್, ಮೈಕ್ರೋಸಾಫ್ಟ್ ಮತ್ತು ಅಮೆಜಾನ್ ವಿರುದ್ಧ ಈ ಆರು ರಾಷ್ಟ್ರಗಳು ವಿಧಿಸಿರುವ ಡಿಜಿಟಲ್ ಸೇವಾ ತೆರಿಗೆಯ ಬಗ್ಗೆ ಒಂದು ವರ್ಷದ ಸುದೀರ್ಘ ಚರ್ಚೆ ನಡೆಸಿ ಅಂತಿಮವಾಗಿ ಅನುಷ್ಠಾನಕ್ಕೆ ಬಂದಿದೆ. ಯುಎಸ್‌ಟಿಆರ್ ಡಿಜಿಟಲ್ ತೆರಿಗೆ ವಿಧಿಸುವುದು ಯುಎಸ್ ಕಂಪನಿಗಳ ವಿರುದ್ಧ ತಾರತಮ್ಯವಾಗಿದೆ ಎಂದು ಹೇಳಿದೆ.
ಆಸ್ಟ್ರಿಯಾ, ಭಾರತ, ಇಟಲಿ, ಸ್ಪೇನ್, ಟರ್ಕಿ ಮತ್ತು ಬ್ರಿಟನ್ ಅಳವಡಿಸಿಕೊಂಡ ಡಿಜಿಟಲ್ ಸೇವಾ ತೆರಿಗೆಗಳ (ಡಿಎಸ್‌ಟಿ) ಒಂದು ವರ್ಷದ ಸೆಕ್ಷನ್ 301 ತನಿಖೆಯ ತೀರ್ಮಾನವನ್ನು ಇಂಗ್ಲೆಂಡ್ ವಾಣಿಜ್ಯ ಪ್ರತಿನಿಧಿ ಕ್ಯಾಥರೀನ್ ತೈ ಪ್ರಕಟಿಸಿದ್ದಾರೆ ಎಂದು ಯುಎಸ್‌ಟಿಆರ್ ತಿಳಿಸಿದೆ.
ಯುಎಸ್‌ಟಿಆರ್ ಸೆಕ್ಷನ್ 301 ಡಿಜಿಟಲ್ ಸರ್ವೀಸಸ್ ಟ್ಯಾಕ್ಸ್ ಇನ್ವೆಸ್ಟಿಗೇಷನ್ನಲ್ಲಿ ಸುಂಕಗಳನ್ನು ಘೋಷಿಸಿ, ತಕ್ಷಣವೇ ಸ್ಥಗಿತಗೊಳಿಸುತ್ತದೆ. ಆರು ವ್ಯಾಪಾರ ಪಾಲುದಾರರಿಂದ ಸರಕುಗಳ ಮೇಲಿನ ಅಮಾನತುಗೊಳಿಸಿದ ಸುಂಕಗಳು ವಿಶಾಲವಾದ ಅಂತಾರಾಷ್ಟ್ರೀಯ ತೆರಿಗೆ ಮಾತುಕತೆಗಳು ಮುಂದುವರೆಸಲು ಅನುವು ಮಾಡಿಕೊಡುತ್ತದೆ.
ಡಿಜಿಟಲ್ ಸೇವಾ ತೆರಿಗೆಗಳೊಂದಿಗಿನ ನಮ್ಮ ಕಾಳಜಿಗಳನ್ನು ಒಳಗೊಂಡಂತೆ ಅಂತಾರಾಷ್ಟ್ರೀಯ ತೆರಿಗೆಗೆ ಸಂಬಂಧಿಸಿದ ಹಲವು ಪ್ರಮುಖ ಸಮಸ್ಯೆಗಳಿಗೆ ಬಹುಪಕ್ಷೀಯ ಪರಿಹಾರ ಕಂಡುಹಿಡಿಯುವಲ್ಲಿ ಬ್ರಿಟನ್ ಗಮನಹರಿಸಿದೆ ಎಂದು ರಾಯಭಾರಿ ಕ್ಯಾಥರೀನ್ ತೈ ಹೇಳಿದ್ದಾರೆ.
ಒಇಸಿಡಿ ಮತ್ತು ಜಿ-20 ರಾಷ್ಟ್ರಗಳ ಪ್ರಕ್ರಿಯೆಗಳ ಮೂಲಕ ಅಂತಾರಾಷ್ಟ್ರೀಯ ತೆರಿಗೆ ವಿಚಾರಗಳ ಬಗ್ಗೆ ಒಮ್ಮತಕ್ಕೆ ಬರಲು ಅಮೆರಿಕ ಸರ್ಕಾರ ಬದ್ಧವಾಗಿದೆ ಎಂದು ತೈ ಹೇಳಿದ್ದಾರೆ.