ETV Bharat / business

ಭಾರತಕ್ಕೆ 'ದೊಡ್ಡ'ಣ್ಣನಿಂದ ವಾಗ್‌'ದಾನ'.. ಮೋದಿ ಕೇಳಿದಷ್ಟು ಕೊಡ್ತಾರಂತೆ ಟ್ರಂಪ್! - Donald Trump India Tour

ಭಾರತ ಮತ್ತು ಅಮೆರಿಕದ ನಡುವೆ ಏರ್ಪಡಲಿರುವ ಒಪ್ಪಂದಗಳು ಮಾತುಕತೆಯ ಹಂತದಲ್ಲಿವೆ. ಇದರ ನಡುವೆಯೂ ಟ್ರಂಪ್ ಅವರ ಆರ್ಥಿಕ ಸಲಹೆಗಾರ ಲ್ಯಾರಿ ಕುಡ್ಲೋ ಶ್ವೇತಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ, ಉಭಯ ರಾಷ್ಟ್ರಗಳ ನಡುವೆ ನಡೆಯಲಿರುವ ವ್ಯಾಪಾರ ಒಪ್ಪಂದಗಳ ಸುಳಿವು ನೀಡಿದ್ದಾರೆ.

Trump- Modi
ಟ್ರಂಪ್- ಮೋದಿ
author img

By

Published : Feb 14, 2020, 7:30 PM IST

Updated : Feb 14, 2020, 7:36 PM IST

ವಾಷಿಂಗ್ಟಂನ್​: ಅಮೆರಿಕ-ಭಾರತ ನಡುವಿನ ವಾಣಿಜ್ಯ ವಹಿವಾಟು ಪ್ರಮುಖ ವಲಯಗಳಲ್ಲಿ ವಿಸ್ತಾರವಾಗಿ ಹರಡಿಕೊಂಡಿದೆ. ಭಾರತಕ್ಕೆ ಎಷ್ಟು ಬೇಕಾದರೂ ಇಂಧನ ಪೂರೈಸಲು ಅಮೆರಿಕ ಸಿದ್ಧವಿದೆ ಎಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಐತಿಹಾಸಿಕ ಚೊಚ್ಚಲ ಭೇಟಿಗೂ ಮುನ್ನ ಶ್ವೇತಭವನದ ಉನ್ನತ ಅಧಿಕಾರಿಯೊಬ್ಬರು ಸಿಹಿ ಸುದ್ದಿಯೊಂದನ್ನು ಹೊರ ಹಾಕಿದ್ದಾರೆ.

ಭಾರತ ಮತ್ತು ಅಮೆರಿಕದ ನಡುವೆ ಏರ್ಪಡಲಿರುವ ಒಪ್ಪಂದಗಳು ಮಾತುಕತೆಯ ಹಂತದಲ್ಲಿವೆ. ಇದರ ನಡುವೆಯೂ ಟ್ರಂಪ್ ಅವರ ಆರ್ಥಿಕ ಸಲಹೆಗಾರ ಲ್ಯಾರಿ ಕುಡ್ಲೋ, ಶ್ವೇತಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ, ಉಭಯ ರಾಷ್ಟ್ರಗಳ ನಡುವೆ ನಡೆಯಲಿರುವ ವ್ಯಾಪಾರ ಒಪ್ಪಂದಗಳ ಸುಳಿವು ನೀಡಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರ ಆಹ್ವಾನದ ಮೇರೆಗೆ ಫೆಬ್ರವರಿ 24 ಮತ್ತು 25ರಂದು ಟ್ರಂಪ್ ಅವರು ಭಾರತ ಪ್ರವಾಸ ಕೈಗೊಳ್ಳಲಿದ್ದಾರೆ. ಈ ಭೇಟಿಯು ಅತ್ಯಂತ ಮಹ್ತವ ಪಡೆದಿದೆ. ಭಾರತದ ಜೊತೆಗಿನ ಸಂಬಂಧ ಈ ಭೇಟಿಯಿಂದಾಗಿ ಮತ್ತಷ್ಟು ಗಟ್ಟಿಗೊಂಡು ಬಹುದೂರ ಸಾಗಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಐತಿಹಾಸಿಕ ಭೇಟಿಯ ವೇಳೆ ಉಭಯ ದೇಶಗಳು ದೊಡ್ಡ ಮಟ್ಟದ ರಕ್ಷಣಾ ಒಪ್ಪಂದಗಳನ್ನು ಅಂತಿಮಗೊಳಿಸಲು ಕಣ್ಣಿಟ್ಟಿವೆ. ಇದರಲ್ಲಿ ಭಾರತೀಯ ನೌಕಾಪಡೆಯು 2.6 ಬಿಲಿಯನ್ ಡಾಲರ್​ (18,574 ಕೋಟಿ ರೂ.) ವೆಚ್ಚದಲ್ಲಿ ಅಮೆರಿಕ ಮಿಲಿಟರಿಯಲ್ಲಿನ ಹೆಲಿಕಾಪ್ಟರ್​ಗಳನ್ನು ಖರೀದಿಸುವುದು ಸೇರಿದೆ ಎಂದರು.

ಇಂಧನ ಪೂರೈಕೆಯ ಪ್ರಮಾಣ ಹೆಚ್ಚಲಿದೆ ಎಂಬ ಪ್ರಶ್ನೆಗೆ ಉತ್ತರಿಸಿದ ಕುಡ್ಲೋ, ಹೆಚ್ಚಾಗಿರಲಿದೆ ಎಂದು ಆಶಿಸಬಹುದು. ಇರುವ ಎಲ್ಲ ಅಡೆತಡೆಗಳನ್ನೂ ತೆಗೆದು ಹಾಕೋಣ. ಅವರಿಗೆ (ಭಾರತೀಯರಿಗೆ) ಶಕ್ತಿ ಬೇಕು. ನಮಗೆ ಸಾಕಷ್ಟು ಶಕ್ತಿ ಇದೆ. ಪ್ರಧಾನಿ ಮೋದಿ ಅವರೊಂದಿಗೆ ದ್ವಿಪಕ್ಷೀಯ ಸಭೆಗಳನ್ನು ನಡೆಸಿದಾಗ. ನೀವು ನನಗೆ ಒಂದು ಸಂಖ್ಯೆಯನ್ನು ಕೊಡಿ (ಅಮೆರಿಕದಿಂದ ಭಾರತಕ್ಕೆ ಇಂಧನ ರಫ್ತು ಮಾಡಿ). ಆಮೇಲೆ ನಾನು ಅದನ್ನು ಗುರಿ ಮುಟ್ಟಿಸುತ್ತೇನೆ ಎಂದಿದ್ದಾರೆ ಎಂದು ಕುಡ್ಲೋ ಅವರು ಮೋದಿ ಮಾತು ಉಲ್ಲೇಖಿಸಿದರು.

ಕಳೆದ ಕೆಲವು ವರ್ಷಗಳಲ್ಲಿ ಅಮೆರಿಕದಿಂದ ಭಾರತಕ್ಕೆ ಇಂಧನ ರಫ್ತು ಶೂನ್ಯದಿಂದ 8 ಬಿಲಿಯನ್ ಡಾಲರ್​ಗೆ ಏರಿಕೆಯಾಗಿತ್ತು. ಈ ವರ್ಷ ಅದು 10 ಬಿಲಿಯನ್ ಡಾಲರ್​ಗೆ ಏರಿಕೆಯಾಗುವ ನಿರೀಕ್ಷೆಯಿದೆ. ನಮ್ಮ ಇಂಧನದ ವ್ಯಾಪಾರವು ಕಳೆದ ವರ್ಷ 8 ಬಿಲಿಯನ್ ಡಾಲರ್‌ಗಳಿಗೆ ತಲುಪಿದೆ. ನೆನಪಿರಲ್ಲಿ ಆರಂಭದಲ್ಲಿ ಇದು ಶೂನ್ಯವಾಗಿತ್ತು. ಕಳೆದ ಕೆಲವು ವರ್ಷಗಳ ಹಿಂದೆ, ಅಮೆರಿಕದಲ್ಲಿ ಭಾರತದ ನೂತನ ರಾಯಭಾರಿ ತಾರಂಜಿತ್ ಸಿಂಗ್ ಸಂಧು ಅವರು ಅಮೆರಿಕ- ಇಂಡಿಯಾ ಬ್ಯುಸಿನೆಸ್ ಕೌನ್ಸಿಲ್ ಅವರ ಗೌರವಾರ್ಥ ಆಯೋಜಿಸಿದ್ದ ಸ್ವಾಗತ ಸಮಾರಂಭದಲ್ಲಿ ತಮ್ಮ ಹೇಳಿಕೆಯಲ್ಲಿ ಈ ಅಂಕಿಸಂಖ್ಯೆ ನೀಡಿದ್ದರು ಎಂದರು.

ಇಂಧನ ಮತ್ತು ಅನಿಲ, ವಿದ್ಯುತ್ ಮತ್ತು ಶಕ್ತಿಯ ದಕ್ಷತೆ, ನವೀಕರಿಸಬಹುದಾದ ಇಂಧನ ಮತ್ತು ಸುಸ್ಥಿರ ಬೆಳವಣಿಗೆ ಹಾಗೂ ಕಲ್ಲಿದ್ದಲುನಂತಹ ನಾಲ್ಕು ಒಪ್ಪಂದಗಳ ಸ್ತಂಭದ ಮೇಲೆ ಉಭಯ ರಾಷ್ಟ್ರಗಳ ವಾಣಿಜ್ಯಾತ್ಮಕ ಸಂಬಂಧ ಗಟ್ಟಿಗೊಳ್ಳಲಿದೆ. ಅಮೆರಿಕದಿಂದ 114 ಫೈಟರ್ ಜೆಟ್​ ಖರೀದಿಸಲು ಭಾರತೀಯ ನೌಕಾಪಡೆ (ಐಎಎಫ್) 18 ಬಿಲಿಯನ್ ಡಾಲರ್ ಒಪ್ಪಂದ ಮಾಡಿಕೊಳ್ಳಲಿದೆ. ಸರ್ಕಾರ ಮತ್ತು ಕೈಗಾರಿಕಾ ಮೂಲಗಳು ಪ್ರಕಾರ, ಎರಡೂ ಕಡೆಯವರು 2.6 ಬಿಲಿಯನ್ ಡಾಲರ್​ ಒಪ್ಪಂದ ಅಂತಿಮಗೊಳ್ಳುವ ಸಾಧ್ಯತೆಯಿದೆ ಎನ್ನುತ್ತಿದ್ದಾರೆ. ಇದರ ಅಡಿಯಲ್ಲಿ ಅಮೆರಿಕ 24 ಮಲ್ಟಿ-ರೋಲ್ ಎಂಹೆಚ್- 60 ಆರ್ ಸೀಹಾಕ್ ಕಡಲ ಹೆಲಿಕಾಪ್ಟರ್‌ಗಳನ್ನು ಭಾರತಕ್ಕೆ ಪೂರೈಸಲಿದೆ.

Last Updated : Feb 14, 2020, 7:36 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.