ಹೈದರಾಬಾದ್: ಟಾಪ್ 500 ಕಂಪನಿಗಳಲ್ಲಿ ಒಂದಾಗಿರುವ ಮಾಸ್ ಮ್ಯೂಚುಯಲ್ ಕಂಪನಿಯು ಹೈದರಾಬಾದ್‌ನಲ್ಲಿ ಸುಮಾರು 1,000 ಕೋಟಿ ರೂ. ಹೂಡಿಕೆ ಮಾಡಲು ಮುಂದಾಗಿದೆ.
ಅಮೆರಿಕದ ಜೀವ ವಿಮೆದಾರ ಮೆಸಾಚುಸೆಟ್ಸ್ ಮ್ಯೂಚುಯಲ್ ಲೈಫ್ ಇನ್ಶುರೆನ್ಸ್ ಕಂಪನಿ ತೆಲಂಗಾಣದ ಹೈದರಾಬಾದ್‌ನಲ್ಲಿ ತನ್ನ ಜಾಗತಿಕ ಸಾಮರ್ಥ್ಯ ಕೇಂದ್ರ ಸ್ಥಾಪಿಸುವುದಾಗಿ ಘೋಷಿಸಿದೆ.
ಮಾಸ್ ಮ್ಯೂಚುಯಲ್ ಫಾರ್ಚೂನ್ 500 ಸಂಸ್ಥೆಯು ವಿಮೆ ಮತ್ತು ಹಣಕಾಸು ಉದ್ಯಮದಲ್ಲಿ ಜಾಗತಿಕ ನಾಯಕನಾಗಿದ್ದು, ಹೈದರಾಬಾದ್ ಅನ್ನು ಆಯ್ಕೆ ಮಾಡಿಕೊಂಡಿದೆ. ಅಮೆರಿಕದ ಹೊರಗೆ ತನ್ನ ಮೊದಲ ಜಾಗತಿಕ ಕೇಂದ್ರವನ್ನು ಇಲ್ಲಿ ಸ್ಥಾಪಿಸುವುದು ತೆಲಂಗಾಣ ಸರ್ಕಾರದ ಹೂಡಿಕೆದಾರ ಸ್ನೇಹಿ ನೀತಿಗಳಿಗೆ ಸಾಕ್ಷಿಯಾಗಿದೆ ಎಂದು ರಾಜ್ಯ ಸರ್ಕಾರ ಹೇಳಿಕೊಂಡಿದೆ.
ಇದನ್ನೂ ಓದಿ: ಡಿಸೆಂಬರ್ನಲ್ಲಿ ಪ್ರಯಾಣಿಕ ವಾಹನಗಳ ಮಾರಾಟ ಶೇ 24ರಷ್ಟು ವೃದ್ಧಿ: ವಾಣಿಜ್ಯ ವೆಹಿಕಲ್ ಎಷ್ಟು?
ಮಾಸ್ ಮ್ಯೂಚುಯಲ್ ಅಮೆರಿಕ ಮೂಲದ ಕಂಪನಿಯಾಗಿದೆ. ಜಾಗತಿಕ ಸಾಮರ್ಥ್ಯ ಕೇಂದ್ರದ ಹೆಸರಿನಲ್ಲಿ ನಾವು ಕಂಪನಿಯನ್ನು ಸ್ಥಾಪಿಸುತ್ತಿದ್ದೇವೆ. ಹೈದರಾಬಾದ್‌ನಲ್ಲಿ ಹೂಡಿಕೆ ಮಾಡುತ್ತಿರುವ ಅಮೆರಿಕದ ಮೂಲದ ಮೊದಲ ಕಂಪನಿ ಇದಾಗಿದೆ. ತೆಲಂಗಾಣಕ್ಕೆ ದೊರೆತ ಅತಿದೊಡ್ಡ ಗೌರವ ಎಂದು ಐಟಿ ಮತ್ತು ಕೈಗಾರಿಕೋದ್ಯಮ ಸಚಿವ ಕೆಟಿ ರಾಮರಾವ್ ಹೇಳಿದರು.