ಲಂಡನ್: ಪರಾರಿಯಾದ ವಜ್ರೋದ್ಯಮಿ ನೀರವ್ ಮೋದಿ ಅವರನ್ನು ಭಾರತಕ್ಕೆ ಹಸ್ತಾಂತರಿಸಲು ಬ್ರಿಟನ್ನ ಗೃಹ ಸಚಿವರಾದ ಪ್ರೀತಿ ಪಟೇಲ್ ಶುಕ್ರವಾರ ಅನುಮೋದನೆ ನೀಡಿದ್ದಾರೆ ಎಂದು ಎಎನ್‌ಐ ವರದಿ ಮಾಡಿದೆ. 2 ಬಿಲಿಯನ್ ಡಾಲರ್ ಪಂಜಾಬ್ ನ್ಯಾಷನಲ್ ಬ್ಯಾಂಕ್ (ಪಿಎನ್‌ಬಿ) ಹಗರಣ ಪ್ರಕರಣಕ್ಕೆ ಸಂಬಂಧ ಉದ್ಯಮಿ, ಫೆಬ್ರವರಿ 25ರಂದು ಇಂಗ್ಲೆಂಡ್ನಲ್ಲಿ ಭಾರತಕ್ಕೆ ಗಡೀಪಾರು ಮಾಡುವ ವಿರುದ್ಧ ಕಾನೂನು ಹೋರಾಟದ ಕೊನೆ ಅವಕಾಶ ಕಳೆದುಕೊಂಡ ನಂತರ ಈ ಬೆಳವಣಿಗೆ ಸಂಭವಿಸಿದೆ.
ಬ್ರಿಟನ್ನ ವೆಸ್ಟ್ಮಿನಿಸ್ಟರ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ತನ್ನ 83 ಪುಟಗಳ ಆದೇಶದಲ್ಲಿ ನೀರವ್ ಮೋದಿ ಅವರಿಗೆ ಭಾರತದಲ್ಲಿ ನ್ಯಾಯಯುತ ವಿಚಾರಣೆ ನೀಡಲಾಗುವುದಿಲ್ಲ ಎಂಬುದು ಒಪ್ಪಿಕೊಳ್ಳುವಂತಹದ್ದಲ್ಲ ಎಂದಿದೆ.
ಭಾರತದಲ್ಲಿ ಸಾಂಕ್ರಾಮಿಕ ಮತ್ತು ಸಂಭಾವ್ಯ ಮಾನವ ಹಕ್ಕುಗಳ ಉಲ್ಲಂಘನೆಯಿಂದಾಗಿ ಅವರ ಮಾನಸಿಕ ಆರೋಗ್ಯವು ಹದಗೆಡುತ್ತಿದೆ ಎಂಬ ಬಗ್ಗೆ ಮೋದಿಯ ರಕ್ಷಣಾ ತಂಡದ ಮತ್ತೊಂದು ವಾದವನ್ನು ನ್ಯಾಯಾಲಯವು ತಳ್ಳಿಹಾಕಿದೆ.
ಹಸ್ತಾಂತರಿಸಿದರೆ ನೀರವ್ ಮೋದಿಗೆ ನ್ಯಾಯ ದೊರೆಯುವುದಿಲ್ಲ ಎಂಬುದಕ್ಕೆ ಯಾವುದೇ ಪುರಾವೆಗಳಿಲ್ಲ ಎಂದಿದೆ.