ಕ್ಯಾಲಿಫೋನಿಯಾ(ಅಮೆರಿಕ): ಸರ್ಕಾರಗಳ ಪರ ಪ್ರಚಾರ ಮಾಡುವ ಸಿದ್ಧಾಂತಗಳನ್ನು ಇಟ್ಟುಕೊಂಡಿದ್ದ ಸುಮಾರು ಮೂರೂವರೆ ಸಾವಿರ ಖಾತೆಗಳನ್ನು ಟ್ವಿಟರ್ ಬ್ಯಾನ್ ಮಾಡಿದ್ದು, ಬಹುಪಾಲು ಖಾತೆಗಳು ಚೀನಾಗೆ ಸೇರಿವೆ.
ಚೀನಾದ ಕ್ಸಿನ್ಜಿಯಾಂಗ್ನ ಪ್ರದೇಶದ ಉಯ್ಘರ್ ಸಮುದಾಯ ಜನರ ವಿಚಾರವಾಗಿ ಅಲ್ಲಿನ ಕಮ್ಯುನಿಸ್ಟ್ ಪಕ್ಷದ ಹೇಳಿಕೆಗಳನ್ನು ಪ್ರಚಾರ ಮಾಡುವ ಸುಮಾರು 2,048 ಖಾತೆಗಳನ್ನು ರದ್ದು ಮಾಡಲಾಗಿದೆ ಎಂದು ಟ್ವಿಟರ್ ಅಧಿಕೃತ ಹೇಳಿಕೆ ನೀಡಿದೆ.
ಇದರ ಜೊತೆಗೆ, ಕ್ಸಿನ್‌ಜಿಯಾಂಗ್ ಸರ್ಕಾರದ ಬೆಂಬಲಿತ ಖಾಸಗಿ ಕಂಪನಿಯಾದ 'ಚಾಂಗ್ಯು ಕಲ್ಚರ್'ಗೆ ಸಂಬಂಧಿಸಿದ 112 ಖಾತೆಗಳನ್ನು ಕೂಡಾ ತೆಗೆದುಹಾಕಿದ್ದೇವೆ ಎಂದು ಈ ರೀತಿಯಾಗಿ ಮಾಹಿತಿ ಬಿಡುಗಡೆ ಮಾಡಿದ ಮೊದಲ ಮೈಕ್ರೋ ಬ್ಲಾಗಿಂಗ್ ತಾಣ ಟ್ವಿಟರ್ ಆಗಿದೆ ಎಂದು ಉಲ್ಲೇಖಿಸಿದೆ.
ಪೀಪಲ್ಸ್ ರಿಪಬ್ಲಿಕ್ ಆಫ್ ಚೀನಾ (ಪಿಆರ್‌ಸಿ), ರಷ್ಯಾ, ಟಾಂಜಾನಿಯಾ, ಉಗಾಂಡಾ, ವೆನೆಜುವೆಲಾ, ಮೆಕ್ಸಿಕೋ ಮುಂತಾದ ರಾಷ್ಟ್ರಗಳಲ್ಲಿ ಟ್ವಿಟರ್ ಬ್ಯಾನ್ ಮಾಡಲಾಗಿದ್ದು, ಒಟ್ಟು 3,465 ಖಾತೆಗಳನ್ನು ನಿಷ್ಕ್ರಿಯಗೊಳಿಸಲಾಗಿದೆ.
ಇದನ್ನೂ ಓದಿ: 'ದ್ವೇಷವನ್ನು ಸಹಿಸಿಕೊಳ್ಳಬೇಡಿ': ಬೀಳ್ಕೊಡುಗೆ ಸಮಾರಂಭದಲ್ಲಿ ಜರ್ಮನ್ ಚಾನ್ಸೆಲರ್ ಮರ್ಕೆಲ್