ನವದೆಹಲಿ: ಕೇಂದ್ರದ ಪ್ರಧಾನಿ ಹುದ್ದೆ ಮೇಲೆ ಕಣ್ಣಿಟ್ಟಿರುವ ಎಐಸಿಸಿ ರಾಹುಲ್ ಗಾಂಧಿ ಹಾಗೂ ತಮ್ಮ ಪಟ್ಟವನ್ನು ಉಳಿಸಿಕೊಳ್ಳಲು ಹವಣಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿ ಚುನಾವಣೆ ಸಮಾವೇಶದಲ್ಲಿ ಆರ್ಥಿಕ ವಸ್ತುಸ್ಥಿತಿ ಬಗ್ಗೆ ಚಿಂತಿಸದೇ ಮತದಾರರ ಮುಂದೆ ಭರವಸೆಗಳ ಮಳೆಯನ್ನೇ ಸುರಿಸುತ್ತಿದ್ದಾರೆ.
ಆರ್ಬಿಐನ ಮಾಜಿ ಗವರ್ನರ್ ಬಿಮಲ್ ಜಲಾನ್, ರಾಜಕೀಯ ಸುಧಾರಣೆಗಳು ಹೊಸ ಸರ್ಕಾರ ಮೊದಲ ಆದ್ಯತೆ ಆಗಬೇಕು ಎಂದರೆ ಕೋಲಂಬಿಯಾ ವಿವಿ ಅರ್ಥಶಾಸ್ತ್ರಜ್ಞ/ ನೀತಿ ಆಯೋಗದ ಮಾಜಿ ಉಪಾಧ್ಯಕ್ಷ ಅರವಿಂದ್ ಪನಾಗರಿಯಾ; ಭಾರತ ಎರಡಂಕಿಯ ಆರ್ಥಿಕ ಬೆಳವಣಿಗೆಯ ದರ ಬಯಸಿದರೆ ಸುಧಾರಣೆಗೆ ಒಂದು ಗಂಟೆ ಬೇಕಾಗುತ್ತದೆ ಎಂದಿದ್ದಾರೆ.
ನೂತನ ಸರ್ಕಾರ ಅಗಾಧವಾದ ರಾಜಕೀಯ ಅಧಿಕಾರ ಮತ್ತು ಘೋಷಿತ ಯೋಜನೆಗಳಿಗೆ ಬದ್ಧವಾಗಿ ಹಾಗೂ ಜವಾಬ್ದಾರಿಯುತ್ತವಾಗಿ ನಡೆದುಕೊಳ್ಳುವಂತಹ ಸಚಿವ ಸಂಪುಟ ಪಡೆಯ ಅಗತ್ಯವಿದೆ. ಸಾಮೂಹಿಕ ಮತ್ತು ಜವಾಬ್ದಾರಿಯುತ ಕ್ಯಾಬಿನೆಟ್ ಅಧಿಕಾರಕ್ಕೆ ಬರಬೇಕು ಎಂದು ಜಲನ್ ಅಭಿಪ್ರಾಯಪಟ್ಟಿದ್ದಾರೆ.
ಜಾರಿಗೆ ತರಲು ಇಚ್ಛಿಸುವ ಯೋಜನಾ ಮತ್ತು ನೀತಿಗಳ ಅನುಷ್ಠಾನದಲ್ಲಿ ಸಚಿವರು, ಅಧಿಕಾರಿಗಳು ಹಾಗೂ ನಾಗರಿಕರು ಜೊತೆಗೂಡಿ ಸ್ವಾಯತ್ತ ಸಂಸ್ಥೆಗಳನ್ನು ಪ್ರತ್ಯೇಕವಾಗಿ ಇಡಬೇಕು. ಈ ಬಗ್ಗೆ ನೂತನ ಸರ್ಕಾರ ತನ್ನ ಖಚಿತತೆ ಸ್ಪಷ್ಟಪಡಿಸಬೇಕು. ಆರ್ಥಿಕತೆಯಲ್ಲಿ ಸರ್ಕಾರದ ರಾಜಕೀಯ ಪಾತ್ರವೇನು? ಎಂಬುದು ಅರಿತಿರುವುದು ಅಗತ್ಯವಿದೆ ಎಂದರು.
ಆರ್ಥಿಕ ಸುಧಾರಣೆಯತ್ತ ಹೆಚ್ಚಿನ ಗಮನ ಹರಿಸಬೇಕು. ವ್ಯಾಪಾರದ ಉದಾರೀಕರಣ, ಅಗ್ಗದ ಭೂಸ್ವಾಧೀನ, ಬ್ಯಾಂಕ್ಗಳ ಖಾಸಗೀಕರಣ, ಉತ್ತನ ಶಿಕ್ಷಣದ ಸುಧಾರಣೆಯತ್ತ ದೃಷ್ಟಿ ಹರಿಸಬೇಕು ಎಂದು ನೀತಿ ಆಯೋಗದ ಮಾಜಿ ಉಪಾಧ್ಯಕ್ಷ ಅರವಿಂದ್ ಪನಾಗರಿಯಾ ಸಲಹೆ ನೀಡಿದ್ದಾರೆ.