ಹೈದರಾಬಾದ್ : ಭಾರತದ ಸಾರ್ವಭೌಮತೆ, ಸುರಕ್ಷತೆ ಹಾಗೂ ಐಕ್ಯತೆಗೆ ಧಕ್ಕೆ ಉಂಟು ಮಾಡುತ್ತಿರುವ ಆರೋಪದ ಮೇಲೆ ಚೀನಾ ನಿಯಂತ್ರಿತ ಟಿಕ್‌ಟಾಕ್, ಶೇರ್ ಇಟ್ ಸೇರಿದಂತೆ 59 ಆ್ಯಪ್ಗಳನ್ನು ಭಾರತ ಸರ್ಕಾರ ಸೋಮವಾರ ಬ್ಯಾನ್ ಮಾಡಿ ಆದೇಶ ಹೊರಡಿಸಿದೆ. ಗಾಲ್ವಾನ್ ವ್ಯಾಲಿಯಲ್ಲಿ ಚೀನಾದೊಂದಿಗಿನ ಸಂಘರ್ಷದಲ್ಲಿ 20 ಭಾರತೀಯ ಯೋಧರು ಹುತಾತ್ಮರಾದ ನಂತರ ದೇಶದಲ್ಲಿ ಚೀನಾ ಹಾಗೂ ಚೀನಾ ವಸ್ತುಗಳ ವಿರುದ್ಧ ದಿನೇದಿನೆ ಆಕ್ರೋಶ ಹೆಚ್ಚಾಗುತ್ತಿದೆ.
ಇದೇ ಹಿನ್ನೆಲೆ ಮೊಬೈಲ್ನಲ್ಲಿರುವ ಚೀನಾ ಆ್ಯಪ್ಗಳನ್ನು ಸಹ ಅನ್ ಇನ್‌ಸ್ಟಾಲ್ ಮಾಡುವ ಅಭಿಯಾನ ಜೋರಾಗಿ ನಡೆಯುತ್ತಿದೆ. ಈ ಚೀನಾ ಆ್ಯಪ್ಗಳಿಲ್ಲದಿದ್ದರೆ ಮುಂದೇನು ಎಂದು ಚಿಂತಿಸಬೇಕಿಲ್ಲ. ಅವಕ್ಕೂ ಚೆನ್ನಾಗಿರುವ ಇತರ ಹಲವಾರು ಆ್ಯಪ್ಗಳು ಈಗಾಗಲೇ ಲಭ್ಯವಿವೆ.
ಯಾವ ಉದ್ದೇಶಕ್ಕೆ ಯಾವ ಆ್ಯಪ್ಗಳ ಬಳಕೆ, ಇಲ್ಲಿದೆ ಮಾಹಿತಿ :
ಮೊಬೈಲ್ ಫೋನ್ ಸುರಕ್ಷತೆ ಹಾಗೂ ಆ್ಯಪ್ ಲಾಕ್ ಮಾಡಲು
ಮೊಬೈಲ್ನಲ್ಲಿರುವ ಫೋಟೋ, ವಿಡಿಯೋಗಳು ಇತರರಿಗೆ ಕಾಣದಂತೆ ಹೈಡ್ ಮಾಡಲು ಚೀನಾದ ಆ್ಯಪ್‌ಲಾಕ್, ವಾಲ್ಟ್ ಹೈಡ್ ಮುಂತಾದ ಆ್ಯಪ್ಗಳನ್ನು ಬಳಸಲಾಗುತ್ತಿದೆ. ಇವುಗಳ ಬದಲಿಗೆ ಲಾಕ್ ಆ್ಯಪ್-ಸ್ಮಾರ್ಟ್ ಆ್ಯಪ್ ಲಾಕರ್ (Lock App-Smart App Locker), ಲಾಕ್ ಆ್ಯಪ್-ಫಿಂಗರ್ ಪ್ರಿಂಟ್ (Lock App - Fingerprint), ಕೀಪ್ ಸೇಫ್ (KeepSafe), ನಾರ್ಟನ್ ಆ್ಯಪ್ ಲಾಕ್ (Norton App Lock), ಲಾಕ್ ಮೈ ಪಿಕ್ಸ್ ಸೀಕ್ರೆಟ್ ಫೋಟೊ ವಾಲ್ಟ್ (LockMyPix Secret Photo Vault) ಮುಂತಾದುವುಗಳನ್ನು ಬಳಸಬಹುದು.
ಬ್ರೌಸಿಂಗ್ ಸುರಕ್ಷತೆಗೆ
ಒಪೆರಾ ಮಿನಿ (Opera Mini), ಗೂಗಲ್ ಕ್ರೋಮ್ (Google Chrome), ಫೈರ್ ಫಾಕ್ಸ್ (Firefox Browser), ಜಿಯೊ ಬ್ರೌಸರ್ (JioBrowser) ಗಳು ಅತ್ಯಂತ ಕಾರ್ಯಕ್ಷಮತೆ ಹಾಗೂ ಸುರಕ್ಷತೆಯನ್ನು ಹೊಂದಿವೆ. ಚೀನಾದ ಯುಸಿ ಬ್ರೌಸರ್ (UC Browser) ಅವಲಂಬನೆ ಬೇಕಿಲ್ಲ.
ಸ್ಕ್ಯಾನಿಂಗ್ ಆ್ಯಪ್ಗಳು
ಅಡೋಬ್ ಸ್ಕ್ಯಾನ್ (Adobe Scan), ಮೈಕ್ರೊಸಾಫ್ಟ್ ಆಫೀಸ್ ಲೆನ್ಸ್ (Microsoft Office Lens), ಗೂಗಲ್ ಫೋಟೊಸ್ಕ್ಯಾನ್ (PhotoScan by Google), ಡಾಕ್ ಸ್ಕ್ಯಾನರ್- ಪಿಡಿಎಫ್ ಕ್ರಿಯೇಟರ್ (Dock Scanner -pdf Creator) ಗಳು ಉತ್ತಮ ಸ್ಕ್ಯಾನಿಂಗ್ ಆ್ಯಪ್ಗಳಾಗಿವೆ. ಇಷ್ಟು ದಿನ ನೀವು ಬಳಸುತ್ತಿದ್ದ ಕ್ಯಾಮ್ ಸ್ಕ್ಯಾನರ್ (CamScanner) ಚೀನಾದ ಶಾಂಘಾಯ್ ಮೂಲದ INTSIG ಕಂಪನಿಗೆ ಸೇರಿದೆ.
ಎಡಿಟಿಂಗ್ ಆ್ಯಪ್ಗಳು
ಚೀನಾದ ವಿವಾ ವಿಡಿಯೋ (Viva Video- QU Video Inc), ವಿವಾ ಕಟ್ (VivaCut), ಫಿಲ್ಮೊರಾ ಗೊ (FilMoraGo) ಇವುಗಳ ಬದಲು ಕೈನ್ ಮಾಸ್ಟರ್ (KineMaster), ಅಡೋಬ್ ಪ್ರಿಮೀಯರ್ ಕ್ಲಿಪ್ (Adobe Premiere Clip), ಮ್ಯಾಜಿಸ್ಟೊ ಆ್ಯಪ್ಸ್ (Magisto Apps) ಮುಂತಾದುವುಗಳನ್ನು ಬಳಸಬಹುದು.
ಕಾನ್ಫರೆನ್ಸಿಂಗ್ ಆ್ಯಪ್ಗಳು
ವಿಡಿಯೋ ಕಾನ್ಫರೆನ್ಸ್ಗಾಗಿ ಝೂಮ್ ಆ್ಯಪ್ ಬದಲಿಗೆ ಈಗ ಸಾಕಷ್ಟು ಪರ್ಯಾಯಗಳು ಬಂದಿವೆ. ಗೂಗಲ್ ಮೀಟ್ (Google Meet), ಸ್ಕೈಪ್ (Skype), ಮೈಕ್ರೊಸಾಫ್ಟ್ ಟೀಮ್ಸ್ (Microsoft Teams), ಗೂಗಲ್ ಡ್ಯೂಯೊ (Google Duo) ಮತ್ತು ವಾಟ್ಸಾಪ್ ಕಾಲ್ (WhatsApp call) ಗಳು ಕಾನ್ಫರೆನ್ಸಿಂಗ್ಗೆ ಸೂಕ್ತವಾಗಿವೆ. ಜೊತೆಗೆ ಸೇ ನಮಸ್ತೆ (SAY NAMASTE) ಆ್ಯಪ್ ಅನ್ನೂ ಟ್ರೈ ಮಾಡಲು ಮರೆಯಬೇಡಿ.
ವಿಡಿಯೋ ತಯಾರಿಸಿ ಶೇರ್ ಮಾಡುವ ಆ್ಯಪ್ಗಳು
ಚಿಂಗಾರಿ (Chingari), ಶೇರ್ ಚಾಟ್ (ShareChat) ಇವು ಭಾರತ ಮೂಲದ ಸಣ್ಣ ವಿಡಿಯೋ ಶೇರಿಂಗ್ ಆ್ಯಪ್ಗಳಾಗಿದ್ದು, ಚೀನಾದ ಟಿಕ್ ಟಾಕ್ (TikTok), ವಿಗೊ ವಿಡಿಯೋ (Vigo Video), ಲೈಕೀ (Likee) ಮತ್ತು ಹಲೋ (Hello) ಆ್ಯಪ್ಗಳಿಗೆ ಪರ್ಯಾಯವಾಗಿವೆ.