ಹೈದರಾಬಾದ್: ನಿಮ್ಮ ಬಳಿ ಬೈಕ್ ಅಥವಾ ಇನ್ಯಾವುದೇ ದ್ವಿಚಕ್ರವಾಹನವಿದೆಯೇ? ಅತ್ಯುತ್ತಮ ಮೈಲೇಜ್, ಕಡಿಮೆ ನಿರ್ವಹಣಾ ವೆಚ್ಚವಿರುವ ಬೈಕ್ಗಳು ನಿಜಕ್ಕೂ ತುಂಬಾ ಉಪಯೋಗಕಾರಿ. ಅವುಗಳನ್ನು ಕಡಿಮೆ ಬಜೆಟ್ನಲ್ಲಿಯೂ ಕೊಳ್ಳಬಹುದು. ಬೈಕ್ಗಳನ್ನು ಕೊಳ್ಳಲು ಅತ್ಯಂತ ಕಡಿಮೆ ಬಡ್ಡಿದರದಲ್ಲಿ ಸಾಲ ಸೌಲಭ್ಯ ಕೂಡಾ ದೊರೆಯುತ್ತದೆ.
ಬೈಕ್ ಕೊಂಡ ಮೇಲೆ ಅದರ ನಿರ್ವಹಣೆ ಕೂಡಾ ಮಾಡಬೇಕಾಗುತ್ತದೆ. ಅದು ಸುಲಭವಾದರೂ ಕೆಲವೊಂದು ಬಾರಿ ನಡೆಯುವ ಅನಿರೀಕ್ಷಿತ ಘಟನೆಗಳು ದುಬಾರಿಯಾಗುತ್ತವೆ. ಆದ್ದರಿಂದ ದ್ವಿಚಕ್ರವಾಹನಕ್ಕೆ ವಿಮೆ ಮಾಡಿಸಿಕೊಳ್ಳುವುದು ಅತ್ಯಂತ ಮುಖ್ಯ ಎಂದು ಪರಿಗಣಿಸಲಾಗುತ್ತದೆ.
ಹೌದು, ದ್ವಿಚಕ್ರವಾಹನಕ್ಕೆ ವಿಮೆ ಅತ್ಯಂತ ಮುಖ್ಯ ಮತ್ತು ಕಡ್ಡಾಯ. ದ್ವಿಚಕ್ರ ವಾಹನ ಕಳ್ಳತನ, ಅಪಘಾತಗಳು ಮತ್ತು ನೈಸರ್ಗಿಕ ವಿಕೋಪಗಳಂತಹ ಅನಿರೀಕ್ಷಿತ ಘಟನೆಗಳಿಂದ ಉಂಟಾಗುವ ದುಷ್ಪರಿಣಾಮಗಳಿಂದ ವಿಮೆ ನಿಮ್ಮನ್ನು ರಕ್ಷಿಸುತ್ತದೆ. ಹೀಗಾಗಿ ವಿಮೆ ತೆಗೆದುಕೊಳ್ಳಬೇಕಾಗುತ್ತದೆ. ಆದರೆ ವಿಮೆಯನ್ನು ತೆಗೆದುಕೊಳ್ಳುವಾಗ ಕೆಲವೊಂದು ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳಬೇಕಾಗುತ್ತದೆ.
ಪ್ರೀಮಿಯಂ ನಿರ್ಧಾರ ಹೇಗೆ: ಬೈಕ್ನ ವೈಶಿಷ್ಟ್ಯಗಳು, ಕಂಪನಿ ಮತ್ತು ಯಾವ ವರ್ಷದ ಮಾಡೆಲ್ ಎಂಬುದನ್ನು ಆಧರಿಸಿ, ಬೈಕ್ನ ಬೆಲೆ ಬದಲಾಗುತ್ತದೆ. ಹಾಗೆಯೇ ಆ ಬೈಕ್ನ ಬೆಲೆಯನ್ನು ಆಧರಿಸಿ, ವಿಮೆ ಇರುತ್ತದೆ. ಅಂದರೆ ವಿಮೆಯ ಪ್ರೀಮಿಯಂ ದ್ವಿಚಕ್ರ ವಾಹನದ ಬೆಲೆಗೆ ನೇರವಾದ ಸಂಬಂಧ ಹೊಂದಿದೆ.
ಉದಾಹರಣೆಗೆ 75 ಸಾವಿರ ರೂಪಾಯಿ ಬೆಲೆಯ ಬೈಕ್ನ ಪ್ರೀಮಿಯಂ ಒಂದು ಲಕ್ಷ ರೂಪಾಯಿಗಿಂತ ಕಡಿಮೆ ಇರುತ್ತದೆ. ಅಷ್ಟೇ ಅಲ್ಲದೇ ಬೈಕ್ನ ಸಿಸಿ ಆಧಾರದ ಮೇಲೆಯೂ ಪ್ರೀಮಿಯಂ ಇರುತ್ತದೆ. 100ಸಿಸಿ ಮತ್ತು 150ಸಿಸಿ ಮುಂತಾದ ಬೈಕ್ಗಳ ಪ್ರೀಮಿಯಂ ವಿಭಿನ್ನವಾಗಿರುತ್ತದೆ. ವಿಮಾ ನಿಯಂತ್ರಣ ಪ್ರಾಧಿಕಾರವು ಬೈಕ್ಗಳ ಸಿಸಿ ಆಧರಿಸಿ ದರಗಳನ್ನು ನಿಗದಿಪಡಿಸುತ್ತದೆ. ಈಗ ಎಲೆಕ್ಟ್ರಿಕ್ ಬೈಕ್ಗಳೂ ಬಂದಿದ್ದು, ಕಿಲೋವ್ಯಾಟ್ ಆಧಾರದ ಮೇಲೆ ವಿಮೆಯ ಪ್ರೀಮಿಯಂ ನಿರ್ಧಾರ ಮಾಡಲಾಗುತ್ತಿದೆ.
ಬೈಕ್ಗೆ ಯಾವ ವಿಮೆ ಬೇಕು: ದ್ವಿಚಕ್ರ ವಾಹನ ವಿಮೆಯಲ್ಲಿ ಎರಡು ವಿಧಗಳಿವೆ. ಒಂದು ಥರ್ಡ್ ಪಾರ್ಟಿ (ಮೂರನೇ ಸಂಸ್ಥೆ) ವಿಮೆ ಮತ್ತು ಇನ್ನೊಂದು ಸಮಗ್ರ ವಿಮೆ. ಅಂದಹಾಗೆ ರಸ್ತೆಗೆ ಬರುವ ಪ್ರತಿಯೊಂದು ಬೈಕ್ ಮೂರನೇ ಸಂಸ್ಥೆಯ ಅಂದರೆ ಯಾವುದಾದರೂ ವಿಮಾ ಕಂಪನಿಯೊಂದರ ವಿಮೆ ಹೊಂದಿರಲೇಬೇಕು. ದ್ವಿಚಕ್ರ ವಾಹನದ ಕಳ್ಳತನ, ಅಪಘಾತ ಸೇರಿದಂತೆ ಹಲವು ವೆಚ್ಚವನ್ನು ಮೂರನೇ ಸಂಸ್ಥೆಗಳೇ ಹಣ ಭರಿಸುತ್ತವೆ.
ಆದರೂ ದ್ವಿಚಕ್ರವಾಹನ ಹೊಂದಿರುವ ವ್ಯಕ್ತಿಗಳು ಸಮಗ್ರ ವಿಮೆ ಹೊಂದಿರುವುದು ಅತ್ಯಂತ ಅವಶ್ಯಕ. ಏಕೆಂದರೆ, ಭೂಕಂಪಗಳು, ಪ್ರವಾಹಗಳು ಮತ್ತು ಇತರ ನೈಸರ್ಗಿಕ ವಿಕೋಪಗಳು ಸಂಭವಿಸಿದ ವೇಳೆಯಲ್ಲಿ ದ್ವಿಚಕ್ರವಾಹನಕ್ಕೆ ಆಗಿರುವ ಹಾನಿಯನ್ನು ಸಮಗ್ರ ವಿಮೆ ಭರಿಸುತ್ತದೆ. ವಿಮೆಯ ಬೆಲೆ ಹೆಚ್ಚಾಗಿದ್ದರೂ, ಸಮಗ್ರ ವಿಮೆ ತೆಗೆದುಕೊಳ್ಳುವುದು ಅತ್ಯಂತ ಮುಖ್ಯವಾಗುತ್ತದೆ.
ವಿಮೆಯ ಘೋಷಿತ ಮೌಲ್ಯ: ದ್ವಿಚಕ್ರ ವಾಹನಗಳ ವಿಮೆ ವಿಚಾರದಲ್ಲಿ ಇದು ಅತ್ಯಂತ ಮುಖ್ಯ. ಇದನ್ನು ಇನ್ಶೂರೆನ್ಸ್ ಡಿಕ್ಲೇರ್ಡ್ ವ್ಯಾಲ್ಯೂ ಎಂದು ಕರೆಯಲಾಗುತ್ತದೆ. ನಿಮ್ಮ ವಾಹನ ಸಂಪೂರ್ಣವಾಗಿ ಹಾನಿಗೊಳಗಾಗಿದ್ದರೆ, ಬೈಕ್ನ ಆಗಿನ ಬೆಲೆಯನ್ನು ಲೆಕ್ಕ ಹಾಕಿ, ನಿಮ್ಮ ಪ್ರೀಮಿಯಂ ವಿಮೆಯ ಮೌಲ್ಯ ಹೊಂದಿಸಿ, ನಿಮಗೆ ಹಣ ನೀಡಲಾಗುತ್ತದೆ.
ಜಾಹೀರಾತು: ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ
ನೊ ಕ್ಲೈಮ್ ಬೋನಸ್: ನಿಮಗೆ ವಿಮಾ ಕಂಪನಿಯಿಂದ ನೋ ಕ್ಲೈಮ್ ಬೋನಸ್ ನೀಡಲಾಗುತ್ತದೆ. ವಿವಿಧ ಸ್ಲ್ಯಾಬ್ಗಳಲ್ಲಿರುವ ಇದರಲ್ಲಿ ರಿಯಾಯಿತಿಯನ್ನೂ ನೀಡಲಾಗುತ್ತದೆ. ದ್ವಿಚಕ್ರವಾಹದ ವಿಮಾ ಪ್ರೀಮಿಯಂ ಅನ್ನು ಇದು ಕಡಿಮೆ ಮಾಡುತ್ತದೆ.
ಆ್ಯಡ್ ಆನ್ ಕವರ್ಸ್: ನಿಮ್ಮ ದ್ವಿಚಕ್ರವಾಹನಕ್ಕೆ ಆ್ಯಡ್ - ಆನ್ ಕವರ್‌ಗಳು ಹೆಚ್ಚುವರಿಯಾಗಿ ರಕ್ಷಣೆ ಒದಗಿಸುತ್ತವೆ. ನೆರವು, ವೈದ್ಯಕೀಯ ಸಹಾಯ ಮತ್ತು ಎಂಜಿನ್ ರಕ್ಷಣೆಗೆ ಆ್ಯಡ್ ಆನ್ ಕವರ್ಗಳಿದ್ದು ಸೂಕ್ತವಾದ ಆ್ಯಡ್ ಆನ್ ಅನ್ನು ಆಯ್ಕೆ ಮಾಡಿದರೆ, ವಾಹನ ಮತ್ತಷ್ಟು ಸುರಕ್ಷಿತವಾಗುತ್ತದೆ.
ನೀವು ಇವೆಲ್ಲವನ್ನೂ ಗಮನದಲ್ಲಿಟ್ಟುಕೊಂಡರೆ ವಿಮಾ ನವೀಕರಣದ ಸಮಯದಲ್ಲಿ ಅಥವಾ ಹೊಸ ವಿಮಾ ಪಾಲಿಸಿ ತೆಗೆದುಕೊಳ್ಳುವಾಗ ಪ್ರೀಮಿಯಂ ಲೆಕ್ಕಾಚಾರಗಳನ್ನು ತಿಳಿದುಕೊಳ್ಳುವುದು ಸುಲಭವಾಗುತ್ತದೆ.
ಇದನ್ನೂ ಓದಿ: ನಿಮ್ಮ ಕಾರಿಗೆ ಉತ್ತಮ ವಿಮಾ ಪಾಲಿಸಿ ಆಯ್ಕೆ ಬಗೆ ಹೇಗೆ? ಇಲ್ಲಿದೆ ಉತ್ತರ..