ETV Bharat / business

2021-22ರ ಕೇಂದ್ರ ಬಜೆಟ್ : ವಾಯುಯಾನ ಉದ್ಯಮಕ್ಕೆ ತೆರಿಗೆ ಕಡಿತದ ಸುಳಿವು

ಸಾಂಕ್ರಾಮಿಕವು ವಾಯುಯಾನ ಮತ್ತು ಆ ಸಂಬಂಧಿತ ಕ್ಷೇತ್ರಗಳ ಮೇಲೆ ಪ್ರತಿಕೂಲ ಪರಿಣಾಮ ಬೀರಿದ್ದರೂ ನಾವು ಚೇತರಿಕೆಯತ್ತ ಹೆಜ್ಜೆ ಹಾಕುವಲ್ಲಿ ಯಶಸ್ವಿಯಾಗಿದ್ದೇವೆ. ವಾಯುಯಾನಕ್ಕೆ ನೀಡಿದ ನೆರವಿನಿಂದಾಗಿ ದೇಶೀಯ ವಲಯ ಶೇ. 60ರಷ್ಟು ಸಾಮರ್ಥ್ಯ ಮರಳಿ ಪಡೆದಿದೆ..

Usha Padi
ಉಷಾ ಪಾಧಿ
author img

By

Published : Jan 9, 2021, 7:04 PM IST

ನವದೆಹಲಿ : ಮುಂದಿನ 2021ರ ಬಜೆಟ್​ನಲ್ಲಿ ವಾಯುಯಾನ ಕ್ಷೇತ್ರಕ್ಕೆ ಸಂಬಂಧಿತ ವಿವಿಧ ತೆರಿಗೆಗಳನ್ನು ತರ್ಕಬದ್ಧಗೊಳಿಸುವ ಬಗ್ಗೆ ಸರ್ಕಾರ ಸುಳಿವು ನೀಡಿದೆ. ಇದು ಕೋವಿಡ್ -19 ಪ್ರೇರಿತ ಆರ್ಥಿಕ ಸಂಕಷ್ಟಕ್ಕೊಳಗಾದ ಉದ್ಯಮದ ಚೇತರಿಕೆಗೆ ನೆರವಾಗಲಿದೆ.

ನಾವು ವಿವಿಧ ತೆರಿಗೆಗಳನ್ನು ತರ್ಕಬದ್ಧಗೊಳಿಸುವ ಮೂಲಕ ಕ್ಷೇತ್ರಕ್ಕೆ ಸಹಾಯ ಮಾಡುವ ದೀರ್ಘಕಾಲೀನ ಯೋಜನೆಯಲ್ಲಿ ಕೆಲಸ ಮಾಡುತ್ತಿದ್ದೇವೆ. ವಾಯುಯಾನ ಕ್ಷೇತ್ರವನ್ನು ಸುಸ್ಥಿರಗೊಳಿಸಿ ಈ ವ್ಯವಸ್ಥೆ ಚುರುಕಾಗಿ ಮತ್ತು ಹೆಚ್ಚು ಪರಿಣಾಮಕಾರಿಯಾಗಿ ಮಾಡಲು ನಾವು ಎದುರು ನೋಡುತ್ತಿದ್ದೇವೆ ಎಂದು ನಾಗರಿಕ ವಿಮಾನಯಾನ ಸಚಿವಾಲಯದ ಜಂಟಿ ಕಾರ್ಯದರ್ಶಿ ಉಷಾ ಪಾಧಿ ಹೇಳಿದರು.

"ವಾಯುಯಾನ, ಪ್ರವಾಸೋದ್ಯಮ ಮತ್ತು ಆತಿಥ್ಯ ಸಂಪರ್ಕ" ಕುರಿತು ವೆಬ್‌ನಾರ್ ಉದ್ದೇಶಿಸಿ ಮಾತನಾಡಿದ ಅವರು, ಯಾವುದೇ ಸವಾಲುಗಳಿಗೆ ಈ ವಲಯವು ಸಜ್ಜಾಗಬೇಕಿದೆ. ದೀರ್ಘಾವಧಿಯ ಉತ್ತಮ ನೀತಿಗಳು ಭವಿಷ್ಯದಲ್ಲಿ ಇಂತಹ ಬಿಕ್ಕಟ್ಟಿನಿಂದ ಹೊರ ಬರಲು ನೆರವಾಗುತ್ತವೆ ಎಂದರು.

ಇದನ್ನೂ ಓದಿ: ಮೂಲ ಸೌಕರ್ಯ ವೆಚ್ಚ ಹೆಚ್ಚಿಸಿ ಖಾಸಗೀಕರಣ ವಿಸ್ತರಿಸುವಂತೆ ಪ್ರಧಾನಿ ಮೋದಿಗೆ ವಿತ್ತ ತಜ್ಞರು ಸಲಹೆ

ಸಾಂಕ್ರಾಮಿಕವು ವಾಯುಯಾನ ಮತ್ತು ಆ ಸಂಬಂಧಿತ ಕ್ಷೇತ್ರಗಳ ಮೇಲೆ ಪ್ರತಿಕೂಲ ಪರಿಣಾಮ ಬೀರಿದ್ದರೂ ನಾವು ಚೇತರಿಕೆಯತ್ತ ಹೆಜ್ಜೆ ಹಾಕುವಲ್ಲಿ ಯಶಸ್ವಿಯಾಗಿದ್ದೇವೆ. ವಾಯುಯಾನಕ್ಕೆ ನೀಡಿದ ನೆರವಿನಿಂದಾಗಿ ದೇಶೀಯ ವಲಯ ಶೇ. 60ರಷ್ಟು ಸಾಮರ್ಥ್ಯ ಮರಳಿ ಪಡೆದಿದೆ ಎಂದು ಹೇಳಿದರು.

ಈ ಬಿಕ್ಕಟ್ಟು ವಾಯುಯಾನ ಕ್ಷೇತ್ರವನ್ನು ಡಿಜಿಟಲ್ ರೂಪಾಂತರಕ್ಕೆ ಪರಿವರ್ತಿಸಿದೆ. ಈಗ ನಮ್ಮಲ್ಲಿ ಶೇ.00ರಷ್ಟು ವೆಬ್ ಚೆಕ್-ಇನ್‌ಗಳಿವೆ. ಪ್ರಯಾಣಿಕರಿಗೆ ಸ್ಪರ್ಶವಿಲ್ಲದ ಅನುಭವ ನೀಡಲು ವಿವಿಧ ತಂತ್ರಜ್ಞಾನ ಚಾಲಿತ ಪರಿಹಾರಗಳನ್ನು ಅಳವಡಿಸಲಾಗಿದೆ ಎಂದು ತಿಳಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.