ಮುಂಬೈ: ಈ ಹಣಕಾಸು ವರ್ಷದ ಮೂರನೇ ತ್ರೈಮಾಸಿಕದಲ್ಲಿ ಆರೋಗ್ಯಕರ ಬೆಳವಣಿಗೆಯ ನಿರೀಕ್ಷೆಗಳು ಹೆಚ್ಚಾದ ಹಿನ್ನೆಲೆಯಲ್ಲಿ ಬಾಂಬೆ ಷೇರು ಮಾರುಕಟ್ಟೆಯ ಸೆನ್ಸೆಕ್ಸ್ (BSE Sensex) ಮತ್ತು ರಾಷ್ಟ್ರೀಯ ಷೇರು ಮಾರುಕಟ್ಟೆಯ ನಿಫ್ಟಿ-50 (NSE-Nifty50 ) ಸೂಚ್ಯಂಕಗಳಲ್ಲಿ ಏರಿಕೆ ಕಂಡಿದೆ.
ಕೊರೊನಾ ವೈರಸ್ ನಿರ್ಬಂಧದಿಂದಾಗಿ ಚೀನಾದ ಆರ್ಥಿಕತೆಯ ಮೇಲೆ ಸ್ವಲ್ಪ ಮಟ್ಟದ ಪರಿಣಾಮಗಳು ಉಂಟಾದ ಕಾರಣದಿಂದಾಗಿ ಏಷ್ಯಾದ ಷೇರು ಮಾರುಕಟ್ಟೆಗಳಲ್ಲಿ ಮಿಶ್ರ ಬೆಳವಣಿಗೆಗಳು ಕಂಡು ಬಂದಿವೆ.
ಅದೇ ರೀತಿಯಲ್ಲಿ ಅಮೆರಿಕದಲ್ಲಿ ಬಡ್ಡಿದರಗಳ ಹೆಚ್ಚಳದ ಕಾರಣದಿಂದಾಗಿ ಮತ್ತು ಚೀನಾದ ಷೇರುಗಳ ನಿಧಾನಗತಿಯ ಆರ್ಥಿಕ ಚೇತರಿಕೆಯ ಕಾರಣದಿಂದಾಗಿ ಯೂರೋಪಿಯನ್ ಷೇರುಮಾರುಕಟ್ಟೆಗಳಲ್ಲಿ ಹೆಚ್ಚಿನ ಬೆಳವಣಿಗೆ ಉಂಟಾಗಿದೆ.
ಇನ್ನು ದೇಶಿಯವಾಗಿ ನೋಡುವುದಾದರೆ ರಿಯಲ್ ಎಸ್ಟೇಟ್, ಇಂಧನ ಮತ್ತು ಆಟೋಮೊಬೈಲ್ ವಲಯಗಳ ಸೂಚ್ಯಂಕಗಳು ಹೆಚ್ಚು ಏರಿಕೆಯಾಗಿವೆ. ಆರೋಗ್ಯ ಮತ್ತು ಬ್ಯಾಂಕ್ ವಲಯದ ಸೂಚ್ಯಂಕಗಳು ಹೆಚ್ಚು ಕುಸಿತ ಕಂಡಿವೆ.
ಇದರ ಪರಿಣಾಮವಾಗಿ, ಸೆನ್ಸೆಕ್ಸ್ ಮತ್ತು ನಿಫ್ಟಿ ಕ್ರಮವಾಗಿ 61,308 ಪಾಯಿಂಟ್‌ಗಳು ಮತ್ತು 18,308 ಪಾಯಿಂಟ್‌ಗೆ ಏರಿಕೆ ಕಂಡಿವೆ. ಈ ಮೊದಲು ಇದ್ದ ಸೂಚ್ಯಂಕಗಳಿಗಿಂತ ಸೆನ್ಸೆಕ್ಸ್ನಲ್ಲಿ 0.14 ಮತ್ತು ನಿಫ್ಟಿಯಲ್ಲಿ ಶೇಕಡ 0.29ರಷ್ಟು ಏರಿಕೆ ಕಂಡಿದೆ.
ಒಂದು ದಿನದ ನಂತರ ನಿಫ್ಟಿ ಏರಿಕೆಯಾಗಿದೆ ಮತ್ತು ಏರಿಕೆ ಅನುಪಾತವೂ ಆರೋಗ್ಯಕರವಾಗಿ ಉಳಿದಿದೆ ಎಂದು ಎಚ್‌ಡಿಎಫ್‌ಸಿ ಸೆಕ್ಯುರಿಟೀಸ್‌ನ ರಿಟೇಲ್ ರಿಸರ್ಚ್ ಮುಖ್ಯಸ್ಥರಾದ ದೀಪಕ್ ಜಸಾನಿ ಹೇಳಿದ್ದಾರೆ.
ಇದನ್ನೂ ಓದಿ: ವಿದ್ಯುತ್ಚಾಲಿತ ವಾಹನಗಳಿಗೆ ಪರಿಷ್ಕೃತ ಮಾರ್ಗಸೂಚಿ: ಮನೆಗಳಲ್ಲೇ ಚಾರ್ಚಿಂಗ್ಗೆ ಅವಕಾಶ