ETV Bharat / business

ಕೋವಿಡ್​ ಅವಧಿಯಲ್ಲಿ ರಾಜ್ಯಗಳ ಬೊಕ್ಕಸಕ್ಕಾದ ನಷ್ಟವೆಷ್ಟು ಗೊತ್ತೆ? SBI ಪ್ರಕಟಿಸಿತು ಅಚ್ಚರಿ ವರದಿ! - ರಾಜ್ಯ ವಿಪತ್ತು ಪ್ರತಿಕ್ರಿಯೆ ನಿಧಿ

ಕೇಂದ್ರದಿಂದ 1.5 ಲಕ್ಷ ಕೋಟಿ ಆದಾಯ ನಷ್ಟವಾಗಲಿದೆ. 1.7 ಲಕ್ಷ ಕೋಟಿ ರೂ. ಹೆಚ್ಚುವರಿ ವೆಚ್ಚವನ್ನೂ ಗಣನೆಗೆ ತೆಗೆದುಕೊಂಡರೆ, ಪ್ರಮುಖ ರಾಜ್ಯಗಳಿಗೆ ಒಟ್ಟು ನಷ್ಟವು ಸುಮಾರು 6.2 ಲಕ್ಷ ಕೋಟಿ ರೂ.ಯಷ್ಟಾಗಲಿದೆ ಎಂದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಬಿಡುಗಡೆ ಮಾಡಿದ ವರದಿಯಲ್ಲಿ ಉಲ್ಲೇಖಿಸಲಾಗಿದೆ.

losses
ನಷ್ಟ
author img

By

Published : Aug 24, 2020, 8:29 PM IST

ನವದೆಹಲಿ: ಕೋವಿಡ್​-19 ಸಾಂಕ್ರಾಮಿಕ ರೋಗದಿಂದ ಉಂಟಾದ ಭಾರಿ ಆರ್ಥಿಕ ಅಡೆತಡೆಯಿಂದಾಗಿ ಪ್ರಸಕ್ತ ಹಣಕಾಸು ವರ್ಷದಲ್ಲಿ ರಾಜ್ಯಗಳು 3.1 ಲಕ್ಷ ಕೋಟಿ ರೂ. ನಷ್ಟವನ್ನು ಎದುರಿಸಬೇಕಾಗುತ್ತದೆ ಎಂದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ಸೋಮವಾರ ಬಿಡುಗಡೆ ಮಾಡಿದ ವರದಿಯಲ್ಲಿ ತಿಳಿಸಿದೆ.

ರಾಜ್ಯ ಮೌಲ್ಯವರ್ಧಿತ ತೆರಿಗೆ, ಅಬಕಾರಿ, ಅಂಚೆಚೀಟಿ ಮತ್ತು ನೋಂದಣಿ ಘಟಕಗಳ ಇಡೀ ತಿಂಗಳ ಆದಾಯದ ನಷ್ಟದ ಒಂದು ಮೂಲ ಅಂದಾಜಿಸಿದರೆ 2021ರ ಹಣಕಾಸು ವರ್ಷದ ಮೊದಲ ತ್ರೈಮಾಸಿಕ ಆದಾಯದಲ್ಲಿ ಸುಮಾರು 53,000 ಕೋಟಿ ರೂ.ಯಷ್ಟು ಇರಲಿದೆ ಎಂದು ನಿರೀಕ್ಷಿಸಿದೆ.

ಈ ಅಂದಾಜನ್ನು ಮೊದಲ ತ್ರೈಮಾಸಿಕದಲ್ಲಿನ ರಾಜ್ಯ ಸರಕು ಮತ್ತು ಸೇವೆಗಳ ತೆರಿಗೆ ಅಂದಾಜಿನೊಂದಿಗೆ ಸಂಯೋಜಿಸಿದರೆ, ಪ್ರಮುಖ ರಾಜ್ಯಗಳು ಸುಮಾರು 1.2 ಲಕ್ಷ ಕೋಟಿ ರೂ. ನಷ್ಟ ಅನುಭವಿಸುತ್ತಿವೆ ಎಂದು ತೋರಿಸುತ್ತದೆ. ಇದು ವಾರ್ಷಿಕ 3 ಲಕ್ಷ ಕೋಟಿ ರೂ.ಯಷ್ಟು ನಷ್ಟವಾಗಿದೆ.

ಕೇಂದ್ರದಿಂದ 1.5 ಲಕ್ಷ ಕೋಟಿ ಆದಾಯ ನಷ್ಟವಾಗಲಿದೆ. 1.7 ಲಕ್ಷ ಕೋಟಿ ರೂ. ಹೆಚ್ಚುವರಿ ವೆಚ್ಚವನ್ನೂ ಗಣನೆಗೆ ತೆಗೆದುಕೊಂಡರೆ, ಪ್ರಮುಖ ರಾಜ್ಯಗಳಿಗೆ ಒಟ್ಟು ನಷ್ಟವು ಸುಮಾರು 6.2 ಲಕ್ಷ ಕೋಟಿ ರೂ.ಯಷ್ಟಾಗಲಿದೆ.

ಹೆಚ್ಚಿದ ರಾಜ್ಯ ಸಾಲ ಮಿತಿ 4.28 ಲಕ್ಷ ಕೋಟಿ ರೂ. ಆಗಿದ್ದು, ಕೇಂದ್ರವು ನಿಗದಿಪಡಿಸಿದ ಷರತ್ತುಗಳಿಂದಾಗಿ ರಾಜ್ಯಗಳು ಹೆಚ್ಚುವರಿಯಾಗಿ 3.13 ಲಕ್ಷ ಕೋಟಿ ರೂ. ಸಾಲ ಪಡೆಯಬಹುದು.

ಒಟ್ಟು ರಾಜ್ಯ ದೇಶಿಯ ಉತ್ಪನ್ನದ (ಜಿಎಸ್‌ಡಿಪಿ) ಶೇ 2ರಷ್ಟು ಹೆಚ್ಚುವರಿ ಸಾಲಕ್ಕೆ ಎಲ್ಲಾ ಷರತ್ತುಗಳನ್ನು ಪೂರೈಸುವ ಸ್ಥಿತಿಯಲ್ಲಿ ಕೇವಲ ಎಂಟು ರಾಜ್ಯಗಳು ಮಾತ್ರ ಇದ್ದವು ಎಂದು ವರದಿಯಲ್ಲಿ ತಿಳಿಸಲಾಗಿದೆ.

ಮೇ ತಿಂಗಳಲ್ಲಿ ಆತ್ಮನಿರ್ಭರ ಭಾರತ ಪ್ಯಾಕೇಜಿನ ಭಾಗವಾಗಿ ಜಿಎಸ್​​ಡಿಪಿ ಮಿತಿಯ ಶೇ 3ಕ್ಕಿಂತ ಅಧಿಕ ಹೆಚ್ಚುವರಿ ಸಾಲವನ್ನು ಕೇಂದ್ರವು ಅನುಮತಿಸಿತು. ಇದು ಒನ್ ನೇಷನ್-ಒನ್ ರೇಷನ್ ಕಾರ್ಡ್‌ನ ಸುಲಭ ವ್ಯವಹಾರ, ವಿದ್ಯುತ್ ವಿತರಣೆ ಮತ್ತು ನಗರ ಸ್ಥಳೀಯ ಸಂಸ್ಥೆಯ ಆದಾಯಕ್ಕೆ ಸಂಬಂಧಿಸಿದ ಷರತ್ತುಗಳಿಗೆ ಒಳಪಟ್ಟಿದೆ.

ಮೊದಲ ತ್ರೈಮಾಸಿಕದಲ್ಲಿ ಒಟ್ಟು ಜಿಎಸ್​​ಟಿ ಸಂಗ್ರಹವು ಕಳೆದ ಹಣಕಾಸು ವರ್ಷದಲ್ಲಿ ಇದೇ ಅವಧಿಯಲ್ಲಿ ಸಂಗ್ರಹಿಸಿದ ಆದಾಯದ ಶೇ 59ರಷ್ಟಿದ್ದರೆ, ಒಟ್ಟಾರೆ ಎಸ್‌ಜಿಎಸ್‌ಟಿ ಮತ್ತು ಹಂಚಿಕೆಯಾದ ಸಮಗ್ರ ಜಿಎಸ್‌ಟಿ 64,703 ಕೋಟಿ ರೂ. ಅಥವಾ 2020ರ ಹಣಕಾಸು ವರ್ಷದ ಆದಾಯಕ್ಕಿಂತ ಶೇ 47ರಷ್ಟು ಕಡಿಮೆಯಾಗಿದೆ. ರಾಜ್ಯ ವಿಪತ್ತು ಪ್ರತಿಕ್ರಿಯೆ ನಿಧಿ (ಎಸ್‌ಡಿಆರ್‌ಎಂಎಫ್) ಮತ್ತು ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯೆ ನಿಧಿಯಿಂದ (ಎನ್‌ಡಿಆರ್‌ಎಫ್) ಒಟ್ಟು 54,000 ಕೋಟಿ ರೂ. ವರ್ಗಾಯಿಸಲಾಗಿದೆ ಎಂದು ಎಸ್​ಬಿಐ ತಿಳಿಸಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.