ಬೆಂಗಳೂರು: ಸ್ಟಾರ್ ಏರ್ ವಿಮಾನಯಾನ ಕಂಪನಿ ನಾಳೆಯಿಂದ ಹೈದರಾಬಾದ್ ಮತ್ತು ಬೆಂಗಳೂರು ನಡುವಿನ ಕಾರ್ಯಾಚರಣೆಯನ್ನು ಆರಂಭಿಸಲಿದೆ. ಈ ವಿಮಾನ ಸೇವೆಯು ಮಂಗಳವಾರ, ಗುರುವಾರ ಮತ್ತು ಶನಿವಾರ ಪ್ರಯಾಣಿಕರಿಗೆ ದೊರಕಲಿದೆ.
ಸ್ಟಾರ್ ಏರ್ ಕಂಪನಿಯ ಎಂಬ್ರಾಯಿರ್ ಜೆಟ್ ಎರಡೂ ಮಹಾನಗರಗಳ ಮಧ್ಯೆ ಕಾರ್ಯಾಚರಣೆ ನಡೆಸಲಿದ್ದು, ಹೈದರಾಬಾದ್ ಈ ವಿಮಾನಯಾನ ಕಂಪನಿಯ ತನ್ನ ಕಾರ್ಯಾಚರಣೆಯನ್ನು ಆರಂಭಿಸಿರುವ 15ನೇ ನಗರವಾಗಿದೆ.
ಇದೇ ಮೊದಲ ಬಾರಿಗೆ ವಿಮಾನಯಾನ ಕ್ಷೇತ್ರದಲ್ಲಿ ಅತ್ಯಂತ ಪ್ರಮುಖವಾದ ಸಂಸ್ಥೆಗಳೊಂದಿಗೆ ಸ್ಟಾರ್ ಏರ್ ಸ್ಪರ್ಧೆಗೆ ಇಳಿದಿದೆ. 50 ಆಸನಗಳುಳ್ಳ ಎಂಬ್ರಾಯಿರ್ ಜೆಟ್ ಆರಾಮದಾಯಕ ಪ್ರಯಾಣವನ್ನು ನೀಡಲಿದೆ. ಹೈದರಾಬಾದ್-ಬೆಂಗಳೂರು ನಡುವೆ ವಿಮಾನ ಸಂಚಾರ ಆರಂಭಿಸಿರುವುದು ನಮ್ಮ ಸಂಸ್ಥೆಗೆ ಮೈಲುಗಲ್ಲು ಎಂದು ಸ್ಟಾರ್ ಏರ್ನ ಅಧ್ಯಕ್ಷ ಸಂಜಯ್ ಗೋಡಾವತ್ ಹೇಳಿದ್ದಾರೆ.
ಇದರೊಂದಿಗೆ ಬೆಂಗಳೂರು, ಗುಜರಾತ್ನ ಜಾಮ್ನಗರ ಮತ್ತು ಹೈದರಾಬಾದ್ಗೆ ವಿಮಾನಯಾನ ಸೇವೆಯನ್ನು ಸ್ಟಾರ್ ಏರ್ ವಿಮಾನಯಾನ ಸಂಸ್ಥೆ ಪರಿಚಯಿಸುತ್ತಿದೆ.
ಇದನ್ನೂ ಓದಿ: ಅಫ್ಘಾನಿಸ್ತಾನದಿಂದ ಬಂದ 78 ಮಂದಿಯಲ್ಲಿ 16 ಮಂದಿಗೆ ಕೋವಿಡ್ ಪಾಸಿಟಿವ್