ನವದೆಹಲಿ: ಮುಂಬರುವ ದಿನಗಳಲ್ಲಿ ಬೇಡಿಕೆ ಹೆಚ್ಚಾಗುವ ಸಾಧ್ಯತೆ ಹಿನ್ನೆಲೆ ತಾಮ್ರದ ಬೆಲೆ ಮಂಗಳವಾರ ಶೇಕಡಾ 0.08ರಷ್ಟು ಹೆಚ್ಚಳ ಕಂಡಿದ್ದು, ಇದರಿಂದಾಗಿ ಒಂದು ಕೆ.ಜಿಗೆ 530.90 ರೂಪಾಯಿ ಏರಿಕೆ ಕಂಡಿದೆ.
ಅಕ್ಟೋಬರ್ ತಿಂಗಳಿನ ಬಹು ಸರಕು ವಿನಿಮಯದ ಮೇಲೆ ತಾಮ್ರಕ್ಕ ಸಂಬಂಧಿಸಿದ ಒಪ್ಪಂದಗಳಲ್ಲಿ ಹೆಚ್ಚಳವಾಗಿದ್ದು, ಸುಮಾರು 5,328 ಯುನಿಟ್ ವ್ಯವಹಾರ ನಡೆದಿದೆ. ಈ ರೀತಿಯಾಗಿ ತಾಮ್ರದ ಬೆಲೆ ಹೆಚ್ಚಳದಿಂದಾಗಿ ಹರಾಜಿನಲ್ಲಿ ಪಾಲ್ಗೊಳ್ಳುವವರ ಸಂಖ್ಯೆ ಹೆಚ್ಚಾಗಿದ್ದು, ಬೇಡಿಕೆಯೂ ಕೂಡಾ ಹೆಚ್ಚಾಗಿದೆ.
ಬೆಳ್ಳಿಯ ದರದಲ್ಲಿ ಇಳಿಕೆ ಕಂಡುಬಂದಿದ್ದು, ಮಂಗಳವಾರ ಕೆ.ಜಿಗೆ 211 ರೂಪಾಯಿ ಕಡಿಮೆಯಾಗಿದ್ದು, ಈಗ ಬೆಳ್ಳಿಯ ಬೆಲೆ ಕೆ.ಜಿಗೆ 61,884 ರೂಪಾಯಿಗಳಷ್ಟಿದೆ ಹಾಗೂ ಬೇಡಿಕೆಯೂ ಕಡಿಮೆಯಾಗಿದೆ.