ETV Bharat / business

ಹೆಚ್ಚೆಚ್ಚು 'ನೋಟು ಮುದ್ರಿಸಿ' ಜನರಿಗೆ ಕೊಡುವಂತೆ ವಿಪಕ್ಷ, ವಿತ್ತ ತಜ್ಞರ ವಾದಕ್ಕೆ RBI ಕೊಟ್ಟಿತು ಶಾಕಿಂಗ್ ಉತ್ತರ - ಶಕ್ತಿಕಾಂತ್ ದಾಸ್​ ನೋಟು ಮುದ್ರಣ

'ನೋಟುಗಳ ಮುದ್ರಣಕ್ಕೆ ಸಂಬಂಧಿಸಿದಂತೆ ಸೆಂಟ್ರಲ್ ಬ್ಯಾಂಕ್ ತಮ್ಮದೇ ಆದ ಮಾದರಿಗಳು ಮತ್ತು ಮೌಲ್ಯಮಾಪನ ಹೊಂದಿದೆ. ಆರ್‌ಬಿಐ ಹಲವು ಸಂಕೀರ್ಣ ಅಂಶಗಳನ್ನು ಆಧರಿಸಿ ಆ ನಿರ್ಧಾರ ತೆಗೆದುಕೊಳ್ಳುತ್ತದೆ. ಇದು ಹಣಕಾಸಿನ ಸ್ಥಿರತೆ, ಹಣದುಬ್ಬರದ ಮಟ್ಟ, ವಿನಿಮಯ ದರಗಳ ಸ್ಥಿರತೆಯಂತಹ ಇತ್ಯಾದಿಗಳಿಗೆ ಸಂಬಂಧಿಸಿದೆ ಅಂಶವಾಗಿದೆ' ಎಂದು ಆರ್​​ಬಿಐ ಗವರ್ನರ್​ ಸ್ಪಷ್ಟನೆ ಕೊಟ್ಟಿದ್ದಾರೆ.

Notes
Notes
author img

By

Published : Jun 4, 2021, 3:08 PM IST

ಮುಂಬೈ: ನೋಟು ಮುದ್ರಣ ಮಾಡಿ ಜನರ ಕೈಗೆ ತಲುಪಿಸುವಂತೆ ವಿರೋಧ ಪಕ್ಷದ ಮುಖಂಡರು, ವಿತ್ತ ತಜ್ಞರು, ರಾಜಕೀಯ ಮುಖಂಡರು, ಬ್ಯಾಂಕ್​ರಗಳು ನೀಡಿದ ಸಲಹೆಗೆ ಕೇಂದ್ರೀಯ ಬ್ಯಾಂಕ್​ ತನ್ನ ಸ್ಪಷ್ಟನೆ ಹೊರಹಾಕಿದೆ.

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಗವರ್ನರ್ ಶಕ್ತಿಕಾಂತ ದಾಸ್, ಈ ಸಮಯದಲ್ಲಿ ಇದೊಂದು ಬಹಳ ಕಾಲ್ಪನಿಕ ಪ್ರಶ್ನೆಯಾಗಿದೆ ಎಂದು ಪ್ರತಿಕ್ರಿಯಿಸಿದ್ದಾರೆ.

ಆರ್ಥಿಕತೆ ಬೆಂಬಲಿಸಲು ಕೊರತೆಯ ಹಣಕಾಸು ಮಾರ್ಗ ಆಯ್ದುಕೊಳ್ಳುವ ಬಗ್ಗೆ ಆರ್‌ಬಿಐನ ಅಭಿಪ್ರಾಯಗಳ ಕುರಿತು ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ದಾಸ್, 'ನೋಟುಗಳ ಮುದ್ರಣಕ್ಕೆ ಸಂಬಂಧಿಸಿದಂತೆ ಸೆಂಟ್ರಲ್ ಬ್ಯಾಂಕ್ ತಮ್ಮದೇ ಆದ ಮಾದರಿಗಳು ಮತ್ತು ಮೌಲ್ಯಮಾಪನ ಹೊಂದಿದೆ. ಆರ್‌ಬಿಐ ಹಲವು ಸಂಕೀರ್ಣ ಅಂಶಗಳನ್ನು ಆಧರಿಸಿ ಆ ನಿರ್ಧಾರ ತೆಗೆದುಕೊಳ್ಳುತ್ತದೆ. ಇದು ಹಣಕಾಸಿನ ಸ್ಥಿರತೆ, ಹಣದುಬ್ಬರದ ಮಟ್ಟ, ವಿನಿಮಯ ದರಗಳ ಸ್ಥಿರತೆಯಂತಹ ಇತ್ಯಾದಿಗಳಿಗೆ ಸಂಬಂಧಿಸಿದೆ ಅಂಶವಾಗಿದೆ' ಎಂದು ಸ್ಪಷ್ಟನೆ ಕೊಟ್ಟಿದ್ದಾರೆ.

ಓದಿ: ವಿದ್ಯುತ್, ಸಿಲಿಂಡರ್, ಟೆಲಿಫೋನ್​, ನೀರಿನ ಬಿಲ್ ಪಾವತಿಯ 'ನ್ಯಾಚ್' ಡಿಜಿಟಲ್​ ಸಿಸ್ಟಂ 24x7 ಲಭ್ಯ

ಹೊರನಡೆಯುತ್ತಿರುವ ಸಿಐಐ ಅಧ್ಯಕ್ಷ ಮತ್ತು ಖಾಸಗಿ ವಲಯದ ಕೊಟಕ್ ಬ್ಯಾಂಕಿನ ಮುಖ್ಯಸ್ಥ ಉದಯ್ ಕೊಟಕ್ ಇತ್ತೀಚೆಗೆ, 'ಸರ್ಕಾರದ ಬ್ಯಾಲೆನ್ಸ್ ಶೀಟ್ ವಿಸ್ತರಿಸುವ ಸಮಯ ಬಂದೊದಗಿದೆ. ಇದನ್ನು ಆರ್​ಬಿಐ ಬೆಂಬಲಿಸುತ್ತದೆ. ವಿತ್ತೀಯ ವಿಸ್ತರಣೆ ಅಥವಾ ಹಣದ ಮುದ್ರಣಕ್ಕೆ ಮುಂದಾಗಬೇಕಿದ' ಎಂದು ಹೇಳಿದ್ದರು.

ನೊಬೆಲ್ ಪ್ರಶಸ್ತಿ ವಿಜೇತ ಅಭಿಜಿತ್ ಬ್ಯಾನರ್ಜಿ ಸಹ, ಭಾರತವು ಹಣವನ್ನು ಮುದ್ರಿಸಬೇಕು ಮತ್ತು ಹಣವನ್ನು ನೇರವಾಗಿ ಸಮಾಜದ ಬಡ ವರ್ಗಗಳಿಗೆ ವರ್ಗಾಯಿಸಬೇಕು ಎಂದು ಪ್ರತಿಪಾದಿಸಿದ್ದರು.

ಮಾಜಿ ಹಣಕಾಸು ಸಚಿವ ಪಿ.ಚಿದಂಬರಂ ಅವರು ಹಣವನ್ನು ಎರವಲು ಪಡೆಯಬೇಕು ಅಥವಾ ನೋಟುಗಳನ್ನು ಮುದ್ರಿಸಬೇಕು. ಹಣಕಾಸಿನ ಕೊರತೆ ಹೆಚ್ಚುತ್ತಿರುವ ಬಗ್ಗೆ ಹೆಚ್ಚು ಚಿಂತಿಸದೆ ಆಕ್ರಮಣಕಾರಿಯಾಗಿ ಖರ್ಚು ಮಾಡಬೇಕೆಂದು ಸರ್ಕಾರವನ್ನು ಒತ್ತಾಯಿಸಿದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.