ಮುಂಬೈ: ಜಾಗತಿಕ ಮಾರುಕಟ್ಟೆಯಲ್ಲಿ ಸಕಾರಾತ್ಮಕ ಪ್ರವೃತ್ತಿಯ ಮಧ್ಯೆ ಇಂಡೆಕ್ಸ್ ಮೇಜರ್ಗಳಾದ ಎಚ್‌ಡಿಎಫ್‌ಸಿ ಟ್ವಿನ್ಸ್, ಕೊಟಾಕ್ ಬ್ಯಾಂಕ್ ಮತ್ತು ರಿಲಯನ್ಸ್ ಇಂಡಸ್ಟ್ರೀಸ್ ಗಳಿಕೆಗಳಿಂದಾಗಿ ಮಂಗಳವಾರದ ಆರಂಭಿಕ ವಹಿವಾಟಿನಲ್ಲಿ ಸೆನ್ಸೆಕ್ಸ್ ಹೊಸ ದಾಖಲೆಯ ಗರಿಷ್ಠ ಮಟ್ಟ ತಲುಪಿದೆ.
ಆರಂಭಿಕ ವಹಿವಾಟಿನಲ್ಲಿ ಜೀವಿತಾವಧಿಯ ಗರಿಷ್ಠ 52,516.76 ಅಂಕಗಳಿಗೆ ತಲುಪಿದ ನಂತರ, 30 ಷೇರುಗಳ ಬಿಎಸ್‌ಇ ಸೂಚ್ಯಂಕವು 322.33 ಅಂಕ ಅಥವಾ ಶೇ 0.62ರಷ್ಟು ಹೆಚ್ಚಳವಾಗಿ 52,476.46 ಅಂಕಗಳಲ್ಲಿ ವಹಿವಾಟು ನಿರತವಾಗಿದೆ.
ರಾಷ್ಟ್ರೀಯ ಷೇರು ಸೂಚ್ಯಂಕ ನಿಫ್ಟಿ 108.40 ಅಂಕ ಅಥವಾ ಶೇ 0.71ರಷ್ಟು ಏರಿಕೆ ಕಂಡು15,423.10ಕ್ಕೆ ತಲುಪಿದೆ. ಸೆನ್ಸೆಕ್ಸ್ ಪ್ಯಾಕ್‌ನಲ್ಲಿ ಒಎನ್‌ಜಿಸಿ ಶೇ 4ರಷ್ಟು ಏರಿಕೆ ಕಂಡಿದ್ದು, ಇಂಡಸ್ಇಂಡ್ ಬ್ಯಾಂಕ್, ಕೊಟಾಕ್ ಬ್ಯಾಂಕ್, ಪವರ್‌ಗ್ರಿಡ್, ಎಸ್‌ಬಿಐ ಮತ್ತು ಟೆಕ್ ಮಹೀಂದ್ರಾ ನಂತರದ ಸ್ಥಾನದಲ್ಲಿವೆ.
ಇದನ್ನೂ ಓದಿ: 'ವಿಶ್ವ ಗುರು'ವಿನ ಹಾದಿಯಲ್ಲಿ ಭಾರತ: 200 ಭಾರತೀಯರು 15 ರಾಷ್ಟ್ರಗಳ ನಾಯಕತ್ವದ ಹುದ್ದೆ ಅಲಂಕಾರ!
ಮತ್ತೊಂದೆಡೆ ಬಜಾಜ್ ಫಿನ್‌ಸರ್ವ್, ಆಕ್ಸಿಸ್ ಬ್ಯಾಂಕ್, ಬಜಾಜ್ ಫೈನಾನ್ಸ್ ಮತ್ತು ನೆಸ್ಲೆ ಇಂಡಿಯಾ ಬೆಳಗಿನ ಜಾವದ ಟಾಪ್ ಲೂಸರ್ಗಳಾಗಿವೆ. ಹಿಂದಿನ ವಹಿವಾಟಿನಲ್ಲಿ ಸೆನ್ಸೆಕ್ಸ್ ತನ್ನ ಹೊಸ ಗರಿಷ್ಠ ಮುಕ್ತಾಯದ 52,154.13 ಅಂಕಗಳಲ್ಲಿ ಕೊನೆಗೊಂಡರೇ ನಿಫ್ಟಿ 15,314.70 ಅಂಕಗಳಲ್ಲಿ ಅಂತ್ಯವಾಗಿತ್ತು.
ಏಷ್ಯಾದ ಇತರೆಡೆಗಳಲ್ಲಿ ಹಾಂಗ್ ಕಾಂಗ್, ಟೋಕಿಯೊ ಮತ್ತು ಸಿಯೋಲ್‌ನಲ್ಲಿನ ಪೇಟೆಗಳು ಮಧ್ಯಂತರ ವ್ಯವಹಾರಗಳಲ್ಲಿ ಸಕಾರಾತ್ಮಕ ವಹಿವಾಟು ನಡೆಸುತ್ತಿವೆ. ಜಾಗತಿಕ ತೈಲ ಮಾನದಂಡವಾದ ಬ್ರೆಂಟ್ ಕಚ್ಚಾ ದರ ಬ್ಯಾರೆಲ್‌ಗೆ ಶೇ 0.62ರಷ್ಟು ಹೆಚ್ಚಳವಾಗಿ 63.69 ಡಾಲರ್‌ನಲ್ಲಿ ವಹಿವಾಟು ನಡೆಸುತ್ತಿದೆ.