ಮುಂಬೈ: ಜಾಗತಿಕ ಮಾರುಕಟ್ಟೆಯಲ್ಲಿ ಸಕಾರಾತ್ಮಕ ಟ್ರೆಂಡ್ ಇದ್ದು, ಐಸಿಐಸಿಐ ಬ್ಯಾಂಕ್, ಎಚ್‌ಡಿಎಫ್‌ಸಿ ಬ್ಯಾಂಕ್ ಮತ್ತು ಎಂ ಆಂಡ್ ಎಂ ಗಳ ಲಾಭದಿಂದಾಗಿ ಸೆಕ್ಸೆಕ್ಸ್ 600 ಪಾಯಿಂಟ್ನಲ್ಲಿ ಆರಂಭಿಕ ವಹಿವಾಟು ನಡೆಸುತ್ತಿದೆ.
30 ಷೇರುಗಳ ಬಿಎಸ್‌ಇ ಸೂಚ್ಯಂಕವು 668.36 ಪಾಯಿಂಟ್‌ಗಳಲ್ಲಿ ಶೇ 1.32ರಷ್ಟು ಹೆಚ್ಚಿನ ವಹಿವಾಟು ನಡೆಸಿದ್ದು, ದಿನದ ದಾಖಲೆಯ ಗರಿಷ್ಠ 51,399.99ಕ್ಕೆ ತಲುಪಿದೆ.
ಎನ್‌ಎಸ್‌ಇ ನಿಫ್ಟಿ 192.55 ಪಾಯಿಂಟ್‌ಗಳಲ್ಲಿ ಶೇಕಡಾ 1.29ರಷ್ಟು ಏರಿಕೆ ಕಂಡಿದ್ದು, ಇಲ್ಲಿವರೆಗಿನ ಗರಿಷ್ಠ 15,116.80ಕ್ಕೆ ತಲುಪಿದೆ.
ಮಹೀಂದ್ರಾ ಮತ್ತು ಮಹೀಂದ್ರಾ (ಎಂ ಅಂಡ್ ಎಂ) ಶೇ. 10ರಷ್ಟು ಏರಿಕೆ ಕಂಡಿದ್ದು, ಆಕ್ಸಿಸ್ ಬ್ಯಾಂಕ್, ಐಸಿಐಸಿಐ ಬ್ಯಾಂಕ್, ಇಂಡಸ್ಇಂಡ್ ಬ್ಯಾಂಕ್, ಎಸ್‌ಬಿಐ ಮತ್ತು ಬಜಾಜ್ ಫೈನಾನ್ಸ್ ನಂತರದ ಸ್ಥಾನಗಳಲ್ಲಿವೆ. ಎನ್‌ಟಿಪಿಸಿ ಮತ್ತು ಬಜಾಜ್ ಆಟೋ ಹಿಂದುಳಿದಿವೆ.