ಮುಂಬೈ: ದೇಶಿಯ ಷೇರುಪೇಟೆಯ ಆರಂಭದಲ್ಲೇ ಗೂಳಿಯ ಓಟ ಹಿನ್ನೆಲೆಯಲ್ಲಿ ಸೆನ್ಸೆಕ್ಸ್ 350 ಅಂಕಗಳ ಏರಿಕೆ ಬಳಿಕ 59,161ಕ್ಕೆ ತಲುಪಿದರೆ, ನಿಫ್ಟಿ 94.75 ಅಂಕಗಳ ಜಿಗಿತದ ಬಳಿಕ 17,606ರಲ್ಲಿ ವಹಿವಾಟು ನಡೆಸಿವೆ.
ಪವರ್ ಗ್ರೀಡ್ ಲಾಭ ಪಡೆದ ಕಂಪನಿಗಳ ಪೈಕಿ ಅಗ್ರ ಸ್ಥಾನವನ್ನು ಪಡೆಯಿತು. ಈ ಕಂಪನಿ ತನ್ನ ಷೇರುಗಳಲ್ಲಿ ಶೇ.3 ರಷ್ಟು ಲಾಭ ಮಾಡಿಕೊಂಡಿತು. ಐಸಿಐಸಿಐ, ಹೆಚ್‌ಡಿಎಫ್‌ಸಿ, ಆಕ್ಸಿಸ್ ಬ್ಯಾಂಕ್, ಎನ್‌ಟಿಪಿಸಿ, ಟಾಟಾ ಸ್ಟೀಲ್, ಅಲ್ಟ್ರಾಟೆಕ್ ಸಿಮೆಂಟ್, ಸನ್ ಫಾರ್ಮಾ ಹಾಗೂ ಟೈಟಾನ್ ಲಾಭಗಳಿಸಿದ ಪ್ರಮುಖ ಸಂಸ್ಥೆಗಳು. ಮತ್ತೊಂದೆಡೆ ಬಜಾಬ್ ಫೈನಾನ್ಸ್ ಮತ್ತು ನೆಸ್ಲೆ ಇಂಡಿಯಾ ನಷ್ಟದಲ್ಲಿದ್ದವು.
ಈ ವಾರ ಯುಎಸ್ ಫೆಡ್, ಇಸಿಬಿ, ಬ್ಯಾಂಕ್ ಆಫ್ ಇಂಗ್ಲೆಂಡ್ ಹಾಗೂ ಬ್ಯಾಂಕ್ ಆಫ್ ಜಪಾನ್‌ನ ಬಡ್ಡಿದರಗಳು ಪ್ರಕಟಿಸುವ ನಿರೀಕ್ಷೆ ಇರುವುದರಿಂದ ಇದು ಮಾರುಕಟ್ಟೆ ಮೇಲೆ ಪರಿಣಾಮ ಬೀರಿದೆ ಎಂದು ಜಿಯೋಜಿತ್ ಫೈನಾನ್ಷಿಯಲ್ ಸರ್ವೀಸಸ್‌ನಲ್ಲಿ ಮುಖ್ಯ ಹೂಡಿಕೆ ತಂತ್ರಜ್ಞ ವಿಕೆ ವಿಜಯಕುಮಾರ್ ಹೇಳಿದರು.
ಏಷ್ಯಾದ ಇತರೆ ಮಾರುಕಟ್ಟೆಗಳಾದ ಶಾಂಘೈ, ಟೋಕಿಯೊ, ಸಿಯೋಲ್ ಮತ್ತು ಹಾಂಗ್ ಕಾಂಗ್‌ನಲ್ಲಿನ ಷೇರುಗಳು ಗಮನಾರ್ಹ ಲಾಭದೊಂದಿಗೆ ವಹಿವಾಟು ನಡೆಸುತ್ತಿವೆ. ಜಾಗತಿಕ ಮಾರುಕಟ್ಟೆಯಲ್ಲಿ ಡಾಲರ್ ಎದುರು ರೂಪಾಯಿ ಮೌಲ್ಯ 15 ಪೈಸೆ ಏರಿಕೆಯಾಗಿ 75.63ಕ್ಕೆ ವಹಿವಾಟು ನಡೆಸುತ್ತಿದೆ. ಜಾಗತಿಕ ತೈಲ ಮಾನದಂಡ ಬ್ರೆಂಟ್ ಕಚ್ಚಾ ತೈಲ ಪ್ರತಿ ಬ್ಯಾರೆಲ್‌ಗೆ 1.30 ರಷ್ಟು ಏರಿಕೆಯಾಗಿ 76.13 ಡಾಲರ್‌ಗೆ ತಲುಪಿದೆ.
ದಿನದ ಆರಂಭದಲ್ಲಿ ಏರಿಕೆಯಲ್ಲಿದ್ದ ಗೂಳಿ ಓಟಕ್ಕೆ ಕರಡಿ ಬ್ರೇಕ್ ಹಾಕಿದ್ದು, ಸೆನ್ಸೆಕ್ಸ್ ಪ್ರಸ್ತುತ 318 ಅಂಕಗಳ ಕುಸಿತ ಕಂಡು 58,383 ಹಾಗೂ ರಾಷ್ಟ್ರೀಯ ಸಂವೇದಿ ಸೂಚ್ಯಂಕ ನಿಫ್ಟಿ 89 ಅಂಕಗಳ ನಷ್ಟದೊಂದಿಗೆ 17,396ರಲ್ಲಿ ವಹಿವಾಟು ನಡೆಸುತ್ತಿವೆ.
ಇದನ್ನೂ ಓದಿ: ನಿಮ್ಮ ಮಕ್ಕಳ ಉಜ್ವಲ ಭವಿಷ್ಯಕ್ಕಾಗಿ ಯೋಜನೆಗಳು ಹೇಗಿರಬೇಕು ಗೊತ್ತಾ..?