ETV Bharat / business

ಆರಂಭಿಕ ವಹಿವಾಟಿನಲ್ಲಿ 100 ಅಂಕಕ್ಕೆ ಜಿಗಿದ ಸೆನ್ಸೆಕ್ಸ್ - ಸೆನ್ಸೆಕ್ಸ್ ಪ್ಯಾಕ್‌ನಲ್ಲಿ ಬಜಾಜ್

30 ಷೇರುಗಳ ಬಿಎಸ್‌ಇ ಸೂಚ್ಯಂಕ 120.03 ಪಾಯಿಂಟ್‌ ಅಥವಾ 0.27 ರಷ್ಟು ಹೆಚ್ಚಳವಾಗಿ 43,948.13ಕ್ಕೆ ವಹಿವಾಟು ನಡೆಸುತ್ತಿದೆ. ಅಂತೆಯೇ ಎನ್‌ಎಸ್‌ಇ ನಿಫ್ಟಿ 37.70 ಪಾಯಿಂಟ್‌ ಅಥವಾ ಶೇ. 0.29 ರಷ್ಟು ಏರಿಕೆ ಕಂಡು 12,896.10ಕ್ಕೆ ತಲುಪಿದೆ.

ಸೆನ್ಸೆಕ್ಸ್
ಸೆನ್ಸೆಕ್ಸ್
author img

By

Published : Nov 26, 2020, 2:18 PM IST

ಮುಂಬೈ: ಈಕ್ವಿಟಿ ಬೆಂಚ್‌ಮಾರ್ಕ್ ಸೆನ್ಸೆಕ್ಸ್​ ಗುರುವಾರ ಆರಂಭಿಕ ವಹಿವಾಟಿನಲ್ಲಿ 100 ಪಾಯಿಂಟ್ಸ್​​‌ ಏರಿಕೆಯಾಗಿದ್ದು, ಸೂಚ್ಯಂಕಗಳಾದ ಎಚ್‌ಡಿಎಫ್‌ಸಿ ಟ್ವಿನ್​, ಎಲ್ ಅಂಡ್ ಟಿ ಮತ್ತು ರಿಲಯನ್ಸ್ ಇಂಡಸ್ಟ್ರೀಸ್ ​ಗಳಿಕೆಯಲ್ಲಿ ಜಾಗತಿಕ ಮಾರುಕಟ್ಟೆಯಲ್ಲಿ ಲಾಭವಾಗಿದ್ದು, ವಿದೇಶಿ ಒಳಹರಿವು ಹೆಚ್ಚಾದ ಹಿನ್ನೆಲೆ ಏರಿಕೆಯಾಗಿದೆ.

30 ಷೇರುಗಳ ಬಿಎಸ್‌ಇ ಸೂಚ್ಯಂಕ 120.03 ಪಾಯಿಂಟ್​ ಅಥವಾ 0.27 ರಷ್ಟು ಹೆಚ್ಚಳವಾಗಿ 43,948.13ಕ್ಕೆ ವಹಿವಾಟು ನಡೆಸುತ್ತಿದೆ. ಅಂತೆಯೇ ಎನ್‌ಎಸ್‌ಇ ನಿಫ್ಟಿ 37.70 ಪಾಯಿಂಟ್‌ ಅಥವಾ ಶೇ. 0.29 ರಷ್ಟು ಏರಿಕೆ ಕಂಡು 12,896.10ಕ್ಕೆ ತಲುಪಿದೆ.

ಸೆನ್ಸೆಕ್ಸ್ ಪ್ಯಾಕ್‌ನಲ್ಲಿ ಬಜಾಜ್ ಆಟೋ ಶೇ.2 ರಷ್ಟು ಏರಿಕೆ ಕಂಡಿದ್ದು, ಎಂ ಅಂಡ್ ಎಂ, ಎಲ್ ಆಂಡ್ ಟಿ, ಎಚ್‌ಡಿಎಫ್‌ಸಿ, ಭಾರತಿ ಏರ್‌ಟೆಲ್, ಸನ್ ಫಾರ್ಮಾ, ಅಲ್ಟ್ರಾಟೆಕ್ ಸಿಮೆಂಟ್, ಟೈಟಾನ್ ಮತ್ತು ಟಾಟಾ ಸ್ಟೀಲ್ ನಂತರದ ಸ್ಥಾನದಲ್ಲಿವೆ. ಮತ್ತೊಂದೆಡೆ, ಇಂಡಸ್ಇಂಡ್ ಬ್ಯಾಂಕ್, ಇನ್ಫೋಸಿಸ್, ಮಾರುತಿ ಮತ್ತು ಒಎನ್‌ಜಿಸಿ ಹಿಂದುಳಿದಿವೆ.

ಹಿಂದಿನ ಸೆಷನ್​ನಲ್ಲಿ ಸೆನ್ಸೆಕ್ಸ್ 694.92 ಪಾಯಿಂಟ್ ಅಥವಾ 1.56 ರಷ್ಟು ಕುಸಿದು, 43,828.10ಕ್ಕೆ ತಲುಪಿದೆ. ಆರಂಭಿಕ ಸೆಷನ್​ನಲ್ಲಿ ಸೂಚ್ಯಂಕವು ಜೀವಿತಾವಧಿಯ ಗರಿಷ್ಠ 44,825.37ಅನ್ನು ಮುಟ್ಟಿತ್ತು. ನಿಫ್ಟಿ ಕೂಡ ಅಂತ್ಯದೊಳಗೆ 196.75 ಪಾಯಿಂಟ್‌ಗಳನ್ನು ಗಳಿಸುವ ಮೂಲಕ ಅಥವಾ ಶೇ. 1.51 ರಷ್ಟು ಕುಸಿದು 12,858.40ಕ್ಕೆ ತಲುಪಿತು. ಇದ್ಕಕೂ ಮೊದಲು 13,145.85ರ ದಾಖಲೆಯ ಗರಿಷ್ಠ ಮೊತ್ತವನ್ನು ಗಳಿಸಿತ್ತು.

ಜಿಯೋಜಿತ್ ಫೈನಾನ್ಷಿಯಲ್​​ ಸರ್ವಿಸಸ್‌ನ ಮುಖ್ಯ ಹೂಡಿಕೆ ತಂತ್ರಜ್ಞ ವಿ.ಕೆ. ವಿಜಯಕುಮಾರ್ ಅವರ ಪ್ರಕಾರ, ಬುಧವಾರದ ಮಾರುಕಟ್ಟೆ ತಿದ್ದುಪಡಿ ಹೆಚ್ಚಿನ ಮಟ್ಟದಲ್ಲಿ ಮತ್ತು ಹೆಚ್ಚಿನ ಮೌಲ್ಯಮಾಪನಗಳಲ್ಲಿ ಮಾರುಕಟ್ಟೆಗಳ ದುರ್ಬಲತೆ ಸೂಚಿಸುತ್ತದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.