ಮುಂಬೈ: ಸತತ ಕುಸಿತದಿಂದ ಕಂಗೆಟ್ಟಿದ್ದ ಸೆನ್ಸೆಕ್ಸ್ ಇಂದು ತನ್ನ ಆರಂಭಿಕ ವಹಿವಾಟಿನಲ್ಲಿ 400 ಅಂಕಗಳ ಏರಿಕೆ ಕಾಣುವ ಮೂಲಕ 61 ಸಾವಿರ ಗಡಿ ದಾಟಿ ಉತ್ತಮ ಸಾಧನೆ ಮಾಡಿದೆ. ನಿಫ್ಟಿಯು ಕೂಡ 96.50 ಅಂಕಗಳ ಹೆಚ್ಚಳ ಕಾಣುವ ಮೂಲಕ 18152 ಅಂಕಗಳೊಂದಿಗೆ ವಹಿವಾಟು ನಡೆಸುತ್ತಿದೆ.
ಮುಂಬೈ ಷೇರು ಮಾರುಕಟ್ಟೆಯು ಬುಧವಾರದ ತನ್ನ ಮೊದಲ ಅವಧಿಯಲ್ಲಿ 221 ಅಂಕ ಗಳಿಸಿ 61,014.37 ಏರಿಕೆ ಕಂಡು ವಹಿವಾಟು ನಡೆಸಿದರೆ, ನಿಫ್ಟಿ 52.45 ಅಂಕ ಸಂಪಾದಿಸಿತು. ಬಳಿಕ ಏರುಗತಿಯನ್ನೇ ಕಾಪಾಡಿಕೊಂಡ ಸೆನ್ಸೆಕ್ಸ್ ಮೊದಲಾರ್ಧ ವಹಿವಾಟಿನ ಕೊನೆಯಲ್ಲಿ 400 ಅಂಕ ಪಡೆದುಕೊಂಡು 60,616 ಅಂಕದೊಂದಿಗೆ ವಹಿವಾಟು ಕಾಯ್ದುಕೊಂಡಿದೆ.
ಯಾರಿಗೆ ಲಾಭ?
ಮುಂಬೈ ಷೇರುಪೇಟೆಯಲ್ಲಾದ ಬದಲಾವಣೆಯಿಂದ ಅಲ್ಟ್ರಾಟೆಕ್ ಸಿಮೆಂಟ್, ಆರ್‌ಐಎಲ್, ಇಂಡಸ್‌ಇಂಡ್ ಬ್ಯಾಂಕ್, ಭಾರತಿ ಏರ್‌ಟೆಲ್, ಕೊಟಕ್ ಬ್ಯಾಂಕ್ ಮತ್ತು ಟಾಟಾ ಸ್ಟೀಲ್ ಕಂಪನಿಗಳು ಲಾಭ ಮಾಡಿಕೊಂಡಿವೆ. ಆದರೆ, ಟಿಸಿಎಸ್, ಡಾ.ರೆಡ್ಡೀಸ್, ಟೈಟಾನ್, ಮಾರುತಿ ಮತ್ತು ವಿಪ್ರೋ ಕಂಪನಿಗಳು ನಷ್ಟ ಹೊಂದಿವೆ.
ಇದನ್ನೂ ಓದಿ: ತಾಜಾ ಮಾಂಸ: ಪ್ರತಿ ಸೆಕೆಂಡ್ಗೆ ಒಂದು ಆರ್ಡರ್..! ಚಿಕನ್ ಪ್ರಿಯರೇ ಜಾಸ್ತಿಯಂತೆ!!