ನವದೆಹಲಿ: ಲಾಕ್ಡೌನ್ ನಿಷೇಧದ ಅವಧಿಯಲ್ಲಿ ಸಾಲಗಳ ಮೇಲಿನ ಬಡ್ಡಿಯನ್ನು ವಿರೋಧಿಸಿ ಸಲ್ಲಿಕೆಯಾಗಿರುವ ಅರ್ಜಿ ಸಂಬಂಧ ತಮ್ಮ ಪ್ರತಿಕ್ರಿಯೆ ನೀಡುವಂತೆ ಹಣಕಾಸು ಸಚಿವಾಲಯ ಹಾಗೂ ಭಾರತೀಯ ರಿಸರ್ವ್ ಬ್ಯಾಂಕ್ಗೆ (ಆರ್ಬಿಐ) ಸುಪ್ರೀಂಕೋರ್ಟ್ ಸೂಚಿಸಿದೆ.
ನ್ಯಾಯಮೂರ್ತಿಗಳಾದ ಅಶೋಕ್ ಭೂಷಣ್, ಸಂಜಯ್ ಕಿಶನ್ ಕೌಲ್ ಮತ್ತು ಎಂಆರ್ ಶಾ ಅವರನ್ನೊಳಗೊಂಡ ಕೋರ್ಟ್ ಪೀಠವು, ಆಗಸ್ಟ್ 31ರ ತನಕ ಆರ್ಬಿಐ ಪ್ರಕಟಿಸಿದ ನಿಷೇಧದ ಅವಧಿಯಲ್ಲಿ ಬ್ಯಾಂಕ್ಗಳು ಸಾಲಗಳ ಮೇಲಿನ ಬಡ್ಡಿದರ ವಿಧಿಸುವ ಬಗ್ಗೆ ತಮ್ಮ ಕೌಂಟರ್ ಅಫಿಡವಿಟ್ ಫೈಲ್ ಮಾಡುವಂತೆ ಹಣಕಾಸು ಸಚಿವಾಲಯ, ಆರ್ಬಿಐ ಮತ್ತು ಪೆಟೆನಿಸ್ಟ್ ಗಜೇಂದ್ರ ಶರ್ಮ ಅವರಿಗೆ ನಿರ್ದೇಶನ ನೀಡಿದೆ.
ಪಿಐಎಲ್‌ನಲ್ಲಿ ಎರಡು ಸಮಸ್ಯೆಗಳಿವೆ. ನಿಷೇಧದ ಅವಧಿಯಲ್ಲಿ ಬಡ್ಡಿ ಇಲ್ಲ ಮತ್ತು ಬಡ್ಡಿ ಮೇಲೆ ಬಡ್ಡಿ ವಿಧಿಸುತ್ತಿಲ್ಲ ಎಂದಿದೆ. ಒಂದು ಕಡೆ ನಿಷೇಧ ಒದಗಿಸುವುದು ಮತ್ತೊಂದು ಕಡೆ ಬಡ್ಡಿ ಏನೂ ಇಲ್ಲ ಎನ್ನುವುದು ಎಂದು ನ್ಯಾಯಾಲಯ ಆಕ್ಷೇಪ ವ್ಯಕ್ತಪಡಿಸಿದೆ.
ಅರ್ಜಿದಾರರ ಪರ ಹಾಜರಾದ ವಕೀಲ ರಾಜೀವ್ ದತ್ತಾ ಅವರು, 'ಬೆಕ್ಕು ಚೀಲದಿಂದ ಹೊರಗಿದೆ' ಎಂದು ಪ್ರತಿಕ್ರಿಯಿಸಿ, ಬ್ಯಾಂಕ್ಗಳ ಲಾಭದಾಯಕತೆಯನ್ನು ಪ್ರಧಾನವಾಗಿಸಿವೆ ಎಂದರು.
ಆರ್ಥಿಕ ಅಂಶಗಳು ಜನರ ಆರೋಗ್ಯಕ್ಕಿಂತ ಮುಖ್ಯವಲ್ಲ ಎಂದು ನ್ಯಾಯಮೂರ್ತಿ ಭೂಷಣ್ ತೀಕ್ಷಣವಾಗಿ ಪ್ರತಿಕ್ರಿಯಿಸಿದರು.
ಬ್ಯಾಂಕ್ಗಳು ಮಾತ್ರ ಸಂಪಾದಿಸಬೇಕೇ ಎಂದು ಕೇಳಿದ ದತ್ತಾ, ದೇಶದ ಉಳಿದ ವಲಯಗಳು ಕೆಳಗಿಳಿಯುತ್ತವೆ. ಈ ವಿಷಯದಲ್ಲಿ ವಿಚಾರಣೆಗೆ ಮತ್ತೊಂದು ದಿನಾಂಕ ನಿಗದಿಪಡಿಸುವಂತೆ ಅವರು ನ್ಯಾಯಾಲಯಕ್ಕೆ ಮನವಿ ಸಲ್ಲಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಸುಪ್ರೀಂಕೋರ್ಟ್, ಕೂಡಲೇ ಈ ಬಗ್ಗೆ ಪ್ರತಿಕ್ರಿಯೆ ನೀಡುವಂತೆ ಪ್ರತಿವಾದಿಗಳಿಗೆ ನಿರ್ದೇಶನ ನೀಡಿ ವಿಚಾರಣೆಯನ್ನು ಜೂನ್ 12ಕ್ಕೆ ಮುಂದೂಡಿದೆ.