ETV Bharat / business

ಲಾಕ್​ಡೌನ್​ನ ಕುರುಡು ಪ್ರಭಾವ.. ಒಂದೇ ವಾರದಲ್ಲಿ ಗ್ರಾಮೀಣ ನಿರುದ್ಯೋಗ ಡಬಲ್.. - ನಗರ ನಿರುದ್ಯೋಗ

ಗ್ರಾಮೀಣ ಲಾಕ್‌ಡೌನ್‌ಗಳು ಮತ್ತು ಕರ್ಫ್ಯೂಗಳು ಔಪಚಾರಿಕ ಮತ್ತು ಅನೌಪಚಾರಿಕ ಕ್ಷೇತ್ರಗಳಲ್ಲಿ ಜನರನ್ನು ನಿರುದ್ಯೋಗಿಗಳನ್ನಾಗಿ ಮಾಡಿವೆ. ಮೇ ತಿಂಗಳಲ್ಲಿ ಕೃಷಿ ಚಟುವಟಿಕೆಯ ವಿರಾಮವು ನಿರುದ್ಯೋಗವನ್ನು ಹೆಚ್ಚಿಸುತ್ತಿದೆ..

Unemployment
Unemployment
author img

By

Published : May 19, 2021, 7:20 PM IST

ನವದೆಹಲಿ : ಕೇಂದ್ರೀಯ ಮಾನಿಟರಿಂಗ್ ಇಂಡಿಯನ್ ಎಕಾನಮಿ (ಸಿಎಂಐಇ) ಬಿಡುಗಡೆ ಮಾಡಿದ ಅಂಕಿ-ಅಂಶಗಳ ಪ್ರಕಾರ, ಗ್ರಾಮೀಣ ಪ್ರದೇಶಗಳಲ್ಲಿನ ನಿರುದ್ಯೋಗವು ಮೇ 16ಕ್ಕೆ ಕೊನೆಗೊಂಡ ವಾರದಲ್ಲಿ ಶೇ. 14.34ಕ್ಕೆ ಏರಿದೆ.

ಗ್ರಾಮೀಣ ನಿರುದ್ಯೋಗವು 50 ವಾರಗಳ ಗರಿಷ್ಠ ಮಟ್ಟದಲ್ಲಿದ್ದು, ಒಂದು ವಾರದೊಳಗೆ ದ್ವಿಗುಣಗೊಂಡಿದೆ. ಕೊನೆಯ ಬಾರಿಗೆ ಗರಿಷ್ಠ ಮಟ್ಟವನ್ನು ಮುಟ್ಟಿದ್ದು, ಒಂದು ವರ್ಷದ ಹಿಂದೆ 2020ರ ಜೂನ್ 7ಕ್ಕೆ ಕೊನೆಗೊಂಡ ವಾರದಲ್ಲಿ.

ನಗರ ನಿರುದ್ಯೋಗವು ಒಂದು ವಾರದ ಹಿಂದೆ ಶೇ. 3 ಅಂಕಗಳಷ್ಟು ಹೆಚ್ಚಳವಾಗಿ 14.71ಕ್ಕೆ ಏರಿದೆ. ಆದರೆ, ರಾಷ್ಟ್ರೀಯ ನಿರುದ್ಯೋಗ ದರವು ಶೇ. 8.67ರಿಂದ ಶೇ. 14.45ಕ್ಕೆ ತಲುಪಿದೆ. ಇದು ಎರಡನೇ ಕೋವಿಡ್ ಅಲೆಯ ಮಧ್ಯೆ ತೀವ್ರವಾದ ಉದ್ಯೋಗ ಬಿಕ್ಕಟ್ಟು ಇದೆ ಎಂಬುದನ್ನು ಒತ್ತಿ ಹೇಳಿದೆ.

ಇದನ್ನೂ ಓದಿ: ಕೊರೊನಾ ಸಮರ.. ಗ್ರಾಮ ಪಂಚಾಯತ್​ಗಳಿಗೆ ₹ 8,923 ಕೋಟಿ ಬಿಡುಗಡೆ ಮಾಡಿದ ಕೇಂದ್ರ

ಸಿಎಂಐಇ ಪ್ರಕಾರ, ಉದ್ಯೋಗ ದರ ಮತ್ತು ಕಾರ್ಮಿಕ ಬಲದ ಭಾಗವಹಿಸುವಿಕೆಯ ಪ್ರಮಾಣ ಗಮನಾರ್ಹವಾಗಿ ಕಡಿಮೆಯಾಗಿದೆ. ಅಖಿಲ ಭಾರತ ಮಟ್ಟದಲ್ಲ, ಉದ್ಯೋಗದ ಪ್ರಮಾಣವು ಮೇ 16ಕ್ಕೆ ಕೊನೆಗೊಂಡ ವಾರದಲ್ಲಿ ಶೇ. 34.67ಕ್ಕೆ ಇಳಿದಿದೆ.

ಲಾಕ್‌ಡೌನ್‌ಗಳಿಂದಾಗಿ ನಗರ ಪ್ರದೇಶಗಳಲ್ಲಿ ಹೆಚ್ಚಿದ ಸೋಂಕಿನ ಪ್ರಮಾಣ ಮತ್ತು ಉದ್ಯೋಗಾವಕಾಶಗಳ ಕೊರತೆಯಿಂದಾಗಿ ಜನರು ತಮ್ಮ ಹಳ್ಳಿಗಳಿಗೆ ತೆರಳಬೇಕಾಯಿತು. ಆದರೆ, ಗ್ರಾಮೀಣ ಪ್ರದೇಶಗಳಲ್ಲಿ ಸಾಕಷ್ಟು ಆದಾಯದ ಅವಕಾಶಗಳಿಲ್ಲ ಎಂದು ಅರ್ಥಶಾಸ್ತ್ರಜ್ಞರು ಹೇಳಿದ್ದಾರೆ.

ಗ್ರಾಮೀಣ ಲಾಕ್‌ಡೌನ್‌ಗಳು ಮತ್ತು ಕರ್ಫ್ಯೂಗಳು ಔಪಚಾರಿಕ ಮತ್ತು ಅನೌಪಚಾರಿಕ ಕ್ಷೇತ್ರಗಳಲ್ಲಿ ಜನರನ್ನು ನಿರುದ್ಯೋಗಿಗಳನ್ನಾಗಿ ಮಾಡಿವೆ. ಮೇ ತಿಂಗಳಲ್ಲಿ ಕೃಷಿ ಚಟುವಟಿಕೆಯ ವಿರಾಮವು ನಿರುದ್ಯೋಗವನ್ನು ಹೆಚ್ಚಿಸುತ್ತಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.