ನವದೆಹಲಿ: ಆಟೋ ಬಿಡಿಭಾಗಗಳ ತಯಾರಕ ಸಂಸ್ಥೆ ರೋಲೆಕ್ಸ್ ರಿಂಗ್ಸ್ ಲಿಮಿಟೆಡ್ ಐಪಿಒ ಇಂದು ಅಧಿಕೃತವಾಗಿ ಷೇರುಪೇಟೆಯಲ್ಲಿ ಲಿಸ್ಟ್ ಆಗಿದ್ದು, ಲಿಸ್ಟ್ ಆದ ಮೊದಲ ದಿನವೇ ಭರ್ಜರಿ ವಹಿವಾಟು ನಡೆಸಿದೆ.
ಷೇರುಪೇಟೆ ಪ್ರವೇಶಿಸಿದ ರೋಲೆಕ್ಸ್ ರಿಂಗ್ಸ್ ಲಿಮಿಟೆಡ್ ಕಂಪನಿ ಸಾವರ್ಜನಿಕರಿಂದ 880- 900 ರೂ.ಗೆ ಷೇರುದಾರರಿಗೆ ಆಫರ್ ಮಾಡಿತ್ತು. ಇಂದು ಕಂಪನಿ ಲಿಸ್ಟ್ ಆಗಿದ್ದು, ಇಂದಿನ ಆರಂಭಿಕ ವ್ಯವಹಾರದಲ್ಲಿ 1249 ರೂಗೆ ಲಿಸ್ಟ್ ಆಗಿತ್ತು. ದಿನದ ವಹಿವಾಟು ಆರಂಭಿಸಿದ ರೋಲೆಕ್ಸ್ ರಿಂಗ್ಸ್ ಲಿಮಿಟೆಡ್ ಷೇರು, ಶೇ 39ರಷ್ಟು ಜಿಗಿತ ಕಾಣುವ ಮೂಲಕ 1264 ರೂ ವರೆಗೆ ವಹಿವಾಟು ನಡೆಸಿತು.
ಗುಜರಾತ್ನ ಈ ಕಂಪನಿ 731 ಕೋಟಿ ರೂ.ಗಾಗಿ ಐಪಿಒ ಬಿಡುಗಡೆ ಮಾಡಿತ್ತು. ಸುಮಾರು 880-990 ರೂಗೆ ಬಿಡ್ ನಿಗದಿ ಮಾಡಿತ್ತು. ಸುಮಾರು 130 ಪಟ್ಟಿಗೂ ಹೆಚ್ಚು ಬಿಡ್ ಮಾಡುವ ಮೂಲಕ ಕಂಪನಿ ಬಂಡವಾಳ 3090 ಕೋಟಿಗೆ ಏರಿಕೆ ಆಗಿದೆ.